SHIVAMOGGA CRIME NEWS TODAY

SIR ಹೆಸರಲ್ಲಿಯು ಬರುತ್ತಿದೆ ಮೋಸದ ಕರೆ, ಎಚ್ಚರಿಕೆ ವಹಿಸಿ ಎಂದ ಶಿವಮೊಗ್ಗ ಪೊಲೀಸ್! ಏಕೆ ಗೊತ್ತಾ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

SIR Cyber Fraud Alert ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದೆಲ್ಲಡೆ SIR ಪ್ರಕ್ರಿಯೆಯು ಚಾಲ್ತಿಯಲ್ಲಿದೆ, ಅದರದ್ದೆ ಆದ ವಿಚಾರಗಳಿಂದಾಗಿ ಎಸ್ಐಆರ್​ ಚರ್ಚೆಯಲ್ಲಿದೆ. ಈ ಮಧ್ಯೆ ಬಿಎಲ್​ಒಗಳು ಮನೆಗೆ ಬಂದಿಲ್ಲ, ಯಾವ ಕಾಲಂನಲ್ಲಿ ಏನು ತುಂಬಬೇಕು, ಏನು ದಾಖಲೆ ನೀಡಬೇಕು ಎಂಬ ವಿಚಾರಣೆಗಳು ಸಹ ಸಹಜವಾಗಿಯೇ ನಡೆಯುತ್ತಿವೆ. ಆದರೆ ಇದನ್ನ ಬಳಸಿಕೊಂಡು ಸೈಬರ್ ವಂಚಕರು ಜನರನ್ನು ಮೋಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕಾರಣಕ್ಕೆ ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಜಾಗೃತಿ ಸಂದೇಶ ರವಾನೆ ಮಾಡಿದ್ದು, ಎಸ್​ಐಆರ್​ ವಿಚಾರದಲ್ಲಿ ಒಟಿಪಿ ಕೇಳಿದರೆ ಕೊಡಬೇಡಿ, ಇಂತಹ ಮೋಸದ ಜಾಲದಲ್ಲಿ ಬೀಳಬೇಡಿ ಎಂದು ಮನವಿ ಮಾಡಿದ್ದಾರೆ.

ವಂಚಕರು ಫೋನ್ ಕರೆ ಮಾಡಿ SIR ಫಾರಂ ಭರ್ತಿ ಮಾಡಬೇಕು ಎಂದು ಹೇಳಿ ಮೊಬೈಲ್‌ಗೆ ಬರುವ ಒಟಿಪಿ (OTP) ಕೇಳುತ್ತಿದ್ದು, ಯಾವುದೇ ಕಾರಣಕ್ಕೂ ಒಟಿಪಿಯನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಿದ್ದಾರೆ.

ಜೊತೆಗೆ, ಸಾರ್ವಜನಿಕರ ಮೊಬೈಲ್‌ಗೆ SIR.apk ಅಥವಾ SIR.exe ಎಂಬ ಯಾವುದೇ ಫೈಲ್‌ಗಳು ಬಂದರೆ ದಯವಿಟ್ಟು ಇನ್‌ಸ್ಟಾಲ್ ಮಾಡಬಾರದು. ಸಾರ್ವಜನಿಕರ ಮುಗ್ಧತೆಯೇ ವಂಚಕರ ಅತಿದೊಡ್ಡ ಆಯುಧವಾಗಿದ್ದು, ಇಂತಹ ಯಾವುದೇ ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳು ಬಂದರೆ ಕೂಡಲೇ ಪಬ್ಲಿಕ್ ಐ ವಾಟ್ಸಾಪ್ ಹೆಲ್ಪ್‌ಲೈನ್ (PUBLIC EYE WHATSAPP HELPLINE) ಸಂಖ್ಯೆ 8277982900 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