ತಂದೆ, ತಂಗಿಯನ್ನು ಕೊಂದಿದ್ದ ಅಪ್ಪನನ್ನ ಹತ್ಯೆ ಮಾಡಿದ ಮಗ! 55 ವರ್ಷದ ಸುಬ್ರಾಯನ ಸಾವಿಗೆ ಕಾರಣವಾಗಿದ್ದೇನು!?

ಹಂಚಿಕೊಳ್ಳಿ
WhatsApp Facebook X Telegram
Son Murders Father in Goragodu Village Near Tumari
Son Murders Father in Goragodu Village Near Tumari

Goragodu Village / ಮಲೆನಾಡು ಟುಡೆ ಸುದ್ದಿ / ತುಮರಿ / ಕರೂರು ಹೋಬಳಿ, ಕುದರೂರು ಹತ್ರ ಗೊರಗೋಡಲ್ಲಿ ಕೊಲೆ ನಡೆದ ವಿಚಾರವೊಂದು ತೀರಾ ತಡವಾಗಿ ಗೊತ್ತಾಗಿದೆ. ಇಲ್ಲಿನ ನಿವಾಸಿಯೊಬ್ಬ ತನ್ನ ಅಪ್ಪನನ್ನ ಕೊಂದು ಬಾವಿಗೆ ಹಾಕಿದ್ದ ವಿಚಾರ ಇದೀಗ ಚರ್ಚೆಯಾಗುತ್ತಿದೆ. ಕಳೆದ ಬುಧವಾರ ಈ ವಿಚಾರವಾಗಿ ಸ್ಪಾಟಿಗೆ ಹೋಗಿ ಸ್ವತಃ ಎಸ್​ಪಿ ನಿಖಿಲ್ ಬಿ ನೋಡಿಕೊಂಡು ಬಂದಿದ್ದಾರೆ.

ಪ್ರಕರಣದ ಬಗ್ಗೆ ವಿಚಾರಿಸಿದಾಗ ತಿಳಿದು ಬಂದಿದ್ದಿಷ್ಟು.. ಕೊಲೆಯಾದವ ಗ್ರಾಮದ ನಿವಾಸಿ ಸುಬ್ರಾಯ (55), ಈತನ ಮಗ ಜಯಂತ್ ನೇ ಕೊಲೆ ಮಾಡಿದವ. ಮಂಗಳವಾರ ಘಟನೆ ಬಗ್ಗೆ ಗೊತ್ತಾಗಿದೆ. ಸುಬ್ರಾಯ ಹೆಂಡ್ತಿ ಮಗನ ಜೊತೆಗೆ ಜಗಳವಾಗಡಿದ್ದಕ್ಕೆ ಜಯಂತ್ ಆತನನ್ನು ಹೊಡೆದು ಕೊಂದ ಎಂಬುದು ಆರೋಪ. ಅಲ್ಲದೆ, ವಿಚಾರ ಹೊರಗೆ ಬರುತ್ತೆ ಅಂತಾ ಗೊತ್ತಾಗಿ ಅಪ್ಪನ ಹೆಣವನ್ನು ತಮ್ಮ ಚಿಕ್ಕಪ್ಪನಿಗೆ ಸೇರಿದ ಜಮೀನಿನಲ್ಲಿರುವ ಬಾವಿಗೆ ಎಸೆದಿದ್ದ.

ಆದಾಗ್ಯು ವಿಚಾರ ಹೊರಗೆ ಬಂದಿದೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ಸತ್ಯ ಒಪ್ಪಿಕೊಂಡಿದ್ದಾನೆ. ಹತ್ಯೆಯಾದ ಸುಬ್ರಾಯ 2010ರಲ್ಲಿ ತನ್ನ ಸ್ವಂತ ತಂದೆ ಹಾಗೂ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ 14 ವರ್ಷ ಕಾಲ ಜೈಲು ಶಿಕ್ಷೆ ಅನುಭವಿಸಿ, 2023ರಲ್ಲಿ ಜೈಲಿನಿಂದ ಹೊರಬಂದಿದ್ದ. ಅಲ್ಲದೆ ತನ್ನ ಹೆಂಡತಿಯ ಕೊಲೆಗೆ ಯತ್ನಿಸಿದ್ದ. ಇದರಿಂಧ ಪುನಃ ಜೈಲಿಗೆ ಹೋಗಿದ್ದ. ಕಳೆದ ಮೇ ತಿಂಗಳಲ್ಲಿ ರಿಲೀಸ್​ ಆಗಿದ್ದ ಸುಬ್ರಾಯ ಬೇರೆ ಊರಲ್ಲಿದ್ದ. ಕೆಲದಿನಗಳ ಹಿಂದೆ ಊರಿಗೆ ಬಂದವನು ಹೆಂಡತಿ ಮಗನ ಜೊತೆಗೆ ಜಗಳ ತೆಗೆದಿದ್ದ. ಈ ವೇಳೆ ಕೊಲೆಯಾಗಿದ್ದಾನೆ. ಇದೀಗ ಕಾರ್ಗಲ್ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಆಗಿದ್ದು ತನಿಖೆ ನಡೆಯುತ್ತಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor