Shivamogga ಶಿವಮೊಗ್ಗ: ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯು ದೇಶದ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗ: ತೆಂಗಿನ ಗರಿ ಕಡಿದು ರೌಂಡ್ ಅಪ್ ಸಿಡಿಸಿದ ವಿಚಾರ ; 112ಗೆ ದೂರು! ಇಂದು ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳನ್ನೇ ಅಸ್ತ್ರವಾಗಿಸಿಕೊಂಡು ಅಧಿಕಾರಕ್ಕೆ…
Shivamogga ಶಿವಮೊಗ್ಗ: ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯು ದೇಶದ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ: ತೆಂಗಿನ ಗರಿ ಕಡಿದು ರೌಂಡ್ ಅಪ್ ಸಿಡಿಸಿದ ವಿಚಾರ ; 112ಗೆ ದೂರು!
ಇಂದು ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳನ್ನೇ ಅಸ್ತ್ರವಾಗಿಸಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿಗೆ, ಇದೀಗ ಅದೇ ಸೋಶಿಯಲ್ ಮೀಡಿಯಾ ಮೂಲಕ ಯುವಜನತೆ ತಕ್ಕ ಉತ್ತರ ನೀಡುತ್ತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಧೈರ್ಯದಿಂದ ಹೋರಾಟ ನಡೆಸಿದ ಯುವ ಸಮುದಾಯಕ್ಕೆ ಅಂತಿಮವಾಗಿ ದೊಡ್ದ ಗೆಲುವು ಸಿಕ್ಕಿದೆ ಎಂದು ಎಂದರು.
ಯಾವುದೇ ಕನಿಷ್ಠ ಪ್ರೋಟೋಕಾಲ್ ಹಾಗೂ ನಿಯಮಗಳನ್ನು ಪಾಲಿಸದೆ ಅಮಾಯಕ ಹೋರಾಟಗಾರರ ಮೇಲೆ ಪೊಲೀಸರು ಅತ್ಯಂತ ಕ್ರೂರವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ. ಈ ಘಟನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಅಮಾಯಕ ಯುವಕರು ಜೀವ ಕಳೆದುಕೊಂಡಿದ್ದು, ಈ ಎಲ್ಲಾ ಸಾವುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಯುವಕರ ಭವಿಷ್ಯವನ್ನು ಹಾಳುಮಾಡುವ ಹಕ್ಕು ಯಾವುದೇ ಸರ್ಕಾರಕ್ಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಕರ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಈ ದೌರ್ಜನ್ಯದ ವಿಚಾರವನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರಬಲವಾಗಿ ಪ್ರಸ್ತಾಪಿಸಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
