ಭದ್ರಾವತಿ : ಹಳೇ ದ್ವೇಶದ ಹಿನ್ನೆಲೆ ಯುವಕನ ಮೇಲೆ ಎರಡೂ ಕೈ ತುಂಡಾಗುವ ರೀತಿಯಲ್ಲಿ ಮಾರಣಾಂತಿಕ ಹಲ್ಲೆ 

ಹಂಚಿಕೊಳ್ಳಿ
WhatsApp Facebook X Telegram
Youth Brutally Attacked in Bhadravathi
Youth Brutally Attacked in Bhadravathi

ಭದ್ರಾವತಿ :  ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ ಅನ್ವರ್ ಕಾಲೋನಿ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಶಿವಮೊಗ್ಗ: ವ್ಯಾಪಾರಿಯ ಗುಜುರಿ ವಸ್ತುವಿಗೆ ಕನ್ನ ಹಾಕ್ತಿದ್ದ ಮಹಿಳಾ ಕಳ್ಳರ ಗ್ಯಾಂಗ್​​: ಪ್ರಕರಣದ ಪತ್ತೆಯಾಗಿದ್ದು ಹೇಗೆ ಗೊತ್ತಾ? 

ಭದ್ರಾವತಿಯ ಹಳದಮ್ಮ ಬೀದಿಯ ನಿವಾಸಿಯಾದ ವಿಶ್ವ (35) ಎಂಬಾತನೇ ದಾಳಿಗೆ ಒಳಗಾದ ದುರ್ದೈವಿ. ವಿಶ್ವ ಸಂಚರಿಸುತ್ತಿದ್ದಾಗ, ಕಾರಿನಲ್ಲಿ ಧಾವಿಸಿ ಬಂದ ನಾಲ್ವರು  ದುಷ್ಕರ್ಮಿಗಳು ಆತನನ್ನು ಸುತ್ತುವರೆದಿದ್ದಾರೆ. ಹಳೇ ವೈಷಮ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ವಿಶ್ವನ ಮೇಲೆ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ವಿಶ್ವನ ಎರಡು ಕೈಗಳು ಸಂಪೂರ್ಣವಾಗಿ ತುಂಡಾಗುವ ಸ್ಥಿತಿ ತಲುಪಿವೆ ಎನ್ನಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ತಕ್ಷಣವೇ ಸ್ಥಳೀಯರು ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಹಳೆ ಹಗೆತನವೇ ಈ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದ್ದು, ಪರಾರಿಯಾಗಿರುವ  ದುಷ್ಕ್ರರ್ಮಿಗಳ ಪತ್ತೆಗಾಗಿ  ಪೊಲೀಸರು ಬಲೆ ಬೀಸಿದ್ದಾರೆ.

Youth Brutally Attacked in Bhadravathi

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor