ತೀರ್ಥಹಳ್ಳಿ: 8 ಮೂಟೆ, 4 ಲಕ್ಷದ ಮಾಲು, ಒಂದೇ ತಿಂಗಳಲ್ಲಿ ಗಾಡಿ ಸಮೇತ ಇಬ್ಬರು ಅರೆಸ್ಟ್​, ಏನಿದು ಪ್ರಕರಣ

ಹಂಚಿಕೊಳ್ಳಿ
WhatsApp Facebook X Telegram
Thirthahalli Arecanut Theft Case Solved
Thirthahalli Arecanut Theft Case Solved

ತೀರ್ಥಹಳ್ಳಿ: ರಂಜದಕಟ್ಟೆ ಗ್ರಾಮದಲ್ಲಿ ಬೇಯಿಸಿ ಒಣಗಿಸಿದ್ದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ: 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!

Thirthahalli ಘಟನೆಯ ವಿವರ

ಈ ಹಿಂದೆ ಅಂದರೆ ಜೂನ್ ತಿಂಗಳಲ್ಲಿ ರಂಜದಕಟ್ಟೆ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಸುಮಾರು 8 ಚೀಲ ಅಡಿಕೆಯನ್ನು ಬೇಯಿಸಿ ಒಣಗಿಸಿದ್ದರು. ಆದರೆ ಯಾರೋ ಕಳ್ಳರು ಮಧ್ಯಾಹ್ನದ ವೇಳೆ 09 ಕ್ವಿಂಟಾಲ್ ತೂಕದ, ಸುಮಾರು 4,50,000 ರೂಪಾಯಿ ಮೌಲ್ಯದ ಅಡಿಕೆಯನ್ನು ಕದ್ದು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ದೂರುದಾರರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಬಿಜಾಪುರದ ಮಹಬೂಬಸಾಬ ದಾದಾಪೀರ್ ಹಾಗೂ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಹುಲಗೂರು ಗ್ರಾಮದ ನಿವಾಸಿ ಕಾಸಿಮ ಸಾಬ ಬೇಪಾರಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕಳವು ಮಾಡಲಾಗಿದ್ದ 4,50,000/- ರೂ. ಮೌಲ್ಯದ 9 ಕ್ವಿಂಟಾಲ್ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕಳ್ಳತನಕ್ಕೆ ಬಳಸಿದ್ದ 6,00,000/- ರೂ. ಮೌಲ್ಯದ ಅಶೋಕ್ ಲೈಲಾಂಡ್ ದೋಸ್ತ್ ಪ್ಲಸ್ ಗೂಡ್ಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Thirthahalli Arecanut Theft Case Solved

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor