HOLEHONNUR KARNATAKA

ಗಂಡ ಹೆಂಡತಿ ನಡುವಿನ ಜಗಳದಲ್ಲಿ ಅಡ್ಡಬಂದ ಮಗ! ಹೊಳೆಹೊನ್ನೂರು ಕೊಲೆ ಕೇಸ್​ನ ವಿವರ!

Holehonnur News Son Murders Father Over Family Dispute in Arasanaghatta
Holehonnur News Son Murders Father Over Family Dispute in Arasanaghattaಚಿತ್ರ: ಮಲೆನಾಡು ಟುಡೆ
ಶೇರ್ ಮಾಡಿ WhatsApp Facebook X

Holehonnur News / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಹೊಳೆಹೊನ್ನೂರು ಹೋಬಳಿಯಲ್ಲಿ ಕಳೆದ ಭಾನುವಾರದ ರಾತ್ರಿ ನಡೆದ ಘಟನೆಯೊಂದರ ಬಗ್ಗೆ ನಿನ್ನೆದಿನ ಸಂಜೆ ಮಾಹಿತಿ ಲಭ್ಯವಾಗಿದೆ.

ಮಲೆನಾಡು ಟುಡೆಗೆ ಲಭ್ಯವಾದ ಸ್ಥಳೀಯ ಮಾಹಿತಿ ಪ್ರಕಾರ, ಆಕಸ್ಮಾತ್​ ಆಗಿ ಶುರುವಾರ ಕೌಟುಂಬಿಕ ಕಲಹದಲ್ಲಿ ಮಗನೊಬ್ಬ ತಂದೆಯ ಹತ್ಯೆಗೆ ಕಾರಣವಾಗಿದ್ದಾನೆ. ಅರಸನಘಟ್ಟ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಶಿವಗನಾಯ್ಕ (55) ಕೊಲೆಯಾದವ.

ಶಿವಗನಾಯ್ಕ 2 ವರ್ಷದ ಹಿಂದೆ ಹೊಸ ಮನೆ ಕಟ್ಟಿಸಿ ತನ್ನ ಇಬ್ಬರೂ ಮಕ್ಕಳು, ಸೊಸೆಯಂದಿರು ಮತ್ತು ಪತ್ನಿಯೊಂದಿಗೆ ವಾಸವಿದ್ದ. ಮನೆ ಕಟ್ಟಲು ಹಾಗೂ ಇಬ್ಬರು ಮಕ್ಕಳ ಮದುವೆಗೆ ತುಂಬಾ ಸಾಲ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ಹೆಂಡತಿ ಮಕ್ಕಳ ಜೊತೆಗೆ ಜಗಳವಾಡುತ್ತಿದ್ದ ಎಂಬುದು ಹಿನ್ನೆಲೆ.

ಈ ಮಧ್ಯೆ ಮೃತ ಶಿವಗನಾಯ್ಕ ಮಕ್ಕಳನ್ನ ಹಾಗೂ ಪತ್ನಿಯನ್ನ ಹೊಸಮನೆಯಿಂದ ಹೊರಕ್ಕೆ ಹಾಕಿ ಕ್ಯಾತೆ ತೆಗೆದಿದ್ದನಂತೆ. ಅಲ್ಲದೆ ಕಳೆದ ಭಾನುವಾರ ಇದೇ ವಿಚಾರದಲ್ಲಿ ಹಳೆಯ ಮನೆಗೆ ಬಂದು ತನ್ನ ಪತ್ನಿಯ ಜೊತೆಗೆ ಜಗಳವಾಡಿ ಹಲ್ಲೆ ಮಾಡಿದ್ದಾನೆ. ಈ ವೇಳೇ ಅಡ್ಡಬಂದ ಮಗ ಮಂಜುನಾಯ್ಕ ತಂದೆಯನ್ನ ಕುತ್ತಿಗೆಗೆ ಕೈ ಹಾಕಿ ಬಿಗಿಹಿಡಿದು ಆತನನ್ನು ತಡೆದಿದ್ದಾನೆ. ಆದರೆ, ಕುತ್ತಿಗೆ ಬಿಗಿ ಹಿಡಿದ್ದಿದ್ದರಿಂದ ಶಿವಗನಾಯ್ಕ್​ ಅಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನೆಯ ಬಗ್ಗೆ ಪೂರ್ಣ ಉಲ್ಲೇಖದೊಂದಿಗೆ ಹೊಳೆ ಹೊನ್ನೂರು ಪೊಲೀಸ್ ಸ್ಟೇಷನ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದು ಬಿಎನ್​ಎಸ್​ 103 (1) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮಂಜನಾಥ ನಾಯ್ಕ್​​ನ್ನ ಬಂಧನ ಪ್ರಕ್ರಿಯೆಯನ್ನು ಸಹ ಮುಗಿಸಿದ್ದಾರೆ.

ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor