ನಕಲಿ ಸರ್ಕಾರಿ ದಾಖಲೆ-ಮೊಹರು ಸೃಷ್ಟಿಸಿ ವಂಚನೆ; ಶಿವಮೊಗ್ಗದ ANK ರಸ್ತೆಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಗೆ 5 ವರ್ಷಜೈಲು

ಹಂಚಿಕೊಳ್ಳಿ
WhatsApp Facebook X Telegram
Shivamogga Court Sentences

Shivamogga Court Sentences / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಕ್ರಮವಾಗಿ ನಕಲಿ ದಾಖಲೆ, ಸರ್ಕಾರಿ ಸ್ಟ್ಯಾಂಪ್ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಸ್ಟ್ಯಾಂಪ್​ನ್ನ ರೆಡಿಮಾಡಿ ಸರ್ಕಾರಿ ಕಚೇರಿ ಮತ್ತು ಬ್ಯಾಂಕ್‌ಗಳಿಗೆ ನೀಡಿ ವಂಚನೆ ನಡೆಸಿದ್ದ ಆರೋಪದ ಪ್ರಕರಣದಲ್ಲಿ ಶಿವಮೊಗ್ಗದ ಎಎನ್​ಕೆ ರಸ್ತೆಯ ಕಂಪ್ಯೂಟರ್​ ಶಾಪ್​ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯ 5 ವರ್ಷ ಕಶಿಕ್ಷೆ ಹಾಗೂ ₹17,000 ದಂಡ ವಿಧಿಸಿದೆ.

ಏನಿದು ಪ್ರಕರಣ

ಶಿವಮೊಗ್ಗ ನಗರದ ಎಎನ್‌ಕೆ ರಸ್ತೆಯಲ್ಲಿದ್ದ ಕಂಪ್ಯೂಟರ್ ಶಾಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಷ್ಣುಭಕ್ತ (39) ಶಿಕ್ಷೆಗೆ ಒಳಗಾದವರು. ಶಿವಮೊಗ್ಗ ಪೊಲೀಸ್ ಇಲಾಖೆಯು ಈ ಕುರಿತಾಗಿ ನೀಡಿರುವ ಪೊಲೀಸರ ಪ್ರಕಟಣೆಯ ಪ್ರಕಾರ, ವಿಷ್ಣುಭಕ್ತ ನಕಲಿ ದಾಖಲೆಗಳನ್ನು ಸೃಷ್ಟಿಸುವುದರ ಜೊತೆಗೆ ಸರ್ಕಾರಿ ಸ್ಟ್ಯಾಂಪ್ ಹಾಗೂ ಸರ್ಕಾರದ ವಿವಿಧ ಕಚೇರಿಗಳ ಮೊಹರುಗಳನ್ನು ಅಕ್ರಮವಾಗಿ ತಯಾರಿಸಿ, ಅವುಗಳನ್ನು ಸರ್ಕಾರದ ವಿವಿಧ ಕಚೇರಿಗಳು ಹಾಗೂ ಬ್ಯಾಂಕ್‌ಗಳಿಗೆ ನೀಡುತ್ತಿದ್ದರು. ಈ ಮೂಲಕ ಸರ್ಕಾರ ಮತ್ತು ಬ್ಯಾಂಕ್‌ಗಳಿಗೆ ನಷ್ಟ ಹಾಗೂ ವಂಚನೆ ಉಂಟುಮಾಡಿದ್ದರು ಎಂಬುದು ಚಾರ್ಜ್​ಶೀಟ್​ ಆಗಿತ್ತು.

ಜಯನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 255, 256, 258, 420, 465, 467 ಮತ್ತು 468ರ ಅನ್ವಯ ದಾಖಲಾಗಿದ್ದ ಕೇಸ್​ನಲ್ಲಿ ಇನ್​ವೆಸ್ಟಿಗೇಷನ್​ ಆಫಿಸರ್ ಅಂದಿನ​ ಶಿವಮೊಗ್ಗ ಡಿವೈಎಸ್‌ಪಿ ಪ್ರಶಾಂತ್ ಮುನ್ನೊಳಿ ಕೋರ್ಟ್​ಗೆ ಚಾರ್ಜ್​ಶೀಟ್ ಹಾಕಿದ್ದರು. ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.

ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಯಶವಂತ ಕುಮಾರ್ ನಿನ್ನೆದಿನ ಅಂದರೆ, 12-08-2026ರಂದು ತೀರ್ಪು ಪ್ರಕಟಿಸಿದ್ದು, ಆರೋಪಿತ ವಿಷ್ಣುಭಕ್ತನಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹17,000 ದಂಡ ವಿಧಿಸಿ ಆದೇಶಿಸಿದ್ದಾರೆ

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor