ಸಾಗರದಲ್ಲಿ ಮನೆ ಕೆಲಸದವನಿಂದಲೇ ಕಳ್ತನ! ಕೆಲವೇ ಗಂಟೆಗಳಲ್ಲಿ ಹಿಡಿದುಕೊಂಡು ಬಂದ ಪೊಲೀಸರು!

ಹಂಚಿಕೊಳ್ಳಿ
WhatsApp Facebook X Telegram
Sagara Theft Case Accused Traced Within Hours, ₹2.29 Lakh Cash Recovered
Sagara Theft Case Accused Traced Within Hours, ₹2.29 Lakh Cash Recovered

ಮಲೆನಾಡು ಟುಡೆ ಸುದ್ದಿ / ಸಾಗರ / ಮನೆಯ ಗಾಡ್ರೇಜ್‌ ಬೀರುವಿನಲ್ಲಿ ಇಟ್ಟಿದ್ದ ₹2.54 ಲಕ್ಷ ನಗದು ಹಣ ಕಳವು ಪ್ರಕರಣವನ್ನು ಸಾಗರ ಪೇಟೆ ಪೊಲೀಸರು ಕೆಲವೇ ಗಂಟೆಯಲ್ಲಿ ಇತ್ಯರ್ಥ ಮಾಡಿದ್ದಾರೆ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಾಗರ ಪೇಟೆ ಪೊಲೀಸರು, ಆರೋಪಿಯಿಂದ ₹2,29,900 ನಗದು ವಶಪಡಿಸಿಕೊಂಡಿದ್ದಾರೆ.

ಸಾಗರ ಪೇಟೆ ಪೊಲೀಸರ ಕಾರ್ಯಾಚರಣೆ

ಕಳೆದ ಸೆಪ್ಟೆಂಬರ್ 6ರಂದು ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ದೂರು ದಾಖಲಾಗಿತ್ತು, ಸಾಗರದ ಅಣಲೆಕೊಪ್ಪ ನಿವಾಸಿ ಉಮಾ ಎಂಬವರು ತಮ್ಮ ಮನೆಯ ಗಾಡ್ರೇಜ್‌ನಲ್ಲಿ ₹2,54,000 ಕ್ಯಾಶ್ ಇಟ್ಟಿದ್ದೆ. ಅದು ಕಳ್ತನವಾಗಿದೆ. ಮನೆಗೆ ಆಗಾಗ ಕೆಲಸಕ್ಕೆ ಬರುತ್ತಿದ್ದ ಪಾಂಡುರಂಗ ಎಂಬಾತನ ಮೇಲೆ ಅನುಮಾನ ಇದೆ ಎಂದು ಆರೋಪಿಸಿ ಕಂಪ್ಲೆಂಟ್ ಮಾಡಿದ್ರು. ಬಿಎನ್​ಎಸ್​ ಕಲಂ 305 ಮತ್ತು 306 ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯನ್ನ ಟ್ರೇಸ್ ಮಾಡಿ, ಸ್ಟೇಷನ್​ಗೆ ಎಳ್ಕೊಂಡು ಬಂದಿದ್ದಾರೆ. ಅಲ್ಲದೆ ಕಳುವಾದ ಕ್ಯಾಶ್ ವಸೂಲಿ ಮಾಡಿದ ಪೊಲೀಸರು, ನಾಲ್ಕು ಗಂಟೆಯಲ್ಲಿ ಕೇಸ್​ಗೆ ಇತ್ಯರ್ಥ ನೀಡಿದ್ದಾರೆ.

ಸಾಗರ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದಲ್ಲಿದ್ದ ಪಿಎಸ್ಐ ಶಾಂತರಾಜ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್‌ಸಿ ವಿಶ್ವನಾಥ ಮತ್ತು ಪಿಸಿ ನರೇಂದ್ರ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಆರೋಪಿ ಮೂಲತಃ ಮಹಾರಾಷ್ಟ್ರ ದ ರತ್ನಗಿರಿಯವನು ಎಂದು ತಿಳಿದುಬಂದಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor