ಸಾಗರ: ಮನೆ ಅಂಗಳಕ್ಕೆ ನುಗ್ಗಿ ಸಾಕು ನಾಯಿಯ ಮೇಲೆ ಚಿರತೆ ದಾಳಿ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ಹಂಚಿಕೊಳ್ಳಿ
WhatsApp Facebook X Telegram
Leopard Attacks Pet Dog in Sagara's Tumari
Leopard Attacks Pet Dog in Sagara's Tumari

ಸಾಗರ | ಸಾಗರ ತಾಲೂಕಿನ ತುಮರಿ ಸಮೀಪದ ಕಾರಣಿ ಗ್ರಾಮದಲ್ಲಿ ಚಿರತೆಯೊಂದು ಸಾಕು ನಾಯಿಯ ಮೇಲೆ ಭೀಕರ ದಾಳಿ ನಡೆಸಿರುವ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಗ್ರಾಮದ ನಿವಾಸಿ ಮಂಜಪ್ಪ ಎಂಬುವವರಿಗೆ ಸೇರಿದ ಶ್ವಾನದ ಮೇಲೆ ಈ ಜಿರತೆಆಕ್ರಮಣ ಮಾಡಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ತಡರಾತ್ರಿ ಹೊಂಚು ಹಾಕಿ ಮನೆಯ ಮುಂಭಾಗದ ಆವರಣಕ್ಕೆ ನುಗ್ಗಿದ ಚಿರತೆಯು, ಒಮ್ಮೆಲೇ ನಾಯಿಯ ಕುತ್ತಿಗೆಯನ್ನು ಕಚ್ಚಿ ಹಿಡಿದು ಗಾಯಗೊಳಿಸಿದೆ. ಈ ವೇಳೆ ನಾಯಿ ಜೋರಾಗಿ ಕಿರುಚಾಡಲು ಪ್ರಾರಂಭಿಸಿದೆ. ಶ್ವಾನದ ಆಕ್ರಂದನ ಹಾಗೂ ಸದ್ದನ್ನು ಕೇಳಿ ಚಿರತೆಯು ತಕ್ಷಣವೇ ಅಲ್ಲಿಂದ ಓಡಿ ಹೋಗಿದೆ. ಚಿರತೆಯ ದವಡೆಯಿಂದ ನಾಯಿ ಕೂದಲೆಳೆ ಅಂತರದಲ್ಲಿ  ಪಾರಾಗಿದ್ದರೂ, ತೀವ್ರವಾಗಿ ಗಾಯಗೊಂಡಿದೆ ಎಂದು ತಿಳಿದುಬಂದಿದೆ. 

View this post on Instagram

A post shared by MALENADU TODAY (@malenadutodaysmg)

Leopard Attacks Pet Dog in Sagara’s Tumari

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor