ಶುಭಸುದ್ದಿ : ಶರಾವತಿ ಹಿನ್ನೀರಿನಲ್ಲಿ ನಿಂತಿದ್ದ ಲಾಂಚ್ ಪುನರಾರಂಭ! ದುರ್ಗಾಂಬಾ ಬಸ್​ ಕೂಡ ಓಡಾಡುತ್ತೆ

ಹಂಚಿಕೊಳ್ಳಿ
WhatsApp Facebook X Telegram
Hasirumakki launch, Sharavathi backwaters, Nittur, Launch service resumes
Hasirumakki launch, Sharavathi backwaters, Nittur, Launch service resumes

Hasirumakki Launch Service /ಮಲೆನಾಡು ಟುಡೆ ಸುದ್ದಿ / ನಿಟ್ಟೂರು / ಶರಾವತಿ ನದಿಯ ಹಿನ್ನೀರಲ್ಲಿ ನೀರು ಕಡಿಮೆಯಾಗಿದ್ದ ಕಾರಣಕ್ಕೆ ಸ್ಥಗಿತಗೊಂಡಿದ್ದ ಲಾಂಚ್ ಸೇವೆ ನಾಳೆಯಿಂದ ಮತ್ತೆ ಆರಂಭವಾಗಲಿದೆ. ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದ ಕಾರಣಕ್ಕೆ ಕಳೆದ 20 ದಿನಗಳಿಂದ ಹಸಿರುಮಕ್ಕಿ ಲಾಂಚ್ ಸೇವೆಯನ್ನ ನಿಲ್ಲಿಸಲಾಗಿತ್ತು.

ಇದೀಗ ಮಳೆಯಾಗುತ್ತಿದ್ದು, ಹಿನ್ನೀರು ಮೇಲೆ ಬಂದಿರುವುದರಿಂದ ಲಾಂಚ್ ಸೇವೆಯು ಮತ್ತೆ ಆರಂಭವಾಗುತ್ತಿದೆ. ನಾಳೆಯಿಂದ ಅಂದರೆ ಜುಲೈ 8 ರಿಂದ ಹಸಿರು ಮಕ್ಕಿ ಲಾಂಚ್ ಸೇವೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಿ ಪುನಾರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ 4 ರಿಂದ 5 ದಿನಗಳ ಅವಧಿಯಲ್ಲಿ ಶರಾವತಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ . ಪರಿಣಾಮವಾಗಿ ಶರಾವತಿ ನದಿಗೆ ಸಾಕಷ್ಟು ಪ್ರಮಾಣದಲ್ಲಿ ಹೊಸ ನೀರು ಹರಿದುಬರುತ್ತಿದೆ. ಇದರಿಂದಾಗಿ ಹಿನ್ನೀರಿನಲ್ಲಿ ಲಾಂಚ್ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾಂಚ್​ ಸೇವೆಯನ್ನು ಮತ್ತೆ ಶುರು ಮಾಡಲು ಅನುಕೂಲವಾಗಿದ್ದು ನಾಳೆಯಿಂದ ಲಾಂಚ್ ಓಡಾಟ ನಡೆಸಲಿದೆ. ಇನ್ನೂ ಈ ಭಾಗದಲ್ಲಿ ಓಡಾಡುತ್ತಿದ್ದ ದುರ್ಗಾಂಬಾ ಬಸ್​ ಸೇವೆಯು ನಾಳೆಯಿಂದ ಆರಂಭವಾಗಲಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor