ಹೇ‘ಗೆ’ ಇದ್ದರೂ ಬಿಡಲ್ಲ! ಡೇಟಿಂಗ್ ಆಪ್​ನಲ್ಲಿ ಸಿಕ್ಕವನ ಸುಲಿಗೆ ಕೇಸಲ್ಲಿ ನಡೆದಿದ್ದು ಇಷ್ಟು!

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

Dating App in Bengaluru / ಮಲೆನಾಡು ಟುಡೆ ಸುದ್ದಿ / ಬೆಂಗಳೂರು ಮೇಲ್ / ಟೈಮಿಗೆ ತಕ್ಕಂತೆ ಕ್ರೈಂಗಳು ಸಹ ಬದಲಾಗುತ್ತಿವೆ. ವಂಚನೆ ಮಾಡುವ ದಾರಿಗಳು ಬದಲಾಗುತ್ತಿವೆ. ಜನ ಯಾವ ಕಡೆಗೆ ಹೋಗುತ್ತಾರೋ ಆದಿಕ್ಕಿನಲ್ಲಿಯೇ ಹೊಸದೊಂದು ಕ್ರೈಂ ಹುಟ್ಟುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ. ವಿವರ ಹೀಗಿದೆ ನೋಡಿ..

ಈ ಟ್ರೆಂಡ್​ನಲ್ಲಿ ಗೇ ಅನ್ನೋದು ವ್ಯಾಪಕವಾಗಿದೆ ಅಂತಾ ನ್ಯಾಷನಲ್ ರಿಪೋರ್ಟ್​ ಒಂದು ಇತ್ತೀಚೆಗೆ ಪ್ರಕಟಿಸಿತ್ತು. ಗಂಡು ಗಂಡಿನ ನಡುವಿನ ಸಂಬಂಧಗಳು ಹೆಚ್ಚಾಗಿ ಹೆಚ್​​ಐವಿಯು ಹೆಚ್ಚಾಗುತ್ತಿದೆ ಎಂಬ ರಿಪೋರ್ಟ್​ವೊಂದು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ವರದಿಯಾಗಿತ್ತು. ಆದರೆ ಇದನ್ನೆ ಬಳಸಿಕೊಂಡು ಕ್ರೈಂ ಕೂಡ ನಡೆಯುತ್ತಿದೆ ಎಂಬ ವರದಿ ಇದೀಗ ಬೆಳಕಿಗೆ ಬಂದಿದೆ. ಗೇ ಡೇಟಿಂಗ್ ಆಪ್​ನಲ್ಲಿ (Dating App in Bengaluru) ಯುವಕನೊಬ್ಬನನ್ನು ಪರಿಚಯ ಮಾಡಿಕೊಂಡು. ಆತನನ್ನು ಅಪಹರಿಸಿ ಸುಲಿಗೆ ಮಾಡಿದ ಸಂಬಂಧ ಕೇಸ್​ವೊಂದು ಬೆಂಗಳೂರು ಸಂಪಿಗೆ ಹಳ್ಳಿ ಪೊಲೀಸ್ ಸ್ಟೇಷನ್​ಲ್ಲಿ ದಾಖಲಾಗಿದೆ.

ಗೇ ಡೇಟಿಂಗ್ ಆ್ಯಪ್‌ನಲ್ಲಿ ಯುವಕನೊಬ್ಬನನ್ನು ಪರಿಚಯಿಸಿಕೊಂಡು, ಬಳಿಕ ಭೇಟಿಯಾದಾಗ ಆತನನ್ನು ಅಪಹರಿಸಿ ಹಣ, ಮೊಬೈಲ್ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ. ತನ್ನು (25) ಮತ್ತು ತಬ್ರೇಜ್ (27) ಬಂಧಿತರು. ಆರೋಪಿಗಳು ಸೈಯದ್ ಎಂಬಾತನನ್ನು ಸಾರಾಯಿಪಾಳ್ಯಕ್ಕೆ ಕರೆಸಿ ಕೊಂಡು ಚಾಕುವಿನಿಂದ ಹಲ್ಲೆ ನಡೆಸಿ ಅಪ ಹರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡುಆರೋಪಿಗಳಬಂಧಿಸಲಾಗಿದೆ. ಇತರೆ ಪ್ರಮುಖ ಆರೋಪಿ ವಾಸೀಂ, ಆರೀಫ್ ಸೇರಿ ಮೂವರು ಆರೋಪಿ ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ದೂರುದಾರ ಸೈಯದ್ ಪೊಲೋ ಡೇಟಿಂಗ್ ಆ್ಯಪ್‌ನಲ್ಲಿ ಆರೋಪಿ ವಾಸೀಂ ನನ್ನು ಜೂನ್ 15ರಂದು ಪರಿಚಯಿಸಿಕೊಂಡಿದ್ದರು. ಬಳಿಕ ಪರಸ್ಪರ ಮೊಬೈಲ್ ನಂಬರ್ ಬದಲಿಸಿಕೊಂಡು ವಾಟ್ಸ್ ಆ್ಯಪ್ ಚಾಟಿಂಗ್ ಮಾಡಿಕೊಂಡಿದ್ದರು. ಆ ಬಳಿಕ ವಾಸೀಂ ಕೋರಿಕೆ ಮೇರೆಗೆ ಸೈಯದ್ ಜೂನ್ 16ರಂದು ಸಾರಾಯಿಪಾಳ್ಯಕ್ಕೆ ಹೋಗಿದ್ದಾನೆ. ಆಗ ವಾಸೀಂ ತನ್ನ ಕಾರಿನಲ್ಲಿ
ಬಂದು ಸೈಯದ್‌ನನ್ನು ಸಾರಾಯಿಪಾಳ್ಯದ ಫಾತೀಮಾ ಲೇಔಟ್‌ ನಲ್ಲಿರುವ ಗ್ಯಾರೇಜ್ ಗೆ ಕರೆದೊಯ್ದಿದ್ದಾನೆ. ಬಳಿಕ ವಾಸೀಂ ಹಾಗೂ ಇತರೆ ಆರೋಪಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಮೊಬೈಲ್ ಕಸಿದು, 5 ಸಾವಿರ ರೂ. ನಗದು, ಬ್ಯಾಂಕ್ ಖಾತೆಯಿಂದ 6 ಸಾವಿರ ರೂ. ವರ್ಗಾಯಿಸಿಕೊಂಡಿದ್ದಾರೆ. ಆ ನಂತರ 5 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಕೊಲೆ ಮಾಡುತ್ತೇವೆ ಎಂದು ಹೆದರಿಸಿ, ತಡರಾತ್ರಿ 1.30ರ ಸುಮಾರಿಗೆ ರಜಾಕ್ ಪಾಳ್ಯದ ಬಳಿ ಕಾರಿನಲ್ಲಿ ಕರೆತಂದು ಇಳಿಸಿ ಪರಾರಿಯಾಗಿದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor