ತಾಯಿ ತಂಗಿ ಜಗಳವಾಡುತ್ತಿದ್ದಾರೆ ಎಂದು 112 ಪೊಲೀಸರಿಗೆ ಬಂತು ಫೋನ್​​ ಕಾಲ್​ : ಸ್ಥಳಕ್ಕೆ ತೆರಳಿದಾಗ ಕಾದಿತ್ತು ಶಾಕ್​​

ಹಂಚಿಕೊಳ್ಳಿ
WhatsApp Facebook X Telegram
Police Attend Fake 112 Call from Mentally Ill Person
Police Attend Fake 112 Call from Mentally Ill Person

ಶಿವಮೊಗ್ಗ : ಮನೆಯಲ್ಲಿ ಗಲಾಟೆಯಾಗುತ್ತಿದೆ ಎಂದು 112 ಪೊಲೀಸರಿಗೆ  ಬಂದ ಕರೆಯೊಂದನ್ನು ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿಗೆ ಅಸಲಿ ಸತ್ಯ ತಿಳಿದು ಆಶ್ಚರ್ಯಗೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ: ವ್ಯಾಪಾರಿಯ ಗುಜುರಿ ವಸ್ತುವಿಗೆ ಕನ್ನ ಹಾಕ್ತಿದ್ದ ಮಹಿಳಾ ಕಳ್ಳರ ಗ್ಯಾಂಗ್​​: ಪ್ರಕರಣದ ಪತ್ತೆಯಾಗಿದ್ದು ಹೇಗೆ ಗೊತ್ತಾ? 

ಘಟನೆಯ ವಿವರ

ಕಳೆದ ಜೂನ್ 7ರಂದು ಶಿವಮೊಗ್ಗದ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಸಾರ್ವಜನಿಕರೊಬ್ಬರು 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದರು. ತಮ್ಮ ತಾಯಿ ಮತ್ತು ತಂಗಿ ಮನೆಯಲ್ಲಿ ಭೀಕರವಾಗಿ ಗಲಾಟೆ ಮಾಡುತ್ತಿದ್ದಾರೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ  ಇಆರ್‌ವಿ (ERV) ಸಿಬ್ಬಂದಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ದೂರುದಾರರು ತಿಳಿಸಿದ ಸ್ಥಳಕ್ಕೆ ಧಾವಿಸಿದ್ದಾರೆ. 

ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ವಿಚಾರಣೆ ನಡೆಸಿದಾಗ ಅಲ್ಲಿ ಯಾವುದೇ ಗಲಾಟೆ ನಡೆದಿರಲಿಲ್ಲ. ಅಸಲಿಗೆ ಕರೆ ಮಾಡಿದ್ದ ದೂರುದಾರರೇ ಕಳೆದ ಕೆಲವು ತಿಂಗಳುಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಕೇವಲ ಭ್ರಮೆಯಿಂದಾಗಿ ಅವರು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿರುವುದು ದೃಢಪಟ್ಟಿದೆ. ನಂತರ ಪೊಲೀಸರು ದೂರುದಾರರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಅವರ ಕುಟುಂಬದ ಸದಸ್ಯರಿಗೆ ತಿಳಿವಳಿಕೆ ನೀಡಿ ವಾಪಸಾಗಿದ್ದಾರೆ.

Police Attend Fake 112 Call from Mentally Ill Person

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor