ರೈಲು ಪ್ರಯಾಣಿಕರ ಗಮನಕ್ಕೆ: ಜೂನ್ 18 ಮತ್ತು 23 ರಂದು ಶಿವಮೊಗ್ಗ, ಮೈಸೂರು, ತಾಳಗುಪ್ಪ ರೈಲುಗಳು ರದ್ದು, ತಡವಾಗಿ ಸಂಚಾರ!

ಹಂಚಿಕೊಳ್ಳಿ
WhatsApp Facebook X Telegram
South Western Railway Shimoga-Talaguppa Trains Mysore Shimoga Train South Western Railway Train Cancellations on Feb 16 South Western Railway Deepavali Special Train Kumsi Railway Station railway updates railway news 
South Western Railway Shimoga-Talaguppa Trains Mysore Shimoga Train South Western Railway Train Cancellations on Feb 16 South Western Railway Deepavali Special Train Kumsi Railway Station railway updates railway news 

South Western Railway ಹೊಳೆನರಸೀಪುರ ಮತ್ತು ಮಾವಿನಕೆರೆ ರೈಲ್ವೆ ನಿಲ್ದಾಣಗಳ ಮಧ್ಯೆ ರಸ್ತೆ ಕೆಳಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದಾಗಿ, ಶಿವಮೊಗ್ಗ, ತಾಳಗುಪ್ಪ ಹಾಗೂ ಮೈಸೂರು ಮಾರ್ಗದ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

ಕೆಳಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 18 ಮತ್ತು ಜೂನ್ 23 ರಂದು ಅರಸೀಕೆರೆ–ಮೈಸೂರು ದೈನಂದಿನ ಪ್ಯಾಸೆಂಜರ್ (ರೈಲು ಸಂಖ್ಯೆ: 56267), ಮೈಸೂರು–ತಾಳಗುಪ್ಪ ದೈನಂದಿನ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16206) ಹಾಗೂ ತಾಳಗುಪ್ಪ–ಮೈಸೂರು ದೈನಂದಿನ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16205) ರೈಲುಗಳ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಇದೇ ದಿನಾಂಕಗಳಂದು ಚಲಿಸಬೇಕಿದ್ದ ಮೈಸೂರು–ಶಿವಮೊಗ್ಗ ಟೌನ್ ದೈನಂದಿನ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16225) ರೈಲಿನ ಸೇವೆಯನ್ನು ಮೈಸೂರು ಮತ್ತು ಅರಸೀಕೆರೆ ನಿಲ್ದಾಣಗಳ ಮಧ್ಯೆ ಭಾಗಶಃ ರದ್ದುಗೊಳಿಸಲಾಗಿದೆ. ಈ ಎರಡು ದಿನಗಳಲ್ಲಿ ಈ ರೈಲು ಮೈಸೂರಿನಿಂದ ಹೊರಡುವ ಬದಲಿಗೆ, ಅರಸೀಕೆರೆ ನಿಲ್ದಾಣದಿಂದಲೇ ತನ್ನ ನಿಗದಿತ ಸಮಯಕ್ಕೆ ಶಿವಮೊಗ್ಗದತ್ತ ಸಂಚಾರ ಆರಂಭಿಸಲಿದೆ 

ಜೂನ್ 18 ಮತ್ತು 23 ರಂದು ಪ್ರಯಾಣ ಆರಂಭಿಸುವ ಮೈಸೂರು–ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16208) ರೈಲಿನ ಸಂಚಾರವನ್ನು ಮಾರ್ಗಮಧ್ಯೆ ನಿಯಂತ್ರಿಸಲಾಗುತ್ತಿದೆ. ಅದರಂತೆ ಜೂನ್ 18 ರಂದು 30 ನಿಮಿಷ ಹಾಗೂ ಜೂನ್ 23 ರಂದು ಬರೋಬ್ಬರಿ 120 ನಿಮಿಷಗಳು (2 ಗಂಟೆ) ಈ ರೈಲು ಮಾರ್ಗಮಧ್ಯೆ ತಡವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

South Western Railway Announces Train Cancellations

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor