Rain ಸಾಗರ | ಸಾಗರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿನ್ನೆ (ಗುರುವಾರ) ಸಂಜೆ ಸಾಧಾರಣ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ವರುಣದೇವ ಕೊನೆಗೂ ನಿನ್ನೆ ಸಂಜೆ ಭೂಮಿಯನ್ನು ತಂಪಾಗಿಸಿದ್ದಾನೆ.
ಶಿವಮೊಗ್ಗ : KSRTC ಬಸ್ ನಿಲ್ದಾಣದ ಶೌಚಾಲಯದ ಬಳಿ ವ್ಯಕ್ತಿ ಆತ್ಮ*ಹತ್ಯೆ
ಮಳೆಯ ಪುನರಾಗಮನದಿಂದಾಗಿ ಈ ಭಾಗದ ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳಲಿವೆ ಎಂಬ ಭರವಸೆ ಮೂಡಿದೆ. ಸಾಗರ ತಾಲೂಕಿನ ಕುಗ್ವೆ, ತಾಳಗುಪ್ಪ, ಉಳ್ಳೂರು, ಕಾಸ್ಪಾಡಿ, ಕರ್ಕಿಕೊಪ್ಪ, ತುಂಬೆ, ವರದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಸಾಧಾರಣ ಮಳೆಯಾಗುತ್ತಿದ್ದು, ಇನ್ನು ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ಹೀಗಾಗಿ ಮುಂದಿನ ಕೆಲ ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ಚಟುವಟಿಕೆಗಳು ಮತ್ತೆ ಆರಂಭವಾಗಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಮಳೆ ತಗ್ಗಿದ್ದ ಕಾರಣ ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲೂ ತೀವ್ರ ಕುಸಿತ ಕಂಡುಬಂದಿತ್ತು. ಇದೀಗ ವರುಣನ ಕೃಪೆ ಸಾಗಿರುವುದರಿಂದ ಶರಾವತಿ ಕಣಿವೆ ಭಾಗದ ಜನರಲ್ಲಿ ಹಾಗೂ ಕೃಷಿಕರಲ್ಲಿ ಹೊಸ ಹರ್ಷ ಮೂಡಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
