BY Vijayendra filled sir enumeration form /ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ / ರಾಜ್ಯಾದ್ಯಂತ ಇಂದಿನಿಂದ ಜುಲೈ 29 ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆರಂಭವಾಗಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇವತ್ತೆ ತಮ್ಮ ಮನೆಯಲ್ಲಿ ಬಿಎಲ್ಒ ಎದರು ಎಸ್ಐಆರ್ ಫಾರಮ್ ತುಂಬಿದರು.
ಗ್ರಾಮವಾಸ್ತವ್ಯವದ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿಯೇ ಇರುವ ಬಿ.ವೈ.ವಿಜಯೇಂದ್ರರ ನಿವಾಸಕ್ಕೆ ಇವತ್ತು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಆಗಮಿಸಿದ್ದರು. ನಾಲ್ವರು ಸಿಬ್ಬಂದಿಯನ್ನು ಮನೆಗೆ ಬರಮಾಡಿಕೊಂಡ ವಿಜಯೇಂದ್ರ ಅವರ ಸಲಹೆಯಂತೆ SIR ಎನ್ಯುಮರೇಷನ್ ಅರ್ಜಿ ಭರ್ತಿ ಮಾಡಿದ್ರು. ಈ ವೇಳೆ ಕೆಲವು ವಿಚಾರಗಳನ್ನ ಕೇಳಿ ತಿಳಿದುಕೊಂಡ ವಿಜಯೇಂದ್ರ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಅಂಟಿಸಿ , ಒಂದು ಫಾರಮ್ನ್ನ ಬಿಎಲ್ಒಗೆ ನೀಡಿ ಇನ್ನೊಂದು ಫಾರಮ್ ತಮ್ಮ ಬಳಿ ಇರಿಸಿಕೊಂಡರು
ಈ ವೇಳೆ, ಮಾತನಾಡಿದ ಅವರು ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ಸಂಪೂರ್ಣ ಸಹಕಾರ ನೀಡಬೇಕು ಅಂಥಾ ಮನವಿಮಾಡಿದರ. ಮನೆಗೆ ಭೇಟಿ ನೀಡುವ ಅಧಿಕಾರಿಗಳಿಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು. ಸೂಕ್ತ ದಾಖಲೆಗಳೊಂದಿಗೆ ನಿಖರವಾದ ವಿವರಗಳನ್ನು ಒದಗಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ಇತರ ಮಾಹಿತಿಗಳು ಸಮರ್ಪಕವಾಗಿ ದಾಖಲಾಗಿರುವುದನ್ನು ದೃಢಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
ರಾಜ್ಯಾದ್ಯಂತ ಇಂದಿನಿಂದ ಜುಲೈ 29ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ. ಇಂದು ಸ್ವಕ್ಷೇತ್ರ ಶಿಕಾರಿಪುರದ ನನ್ನ ನಿವಾಸದಲ್ಲಿ ಚುನಾವಣಾ ಆಯೋಗದಿಂದ ನಿಯುಕ್ತರಾದ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸಿ, ಮತದಾರರ ಪಟ್ಟಿಯ ಪರಿಷ್ಕರಣೆ… pic.twitter.com/U6CrAh8Vwu
— Vijayendra Yediyurappa (@BYVijayendra) June 30, 2026





