ಶಿವಮೊಗ್ಗ: ಅನವರತ ಫೌಂಡೇಶನ್ (ರಿ) ನಿಂದ ವಿವೇಕ ವಿದ್ಯಾ ನಿಧಿ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಾಗೂ ಶಾಸಕ ಎಸ್ ಎನ್ ಚನ್ನಬಸಪ್ಪ, ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 5,000 ಪ್ರೋತ್ಸಾಹಕ ವಿದ್ಯಾರ್ಥಿವೇತನ ನೀಡಲಾಗುವುದು ಎಂದರು.ಅರ್ಜಿಗಳು ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಲಭ್ಯವಿದ್ದು, ಆಗಸ್ಟ್ 30ರೊಳಗೆ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 5ರೊಳಗೆ ಸಲ್ಲಿಸಬೇಕೆಂದು ಕೋರಿದರು. ಹೆಚ್ಚಿನ ಮಾಹಿತಿಗಾಗಿ 9019901177 ಹಾಗೂ 70222 44434 ಸಂಖ್ಯೆಗಳನ್ನು ಸಂಪರ್ಕಿಸಬಹುದು.
Anavarata Foundation ಅರ್ಜಿಗೆ ಅಗತ್ಯವಿರುವ ದಾಖಲೆಗಳು
ವಿದ್ಯಾರ್ಥಿಯ ಆಧಾರ್ ಕಾರ್ಡ್ ಹಾಗೂ ಭಾವಚಿತ್ರ.
ಪ್ರಸ್ತುತ ಓದುತ್ತಿರುವ ಶಾಲೆ/ಕಾಲೇಜಿನ ಪ್ರವೇಶ ಪತ್ರ
ಪಾವತಿಸಲಾದ ಶುಲ್ಕದ ರಶೀದಿ (ಶುಲ್ಕ ₹30,000 ಮೀರಿರಬಾರದು).
ವೈಯಕ್ತಿಕ ಬ್ಯಾಂಕ್ ಖಾತೆಯ ವಿವರಗಳು
ಹಿಂದಿನ ವರ್ಷದ ಅಂಕಪಟ್ಟಿ (ಶೇಕಡಾ 50% ರಿಂದ 75% ರ ಒಳಗೆ ಅಂಕ ಹೊಂದಿರಬೇಕು).
ಪೋಷಕರ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ (ವಾರ್ಷಿಕ ಆದಾಯ 1,80,000 ಕ್ಕಿಂತ ಕಡಿಮೆಯಿರಬೇಕು).
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ ಪೋಷಕರ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್.ಸ್ಕಾಲರ್ಶಿಪ್ ಅರ್ಜಿಗಳನ್ನು ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಮಾತ್ರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
