ವರದಕ್ಷಿಣೆಗಾಗಿ ಕಿರುಕುಳ, ಆರೋಪಿಗೆ ಕೋರ್ಟ್​ ಕೊಟ್ಟಿದ್ದು ಎಷ್ಟು ವರ್ಷ ಶಿಕ್ಷೆ ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

Dowry Harassment ಶಿವಮೊಗ್ಗ: ಶಿವಮೊಗ್ಗ ನಗರದ ಅಬ್ಬಲಗೆರೆ ಹುಣಸೋಡು ಗ್ರಾಮದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವರದಕ್ಷಿಣೆಗಾಗಿ ನೀಡಿದ ಕಿರುಕುಳಕ್ಕಾಗಿ 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡವನ್ನು ವಿಧಿಸಿದೆ.

ಕುಸ್ತಿ ಚಾಂಪಿಯನ್‌ಶಿಫ್‌ನಲ್ಲಿ ಶಿವಮೊಗ್ಗದ ಇಬ್ಬರು ಕುಸ್ತಿಪಟುಗಳಿಗೆ ಬಂಗಾರ ಪದಕ

ಘಟನೆಯ ವಿವರ

ಶಿವಮೊಗ್ಗ ನಗರದ ಅಬ್ಬಲಗೆರೆ ಹುಣಸೋಡು ಗ್ರಾಮದ ವಾಸಿ ಶ್ರೀನಿವಾಸ್ ಎಂಬುವವರು ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಕಾವ್ಯ 2023ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ 2024ರಲ್ಲಿ 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸಾಕ್ಷಿ ವಿಚಾರಣೆ ನಡೆಸಿ, ವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಿದ್ಧರಾಜು ಎನ್.ಕೆ. ಇವರು, ಆರೋಪಿ ಶ್ರೀನಿವಾಸನಿಗೆ ಕಲಂ: 498(ಎ) ಐಪಿಸಿ ಅಪರಾಧದಡಿ ಮೂರು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ ಹತ್ತು ಸಾವಿರ ರೂ.ಗಳ ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.

Dowry Harassment Case in Shivamogga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor