ಶಿವಮೊಗ್ಗದಲ್ಲಿ ಏನೇಲ್ಲಾ ನಡೆಯಿತು? ಕಂಪ್ಲೀಟ್​ ರೀಪೋರ್ಟ್​ನೊಂದಿಗೆ ಇವತ್ತಿನ ಮಲೆನಾಡು ಟುಡೆ ಇ ಪತ್ರಿಕೆ

ಹಂಚಿಕೊಳ್ಳಿ
WhatsApp Facebook X Telegram
Malenadu Today E-Paper

Shivamogga daily news / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೇಂದ್ರ ಸರ್ಕಾರವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮೋಟಾರ್ ಸ್ಪಿರಿಟ್ ಮತ್ತು ಹೈಸ್ಪೀಡ್ ಡೀಸೆಲ್ ಸಗಟು ಖರೀದಿಯನ್ನು ಸೀಮಿತಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಸಬ್ಸಿಡಿ ದರದ ಇಂಧನವು ಬೇರೆಡೆಗೆ ಹರಿಯುವುದನ್ನು ತಡೆಯುವ ಉದ್ದೇಶದಿಂದ 90 ದಿನಗಳ ಕಾಲ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ನಿಯಮಾವಳಿಗಳ ಅನ್ವಯ ವಿತರಕರು ಯಾವುದೇ ಒಬ್ಬ ಗ್ರಾಹಕನಿಗೆ ಅಥವಾ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್‌ಗಿಂತ ಹೆಚ್ಚು ಡೀಸೆಲ್ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಾಣಿಜ್ಯ ಮತ್ತು ಸಾಂಸ್ಥಿಕ ಬಳಕೆದಾರರು ತಮ್ಮ ಇಂಧನ ಅಗತ್ಯಗಳನ್ನು ಕಡ್ಡಾಯವಾಗಿ ಕ್ಯಾಪ್ಟಿವ್ ಪಂಪ್‌ಗಳ ಮೂಲಕವೇ ಪಡೆಯುವಂತೆ ಅಧಿಸೂಚನೆಯಲ್ಲಿ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಪೂರ್ತಿ ಸುದ್ದಿ (Shivamogga daily news)ಪಿಎಡಿಫ್​ನಲ್ಲಿದೆ. ಸುದ್ದಿಯ ಕೆಳಭಾಗದಲ್ಲಿ ಕ್ಲಿಕ್​ ಮಾಡಿ ಓದಬಹುದು

ಮಲೆನಾಡಿನ ಪ್ರಮುಖ ಸಂಪರ್ಕ ಕೊಂಡಿಯಾದ ಶಿವಮೊಗ್ಗದ ಹುಲಿಕಲ್ ಘಾಟಿ ರಸ್ತೆಯನ್ನು ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಭೂಕುಸಿತದಿಂದ ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಬಂದ್ ಆಗಿದ್ದ ಈ ರಸ್ತೆಯನ್ನು ಇದೀಗ ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಮತ್ತೊಂದೆಡೆ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ವತಿಯಿಂದ 3.70 ಕೋಟಿ ರೂಪಾಯಿ ವೆಚ್ಚದಲ್ಲಿ 1200 ಮೀಟರ್ ಉದ್ದದ ಹೊರ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಭೂಮಿಪೂಜೆ ನೆರವೇರಿಸಲಾಗಿದೆ

ಸಾಗರ ತಾಲೂಕಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಬಿರುಸಿನ ಸಂಚಾರ ನಡೆಸಿ, ಕಣಪಗಾರು ಗ್ರಾಮದಲ್ಲಿ ನೂತನ ಬಿಎಸ್‌ಎನ್‌ಎಲ್ ಟವರ್ ಅನ್ನು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಿದರು. ಬಳಿಕ ತಾಳಗುಪ್ಪ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಖುದ್ದಾಗಿ ಪರಿಶೀಲಿಸಿದರು.

Shivamogga daily news / ಇವತ್ತಿನ ಇ ಪೇಪರ್​ನ ಪ್ರಮುಖ ಸುದ್ದಿಗಳು

  • ಇನ್ನೊಂದೆಡೆ, ರಸ್ತೆ ಅಭಿವೃದ್ಧಿಗೆ ಆಡಳಿತ ಯಂತ್ರ ಸ್ಪಂದಿಸದ ಹಿನ್ನೆಲೆಯಲ್ಲಿ ಪಡವಗೋಡು ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಶ್ರಮದಾನ ಮಾಡಿ, ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ.
  • ಇನ್ನು, ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ನೀತಿಯನ್ನು ವಿರೋಧಿಸಿ ಹೊಸನಗರ ಹಾಗೂ ಸಾಗರದಲ್ಲಿ ಮೆಸ್ಕಾಂ ನೌಕರರು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
  • ಶಿವಮೊಗ್ಗದ ಗಾಂಧಿ ಬಜಾರ್ ಸಮೀಪ ಇತ್ತೀಚೆಗೆ ನಡೆದ ನರಸಿಂಹ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
  • ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ವೈದ್ಯಕೀಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸಾಗರದ ಡಾ. ಧನ್ಯತಾ ಟಿ.ಎಸ್. ಅವರು 7ನೇ ರ್‍ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
  • ಸಾಗರದಲ್ಲಿ ಜೋಷಿ ಫೌಂಡೇಶನ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ 25000 ಉಚಿತ ನೋಟ್‌ಪುಸ್ತಕ ವಿತರಣೆ ಮಾಡುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ.
  • ಶಿವಮೊಗ್ಗದಲ್ಲಿ ಕೃಷಿ ಮತ್ತು ಅರಣ್ಯ ಸಂಘರ್ಷ ಹಾಗೂ ಸಾಮರಸ್ಯ ಕುರಿತ ಬೃಹತ್ ಕಾರ್ಯಾಗಾರ ನಡೆದಿದ್ದು, ನಿಸರ್ಗದ ಉಳಿವಿಗಾಗಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಹಬಾಳ್ವೆಯ ಅಗತ್ಯತೆಯನ್ನು ತಜ್ಞರು ಬಲವಾಗಿ ಪ್ರತಿಪಾದಿಸಿದ್ದಾರೆ.

ಇ ಪೇಪರ್​ ಡೌನ್​ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ : ಮಲೆನಾಡು ಟುಡೆ ಜನ ಮನದ ಜೀವ ನದಿ

ಇ ಪೇಪರ್​ನ್ನ ಆನ್​ಲೈನ್​ನಲ್ಲಿಯೇ ನೋಡುವುದಾದರೆ, ಇಲ್ಲಿದೆ ಗಮನಿಸಿ

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor