ಲಾಂಗ್​ನಿಂದ ಹಲ್ಲೆ, ಇನ್​ಸ್ಪೆಕ್ಟರ್​ನಿಂದ ಫೈರ್​! ಎಸ್​ಪಿ ನಿಖಿಲ್ ಬಿ ಅಧಿಕೃತ ಮಾಹಿತಿ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
Shivamogga Police Firing SP Nikhil B Statement

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇವತ್ತು ಬೆಳಗ್ಗೆ ಮುಂಚೆ, ದೊಡ್ಡಪೇಟೆ ಪೊಲೀಸರಿಂದ 2 ರೌಂಡ್​ ಫೈರ್! ಕಿಶೋರ್​ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂಬ ಸುದ್ದಿಯನ್ನು ಈಗಾಗಲೇ ಓದಿದ್ದೀರಿ. ಈ ಘಟನೆಗೆ ಸಂಬಂಧಿಸಿದಂತೆ ಎಸ್​ಪಿ ನಿಖಿಲ್ ಬಿ ಮಾತನಾಡಿದ್ದಾರೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯಾಳು ಸಿಬ್ಬಂದಿಯ ಆರೋಗ್ಯ ವಿಚಾರಿಸಿ, ನಡೆದ ಘಟನೆಯ ಬಗ್ಗೆ ಮಾಧ್ಯಮಗಳಿಗೆ ಅಧಿಕೃತವಾಗಿ ಮಾಹಿತಿ ಕೊಟ್ಟ ಎಸ್​ಪಿ ನಿಖಿಲ್ ಬಿ ತುಂಗಾನಗರ ವ್ಯಾಪ್ತಿಯಲ್ಲಿ ಪೊಲೀಸ್ ಫೈರಿಂಗ್ ನಡೆದಿದೆ ಎಂದು ಎಸ್​ಪಿ ನಿಖಿಲ್ ಬಿ ಸ್ಪಷ್ಟಪಡಿಸಿದ್ದಾರೆ. ನಿನ್ನೆ ದೊಡ್ಡಪೇಟೆ ಮರ್ಡರ್ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಕಿಶೋರ್ ಎಂಬುವವನನ್ನು ಅರೆಸ್ಟ್ ಮಾಡಲು ಹೋದಾಗ ಈ ಘಟನೆ ನಡೆದಿದೆ. ಕಾರ್ಯಾಚರಣೆ ವೇಳೆ ಆತ ಒಂದು ಲಾಂಗ್ ತೆಗೆದುಕೊಂಡು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಸಿಬ್ಬಂದಿ ಗಣೇಶ್ ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ. ಆರೋಪಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಆತ ಶರಣಾಗಿರಲಿಲ್ಲ ಅಂತಾ ತಿಳಿಸಿದರು.

ಅಲ್ಲದೆ ಹಲ್ಲೆಯನ್ನು ತಡೆಯುವ ನಿಟ್ಟಿನಲ್ಲಿ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರು ಮೊದಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆನಂತರ ಆರೋಪಿ ಕಿಶೋರ್ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಇಬ್ಬರನ್ನೂ ತಕ್ಷಣವೇ ಶಿಫ್ಟ್ ಮಾಡಲಾಗಿದ್ದು, ಪ್ರಸ್ತುತ ಹಲ್ಲೆಗೊಳಗಾದ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಸ್​ಪಿ ನಿಖಿಲ್ ಬಿಯವರ ವಿಡಿಯೋ ಇಲ್ಲಿದೆ ನೋಡಿ

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor