ಶಿವಮೊಗ್ಗ : ಸೀನಪ್ಪ ಶೆಟ್ಟಿ ಸರ್ಕಲ್​ನ ಈ ರಸ್ತೇಲಿ ನೋ ಪಾರ್ಕಿಂಗ್ ಮತ್ತು ಟು ವೇ ವ್ಯವಸ್ಥೆ! ಹೇಗಿದೆ ಟ್ರಾಫಿಕ್ ಪೊಲಿಸರ ಕ್ರಮ!​

Seenappa Shetty Circle Road ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಟ್ರಾಫಿಕ್ ಪೊಲೀಸ್ / ಸಿಟಿಯಲ್ಲಿ ಪುಟ್​​ಪಾತ್​ ಒತ್ತುವರಿ ತೆರವು, ವಾಹನ ನಿಲುಗಡೆಯ ವ್ಯವಸ್ಥೆ, ಸುಗಮ ಸಂಚಾರದ ಕ್ರಮಗಳನ್ನು ಕೈಗೊಳ್ಳುತ್ತಿರುವ ಶಿವಮೊಗ್ಗ ಟ್ರಾಫಿಕ್​ ಪೊಲೀಸ್ ಇದೀಗ ಮತ್ತೊಂದು ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಗೋಪಿ ಸರ್ಕಲ್ ಎಂದು ಕರೆಸಿಕೊಳ್ಳುವ ಸೀನಪ್ಪ ಶೆಟ್ಟಿ ಸರ್ಕಲ್​ನಲ್ಲಿ ಕಮಲಾ ನೆಹರು ಕಾಲೇಜು ಅಥವಾ ಪಾಲಿಕೆಗೆ ಹೋಗುವ ದಾರಿಗೆ ಹೋಗುವುದು ವಾಹನ ಸವಾರರಿಗೆ ತ್ರಾಸದ ಕೆಲಸವಾಗಿತ್ತು.

ಏಕೆಂದರೆ ಐದು ದಾರಿ ಕೂಡುವ (Seenappa Shetty Circle Road ) ಸರ್ಕಲ್​ನಲ್ಲಿ ಜೆಪಿಎನ್​ ರಸ್ತೆಗೆ ತೆರಳುವುದಕ್ಕೆ ಅಷ್ಟೆನು ಸಮಸ್ಯೆಯಾಗುತ್ತಿರುತ್ತಿಲಿಲ್ಲ. ಆದರೆ ಸರ್ಕಲ್​ಗೆ ತಾಗಿಕೊಂಡೆ ಇರುವ ಪೋಸ್ಟ್​ ಆಫೀಸ್ ಪಕ್ಕದ ರಸ್ತೆಗೆ ವಾಹನ ಸವಾರರು ಟರ್ನ್​ ತೆಗೆದುಕೊಳ್ಳುವುದು ಕಷ್ಟವಾಗುತ್ತಿತ್ತು. ಕೋರ್ಟ್ ಸರ್ಕಲ್​ ಕಡೆಯಿಂದ ಬರುವ ಉಳಿದ ಕಡೆಗೆ ಹೋಗುವ ವಾಹನಗಳು ಮುಂದೆ ನಿಲ್ಲಿಸುತ್ತಿದ್ದರು, ಇದರಿಂದ ಎದುರುಗಡೆಯಿಂದ ಬರುವ ವಾಹನಗಳಿಗೆ ದಾರಿ ಸಿಗುತ್ತಿರಲಿಲ್ಲ.

