ಶಿವಮೊಗ್ಗ ಶಿವಮೊಗ್ಗದಲ್ಲಿ ನಡೆದ 7ನೇ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರಿಪ್ಪನ್ಪೇಟೆಯ ವಿದ್ಯಾಸಂಘ ಶಿಶುಮಂದಿರದ ಲೋಕಲ್ ಕರಾಟೆ ತರಗತಿಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಸ್ಪರ್ಧೆಯ ಕಟಾ ವಿಭಾಗದಲ್ಲಿ ಭಾಗವಹಿಸಿದ್ದ ಕರಾಟೆ ಪಟುಗಳಾದ ಸರ್ಕಾರಿ ಪ್ರೌಢ ಶಾಲೆ ಹುಂಚದ ಕಟ್ಟೆ ಒಂಬನೆ ತರಗತಿ ವಿದ್ಯಾರ್ಥಿನಿ ಅಪೇಕ್ಷಾ ದ್ವಿತೀಯ ಸ್ಥಾನ ಗಳಿಸುವ ಮೂಲಕ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅತ್ಯಂತ ಸವಾಲಿನಿಂದ ಕೂಡಿದ್ದ ಈ ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಅದ್ಭುತ ಕೌಶಲ ಪ್ರದರ್ಶಿಸಿದ ಈ ಇಬ್ಬರು ವಿದ್ಯಾರ್ಥಿಗಳು, ತಮ್ಮ ಕರಾಟೆ ತರಗತಿಗೆ, ಹೆತ್ತ ಪೋಷಕರಿಗೆ ಹಾಗೂ ರಿಪ್ಪನ್ಪೇಟೆ ಊರಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಹೊಸನಗರ ತಾಲೂಕು ಕರಾಟೆ ಶಿಕ್ಷಕರ ಸಂಘ (ರಿ) ಹಾಗೂ ಐ ಕಿ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಇಂಡಿಯಾ ಅಭಿನಂದನೆಗಳನ್ನು ಸಲ್ಲಿಸಿದೆ.ಇದೇ ವೇಳೆ, ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರ ಸಾಧನೆಯ ಬೆನ್ನಲುಬಾಗಿ ನಿಂತು ಪ್ರೋತ್ಸಾಹಿಸಿದ ಪೋಷಕರಿಗೂ ಸಂಸ್ಥೆಯು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದು, ಮುಂದೆಯೂ ಇದೇ ರೀತಿಯ ಸಹಕಾರ ಮತ್ತು ಬೆಂಬಲ ಮುಂದುವರಿಯಲಿ ಎಂದು ಆಶಿಸಿದೆ.
