ಶಿವಮೊಗ್ಗ: ತೆಂಗಿನ ಗರಿ ಕಡಿದು ರೌಂಡ್​​​ ಅಪ್​ ಸಿಡಿಸಿದ ವಿಚಾರ ; 112ಗೆ ದೂರು!

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಶಿವಮೊಗ್ಗ: ತೆಂಗಿನ ಗರಿಗಳನ್ನು ಕಡಿದು, ರೌಂಡ್ ಅಪ್ ಹೊಡೆದು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು 112 ಗೆ ಕರೆ ಮಾಡಿ ದೂರು ನೀಡಿರುವ ಘಟನೆ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ ಕೋರ್ಟ್​ನಲ್ಲಿ ಕೆಲಸ! 62 ಹುದ್ದೆಗಳಿಗೆ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನ

Bhadravati ಘಟನೆಯ ವಿವರ

ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ದೂರುದಾರರೊಬ್ಬರು ತುರ್ತು ಕರೆ ಸಂಖ್ಯೆ 112ಗೆ ಫೋನ್ ಮಾಡಿದ್ದಾರೆ. ಎದುರುದಾರರು ನಮ್ಮ ತೋಟದಲ್ಲಿದ್ದ ತೆಂಗಿನ ಗರಿಗಳನ್ನು ಕಡಿದಿದ್ದಾರೆ. ಅಷ್ಟೇ ಅಲ್ಲದೆ, ಗಿಡಗಳಿಗೆ ರೌಂಡ್ ಅಪ್ ಸಿಂಪಡಿಸಿ ಹಾಳು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಸ್ಥಳದಲ್ಲಾಗಲೀ ಅಥವಾ ಫೋನ್ ಮೂಲಕವಾಗಲೀ ದೂರುದಾರರು ಪೊಲೀಸರಿಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ದೂರುದಾರರು ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor