ಶಿವಮೊಗ್ಗ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶಿವಮೊಗ್ಗದ ತುಂಗಾ ಜಲಾಶಯದಲ್ಲಿ ನೀರಿನ ಒಳಹರಿವು ಎಷ್ಟಿದೆ ? 

ಹಂಚಿಕೊಳ್ಳಿ
WhatsApp Facebook X Telegram
ತುಂಗಾ ಜಲಾಶಯದ ಚಿತ್ರ Tunga Dam
ತುಂಗಾ ಜಲಾಶಯದ ಚಿತ್ರ Tunga Dam

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಗಾಜನೂರಿನ ತುಂಗಾ ಜಲಾಶಯದಲ್ಲಿ ಈ ಬಾರಿ ನೀರಿನ ಮಟ್ಟ ಗರಿಷ್ಠ ಮಟ್ಟದಲ್ಲಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ನದಿಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ.

ಕಳೆದ ವರ್ಷ ಇದೇ ದಿನಾಂಕದಂದು ಜಲಾಶಯಕ್ಕೆ ಸುಮಾರು 8,042 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಒಳಹರಿವು ಅರ್ಧಕ್ಕಿಂತಲೂ ತಗ್ಗಿದ್ದು, ಕೇವಲ 3,616 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಅದೇ ರೀತಿ ಕಳೆದ ವರ್ಷ ನದಿಗೆ 6,458 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದರೆ, ಈ ಬಾರಿ ಒಳಹರಿವು ಕಡಿಮೆಯಿರುವ ಕಾರಣ ಹೊರಹರಿವಿನ ಪ್ರಮಾಣವೂ 3,616 ಕ್ಯೂಸೆಕ್‌ಗೆ ಸೀಮಿತವಾಗಿದೆ .

ಒಳಹರಿವಿನಲ್ಲಿ ವ್ಯತ್ಯಾಸವಿದ್ದರೂ ಜಲಾಶಯದ ಸಂಗ್ರಹ ಮಟ್ಟದಲ್ಲಿ ಯಾವುದೇ ಕೊರತೆಯಾಗಿಲ್ಲ. ಕಳೆದ ವರ್ಷ 588.17 ಮೀಟರ್ ನೀರಿದ್ದು, 3.194 ಟಿ.ಎಂ.ಸಿ ಒಟ್ಟು ಸಂಗ್ರಹವಿತ್ತು. ಆದರೆ ಈ ಬಾರಿ ಜಲಾಶಯವು ತನ್ನ ಗರಿಷ್ಠ ಮಟ್ಟವಾದ 588.24 ಮೀಟರ್ ತಲುಪಿದ್ದು, 3.24 ಟಿ.ಎಂ.ಸಿ ನೀರು ಭರ್ತಿಯಾಗಿದೆ. ಪ್ರಸ್ತುತ ಜಲಾಶಯಕ್ಕೆ ಬರುತ್ತಿರುವ 3,616 ಕ್ಯೂಸೆಕ್ ನೀರನ್ನು ಸಂಪೂರ್ಣವಾಗಿ ತುಂಗಾ ನದಿ, ಯು.ಟಿ.ಪಿ. ನಾಲೆ, ಎಡದಂಡೆ-ಬಲದಂಡೆ ನಾಲೆಗಳು, ಕುಡಿಯುವ ನೀರು ರೂಪದಲ್ಲಿ ಹೊರಹರಿಸಲಾಗುತ್ತಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor