ಬ್ಲಡ್ ಬ್ಯಾಂಕ್ ಸಮೀಪ ಅಪಘಾತ! ಸ್ಪೀಡಾಗಿ ಬಂದ ಕಾರು ಡಿಕ್ಕಿ, ಲೇಡಿ ಕಾಲು ಕಟ್!

Car Hits Pedestrian / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದಲ್ಲಿ ನಿನ್ನೆ ದಿನ ನಡೆದ ಒಂದು ಘಟನೆ ಬಗ್ಗೆ ತಿಳಿದವರು, ಹೀಗಾದರೆ ಹೇಗಪ್ಪ ಎನ್ನುತ್ತಿದ್ದಾರೆ. ಏಕೆಂದರೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಗುದ್ದಿ ಕಾಲೇ ಕಟ್ ಆದರೇ ಆ ಮಹಿಳೆಯ ಪರಿಸ್ಥಿತಿ ಮುಂದೇನು? ಎಂಬುದು ಎಲ್ಲರ ಮನಸಲ್ಲೂ ತಲೆಯಲ್ಲೂ ಒಂದು ಸಣ್ಣ ಕನಿಕರದ ಜೊತೆಗೆ ಭವಿಷ್ಯ ಹಾಗೂ ಜೀವನದ ಕ್ಷಣಿಕತೆಯನ್ನು ತೆರೆದಿಡುತ್ತದೆ.

Whatsapp / https://chat.whatsapp.com/JrsZ8He4nN600n0r3tJItz

ಅಂದಹಾಗೆ ನಿನ್ನೆ ನಡೆದಿದ್ದು ಇಷ್ಟು, ಇಲ್ಲಿನ ಬ್ಲಡ್ ಬ್ಯಾಂಕ್ ಸಮೀಪ, ರೈಲ್ವೆ ಸ್ಟೇಷನ್​ ಬಳಿಯಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಮಹಿಳೆಯೊಬ್ಬರ ಪಾದವೇ ತುಂಡಾಗಿತ್ತು. (Car Hits Pedestrian) ವಿನಾಯಕ ನಗರದ ನಿವಾಸಿ ಲತಾ (43) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಕಾಲೇಜು ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ. ರೋಟರಿ ರಕ್ತನಿಧಿ ಕೇಂದ್ರದ ಸಮೀಪ ಬರುತ್ತಿದ್ದ ಕಾರು, ರಸ್ತೆ ಬದಿ ಸಾಗುತ್ತಿದ್ದ ಲತಾರಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಮುಂದುವರಿದು ಕಾರು ಫುಟ್‌ಪಾತ್‌ನ ಕಬ್ಬಿಣದ ರೇಲಿಂಗ್‌ಗೆ ಅಪ್ಪಳಿಸಿದೆ. ಪರಿಣಾಮವಾಗಿ ರೇಲಿಂಗ್‌ ಪುಡಿಪುಡಿಯಾಗಿದೆ. ರ್ಯಾಶ್​ ಡ್ರೈವಿಂಗ್ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಇನ್ನೂ ಘಟನೆ ಬೆನ್ನಲ್ಲೆ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.