ಹೀಗಾಗಿ ಈ ಸಮಸ್ಯೆ ಕ್ಲಿಯರ್ ಮಾಡಲು ಈ ಮೊದಲು ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈ ಭಾಗದಲ್ಲಿ ಬ್ಯಾರಿಕೇಡ್​ ರಿಮೂವ್ ಮಾಡಿ, ಸರ್ಕಲ್​ನಲ್ಲಿ ಸಿಗ್ನಲ್​ ಸ್ಟಾಪ್​ನ್ನ ಸ್ವಲ್ಪ ಹಿಂದಕ್ಕಿರಿಸಿದರು. ಈ ಸಣ್ಣ ಕ್ರಮದಿಂದ ದೊಡ್ಡ ತ್ರಾಸು ಸರಿಯಾಗಿತ್ತು. ಆದರೆ ಪೋಸ್ಟ್​ ಆಫೀಸ್​ ಪಕ್ಕದ ರಸ್ತೆಯಲ್ಲಿ ಹೋಗುವ ಬರುವ ವಾಹನಗಳ ನಡುವೆ ಜಾಮ್ ಆಗುತ್ತಿತ್ತು. ಇದೀಗ ಈ ಸಮಸ್ಯೆಗೂ ಮುಕ್ತಿಕೊಟ್ಟಿದೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್​

ದಿನಾಂಕ 19-06-2026 ರಂದು ಶಿವಮೊಗ್ಗ ನಗರದ ಪ್ರಮುಖ ಜಂಕ್ಷನ್ ಆಗಿರುವ ಗೋಪಿ ಸರ್ಕಲ್ ಅಂದರೆ ಸೀನಪ್ಪ ಶೆಟ್ಟಿ ಸರ್ಕಲ್ ನಿಂದ ಕಮಲಾ ನೆಹರು ಕಾಲೇಜು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಂಡಿದೆ. ಈ ಮಾರ್ಗದಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಡಿವೈಡರ್ ಮಾದರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಹೋಗುವ ಹಾಗು ಬರುವ ವಾಹನಗಳಿಗೆ ದಾರಿ ಸ್ಪಷ್ಟವಾಗಿ ತೋರಿಸಲಾಗಿದೆ.

ಈ ರಸ್ತೆಯು ನಗರದ ಪ್ರಮುಖ ಸಂಪರ್ಕ ಕೊಂಡಿಯಾಗಿರುವುದರಿಂದ ಸದಾ ವಾಹನಗಳ ಓಡಾಟವಿರುತ್ತದೆ. ಆದ್ದರಿಂದ ವಾಹನ ಸವಾರರು ಶಿಸ್ತುಬದ್ಧವಾಗಿ ತಮ್ಮ ಪಥದಲ್ಲಿಯೇ ಚಲಿಸಲು ಅನುಕೂಲವಾಗುವಂತೆ ಡಿವೈಡರ್ ರೂಪದಲ್ಲಿ ಬ್ಯಾರಿಕೇಡ್ ಜೋಡಿಸಲಾಗಿದೆ. ಇದರ ಜೊತೆಗೆ ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗಬಾರದು ಎಂಬ ದೃಷ್ಟಿಯಿಂದ ಸದರಿ ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟುನಿಟ್ಟಿನ ನೋ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಯಲ್ಲಿಡಲಾಗಿದೆ.

ದೇವರಾಜ್, ಇನ್​ಸ್ಪೆಕ್ಟರ್ , ಶಿವಮೊಗ್ಗ ಟ್ರಾಫಿಕ್ ಪೊಲೀಸ್

ಸದ್ಯ ಶಿವಮೊಗ್ಗ ಟ್ರಾಫಿಕ್​ ಪೊಲೀಸರು ಈ ರಸ್ತೆಯಲ್ಲಿ ನೋ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗಾಗಿ ಯಾವುದೇ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಕ್ಯಾಮರಾ ಪೈನ್​ ಹಾಕೋದು ಗ್ಯಾರಂಟಿ. ಇನ್ನೂ ಸಂಚಾರಿ ಪೊಲೀಸರ ಈ ಕ್ರಮ ವಾಹನ ಸವಾರರ ಶ್ಲಾಘನೆಗೆ ಕಾರಣವಾಗಿದೆ.

Whatsapp / https://chat.whatsapp.com/JrsZ8He4nN600n0r3tJItz