ಮಗುಚಿ ಬಿದ್ದ ಬೊಲೆರೊ, 20 ಕ್ಕೂ ಹೆಚ್ಚು ಮಂದಿಗೆ ಪೆಟ್ಟು! ಮೆಗ್ಗಾನ್​ನಲ್ಲಿ ಅಜ್ಜಿ ಚಿನ್ನ ಮಂಗಮಾಯ! ಚಟ್​ ಪಟ್ ಸುದ್ದಿ!

ಹಂಚಿಕೊಳ್ಳಿ
WhatsApp Facebook X Telegram
ಮಗುಚಿ ಬಿದ್ದ ಬೊಲೆರೊ, 20 ಕ್ಕೂ ಹೆಚ್ಚು ಮಂದಿಗೆ ಪೆಟ್ಟು! ಮೆಗ್ಗಾನ್​ನಲ್ಲಿ  ಅಜ್ಜಿ ಚಿನ್ನ ಮಂಗಮಾಯ! ಚಟ್​ ಪಟ್ ಸುದ್ದಿ!

shivamogga short news today / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ಮಾಹಿತಿ ನೀಡುವ ಇವತ್ತಿನ ಮಲೆನಾಡು ಟುಡೆ ಚಟ್​ಪಟ್ ನ್ಯೂಸ್ನ ವಿವರ ಹೀಗಿದೆ. ನಿನ್ನೆ ದಿನದ ತೀರ್ಥಹಳ್ಳಿ ದಾರಿಯ 15 ನೇ ಮೈಲಿಗಲ್ಲಿನ ಬಳಿ ಬೊಲೆರೊ ಒಂದು ಅಪಘಾತಕ್ಕೀಡಾಗಿದೆ. ಇತ್ತ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಳ್ಳತನವಾಗಿದ್ದು ಭದ್ರಾವತಿಯ ವೃದ್ಧೆಯ 1.20 ಲಕ್ಷ ಮೌಲ್ಯದ ಚಿನ್ನದ ಸರ ನಾಪತ್ತೆಯಾಗಿದೆ.

ಬೊಲೆರೋ ಅಪಘಾತ 29 ಮಂದಿಗೆ ಪೆಟ್ಟು

ಕೂಲಿ ಕಾರ್ಮಿಕರನ್ನು ಕರೆತರುತ್ತಿದ್ದ ಬೊಲೆರೊ ವಾಹನವೊಂದು 15ನೇ ಮೈಲಿಗಲ್ಲಿನ ಬಳಿ ಪಲ್ಟಿಯಾಗಿತ್ತು. ನಿನ್ನೆ ನಡೆದ ಘಟನೆಯಲ್ಲಿ ಕಳಸಾ ಭಾಗದ ಕಾಫಿ ತೋಟಗಳಲ್ಲಿ ಕೆಲಸ ಮಾಡುವ 29 ಕಾರ್ಮಿಕರಿಗೆ ಸಣ್ಣಪುಟ್ಟ ಪೆಟ್ಟಾಗಿತ್ತು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಜಾಗರೂಕತೆ ಮತ್ತು ಅತಿವೇಗವೇ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಳ್ಳತನ

ಇತ್ತ ನಗರದ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ವೃದ್ಧೆಯೊಬ್ಬರ ಬ್ಯಾಗ್‌ನಿಂದ 1.20 ಲಕ್ಷ ಮೌಲ್ಯದ ಚಿನ್ನದ ಸರ ಕಳ್ತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ಆಗಿದೆ. ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಸಮೀಪದ ನಿವಾಸಿಯೊಬ್ಬರು ಈ ಕುರಿತು ದೂರು ನೀಡಿದ್ದಾರೆ. ಮಾರಮ್ಮ ಎಂಬವರು ತಮ್ಮ ಮೊಮ್ಮಗನೊಂದಿಗೆ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯ ಆವರಣದಲ್ಲಿ ಹೋಟೆಲ್‌ ಒಂದರಲ್ಲಿ ತಿಂಡಿ ತಿಂದು ಬಿಲ್​ ಕೊಡಲು ಹೋಗುವಾಗ ಪರ್ಸ್​​ನಲ್ಲಿದ್ದ ಎರಡು ಎಳೆಯ ಮಾಂಗಲ್ಯ ಸರ ಕಾಣೆಯಾಗಿರುವುದು ಗೊತ್ತಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸ್ತಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor