ಭದ್ರಾವತಿ: ಕುಟುಂಬ ಕಲಹ, ನೇಣು ಬಿಗಿದುಕೊಂಡು ಸೆಂಟ್ರಿಂಗ್​ ಕಾರ್ಮಿಕ ಆತ್ಮಹತ್ಯೆ

ಹಂಚಿಕೊಳ್ಳಿ
WhatsApp Facebook X Telegram
Bhadravathi Centering Worker Commits Suicide
Bhadravathi Centering Worker Commits Suicide

Bhadravathi ಭದ್ರಾವತಿ: ಕುಟುಂಬ ಕಲಹಕ್ಕೆ ಮನನೊಂದು ಸೆಂಟ್ರಿಂಗ್ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ದೇವರಾಜ್ ಅರಸು ಬಡಾವಣೆಯಲ್ಲಿ ನಡೆದಿದೆ. ಮೃತನನ್ನು ಸುಶೀಲ್ (37) ಎಂದು ಗುರುತಿಸಲಾಗಿದೆ.

ಶಿವಮೊಗ್ಗ : ತುಂಗಾ ಜಲಾಶಯದ ಒಳಹರಿವು ಹಾಗೂ ಹೊರಹರಿವು ಎಷ್ಟಿದೆ ಇವತ್ತು ? 

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಶೀಲ್ ಹಾಗೂ ಆತನ ಪತ್ನಿಯ ನಡುವೆ ಮನಸ್ಥಾಪ ಉಂಟಾಗಿತ್ತು. ಹಾಗಾಗಿ ಪತ್ನಿ ಕಳೆದ ಕೆಲವು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ. ಇದರಿಂದ ಸುಶೀಲ್ ಬೇಸರಗೊಂಡಿದ್ದರು. ಅಷ್ಟೇ ಅಲ್ಲದೆ, ಕುಡಿತದ ಚಟಕ್ಕೂ ಒಳಗಾಗಿದ್ದರು. ಈ ಕುರಿತಾಗಿ ಮನೆಯವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಸುಶೀಲ್ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಮನನೊಂದು ಮನೆಯಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತನ ತಂದೆ ಕೃಪಯ್ಯ ನೀಡಿದ ದೂರಿನ ಆಧಾರದ ಮೇಲೆ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ  ದಾಖಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor