ಸಾಗರದಲ್ಲಿ ಆಗಸ್ಟ್ 15 ರಂದು ಹೆಲ್ಪ್‌ಲೈನ್ ಟ್ರಸ್ಟ್‌ನ ಉಚಿತ ಆಂಬುಲೆನ್ಸ್ ಸೇವೆ ಲೋಕಾರ್ಪಣೆ!

ಹಂಚಿಕೊಳ್ಳಿ
WhatsApp Facebook X Telegram
ಸಾಗರ ಸುದ್ದಿ ಸಾಂದರ್ಭಿಕ ಚಿತ್ರ

Sagara Helpline Trust ಸಾಗರ : ಸಾಗರ ಹೆಲ್ಪ್‌ಲೈನ್ ಟ್ರಸ್ಟ್ (ರಿ) ವತಿಯಿಂದ ಸಾರ್ವಜನಿಕರ ಉಚಿತ ಸೇವೆಗಾಗಿ ನೂತನ ಆಂಬುಲೆನ್ಸ್ ಲೋಕಾರ್ಪಣೆ ಸಮಾರಂಭವನ್ನು ಆಗಸ್ಟ್ 15 ರಂದು ಬೆಳಿಗ್ಗೆ 11:30ಕ್ಕೆ ನೆಹರು ನಗರದ 4ನೇ ತಿರುವಿನಲ್ಲಿ ಆಯೋಜಿಸಲಾಗಿದೆ.

ಶಿವಮೊಗ್ಗ : ತುಂಗಾ ಜಲಾಶಯದ ಒಳಹರಿವು ಹಾಗೂ ಹೊರಹರಿವು ಎಷ್ಟಿದೆ ಇವತ್ತು ?  

ಈ ಲೋಕಾರ್ಪಣೆ ಸಮಾರಂಭದಲ್ಲಿ ಬಲಸಗೋಡು ಶ್ರೀಭಂಗೀಶ್ವರ ಮಠದ ಶ್ರೀ ಗುರುನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಅಲ್-ಅಮೀನ್ ಮಸೀದಿಯ ಧರ್ಮ ಗುರುಗಳಾದ ಅಬ್ದುಲ್ ಖಾದರ್ ಸಖಾಫಿ ಹಾಗೂ ಸಂತ ಜೋಸೆಫರ ದೇವಾಲಯದ ರಿಚರ್ಡ್ ಅನಿಲ್ ಡಿ’ಸೋಜಾ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ಹೆಲ್ಪ್‌ಲೈನ್ ಟ್ರಸ್ಟ್ ಅಧ್ಯಕ್ಷರಾದಫಯಾಜ್ ಅಹ್ಮದ್ ವಹಿಸಲಿದ್ದು, ಮಾಜಿ ವಿಧಾನಸಭಾಧ್ಯಕ್ಷರಾದ ಡಾ. ಕಾಗೋಡು ತಿಮ್ಮಪ್ಪ ಅವರು ಆಂಬುಲೆನ್ಸ್ ಸೇವೆಯನ್ನು ಬಿಡುಗಡೆಗೊಳಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ವೀರೇಶ ಕುಮಾರ್, ಡಿವೈಎಸ್ಪಿ ಡಾ. ಬೆನಕಪ್ರಸಾದ್ ಎನ್.ಜಿ., ತಹಸೀಲ್ದಾರ್ ಡಾ. ಪ್ರತಿಭಾ ಆರ್., ಉಪವಿಭಾಗೀಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸುರೇಶ್ ಕುಮಾರ್, ಪ್ರಸೂತಿ ತಜ್ಞರಾದ ಡಾ. ನಾಗೇಂದ್ರಪ್ಪ, ನಗರಸಭೆ ಪೌರಾಯುಕ್ತ ನಾಗಪ್ಪ ಹೆಚ್.ಕೆ., ಪುರಸಭೆ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ ಹಾಗೂ ಅಪರ ಸರ್ಕಾರಿ ವಕೀಲರಾದ ವಿ. ಶಂಕರ್ ಭಾಗವಹಿಸಲಿದ್ದಾರೆ. ತುರ್ತು ಸೇವೆಗಾಗಿ ಸಾರ್ವಜನಿಕರು 9482849577 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor