Sushodha Hospital Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಸುಶೋಧ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಆಗಸ್ಟ್ 1 ಶನಿವಾರದವರೆಗೆ ಉಚಿತ ಹೆಪಟೈಟಿಸ್ ಬಿ ಮತ್ತು ಸಿ ತಪಾಸಣೆ ಹಾಗೂ ಹೆಪಟೈಟಿಸ್ ಬಿ ಲಸಿಕಾ ಶಿಬಿರ ಆಯೋಜಿಸಲಾಗಿದೆ. ಜುಲೈ 26 ಭಾನುವಾರದಿಂದಲೇ ಶಿಬಿರ…
Sushodha Hospital Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಸುಶೋಧ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಆಗಸ್ಟ್ 1 ಶನಿವಾರದವರೆಗೆ ಉಚಿತ ಹೆಪಟೈಟಿಸ್ ಬಿ ಮತ್ತು ಸಿ ತಪಾಸಣೆ ಹಾಗೂ ಹೆಪಟೈಟಿಸ್ ಬಿ ಲಸಿಕಾ ಶಿಬಿರ ಆಯೋಜಿಸಲಾಗಿದೆ.
ಜುಲೈ 26 ಭಾನುವಾರದಿಂದಲೇ ಶಿಬಿರ ಆರಂಭವಾಗಿದ್ದು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಸುಶೋಧ ಆಸ್ಪತ್ರೆಯ ಜೀರ್ಣಾಂಗ ಮತ್ತು ಲಿವರ್ ತಜ್ಞರಾದ ಡಾ. ಪ್ರದೀಪ್ ಕುಮಾರ್ ಜೆ.ಕೆ., ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಸೋಂಕು ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ರೋಗಕ್ಕೆ ಬಹುಮುಖ್ಯ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ.
ಈ ಎರಡೂ ಸೋಂಕುನ್ನು ಸಾಮಾನ್ಯ ರಕ್ತಪರೀಕ್ಷೆಯ ಮುಖಾಂತರವೇ ಪತ್ತೆಹಚ್ಚಬಹುದಾಗಿದೆ. ಮುಂಚಿತವಾಗಿಯೇ ಸೋಂಕನ್ನು ಪತ್ತೆ ಹಚ್ಚುವುದರಿಂದ ಸಂಪೂರ್ಣವಾಗಿ ಗುಣಪಡಿಸಲು ಮತ್ತು ಬೇರೆಯವರಿಗೆ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿರುವ ಡಾ. ಪ್ರದೀಪ್ ಕುಮಾರ್, ಹೆಪಟೈಟಿಸ್ ಬಿ ಲಸಿಕೆಯ ಮೂರು ಡೋಸ್ ಗಳನ್ನು 0, 1 ಮತ್ತು 6 ತಿಂಗಳ ಅಂತರದಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದುವರೆಗೆ ಪರೀಕ್ಷೆ ಮಾಡಿಸಿಕೊಳ್ಳದವರು ತಮ್ಮನ್ನು ಪರೀಕ್ಷೆಗೆ ಒಳಪಡಿಸಿಕೊಂಡು ಲಸಿಕೆ ಪಡೆಯಬೇಕು ಹಾಗೂ ತಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಯಸ್ಥರಿಗೂ ಈ ವಿಷಯವನ್ನು ತಿಳಿಸಿ ಅವರಿಗೂ ಪರೀಕ್ಷೆ ಮಾಡಿಸಿ ಲಸಿಕೆ ಪಡೆಯಲು ಪ್ರೇರೇಪಿಸುವ ಮೂಲಕ ಹೆಪಟೈಟಿಸ್ ಬಿ ಯನ್ನು ಸಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಈ ಉಚಿತ ತಪಾಸಣೆ ಮತ್ತು ಲಸಿಕಾ ಶಿಬಿರದಲ್ಲಿ ಪಾಲ್ಗೊಳ್ಳಲು ಬಯಸುವವರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿಗಾಗಿ ಸಾರ್ವಜನಿಕರು 8277736465 ಅಥವಾ 7349091991 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
