7 ನೇ ತರಗತಿ ಅಡ್ಮಿಷನ್​​ಗಾಗಿ 20 ಸಾವಿರ ಲಂಚಕ್ಕೆ ಬೇಡಿಕೆ, ಪ್ರಿನ್ಸಿಪಾಲ್​ ಲೋಕಾಯುಕ್ತ ಬಲೆಗೆ

ಹಂಚಿಕೊಳ್ಳಿ
WhatsApp Facebook X Telegram
Karnataka Pension Scheme
Karnataka Pension Scheme

Bhadravathi ಶಿವಮೊಗ್ಗ: ಭದ್ರಾವತಿ ತಾಲೂಕಿನ ಎಳನೀರು ವ್ಯಾಪಾರಿಯೊಬ್ಬರ ಮಗಳನ್ನು 7 ನೇ ತರಗತಿಗೆ ಅಡ್ಮಿಷನ್ ಮಾಡಿಕೊಳ್ಳಲು ಲಂಚಕ್ಕೆ ಬೇಡಿಕೆ ಇಟ್ಟ ಸ್ಥಳೀಯ ಶಾಲೆಯ ಪ್ರಿನ್ಸಿಪಾಲ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ :  ಸಸ್ಯಹಾರಿ ಬರ್ಗರ್​ ಬದಲಿಗೆ ಮಾಂಸಹಾರಿ ಬರ್ಗರ್​​​ ಕೊಟ್ಟ ಸಂಸ್ಥೆಗೆ 20 ಸಾವಿರ ದಂಡ

ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿ, ಎಳನೀರು ವ್ಯಾಪಾರಿ ಚಂದ್ರಪ್ಪ (35) ಎಂಬುವವರು ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿರುವ ಸ್ಥಳೀಯ ವಸತಿ ಶಾಲೆಗೆ ತಮ್ಮ ಮಗಳನ್ನು 7ನೇ ತರಗತಿಗೆ ಅಡ್ಮಿಷನ್ ಮಾಡಲು ತೆರಳಿದ್ದರು. ಈ ವೇಳೆ ಶಾಲೆಯ ಪ್ರಿನ್ಸಿಪಾಲ್ ಅವರು ಮಗಳ ಅಡ್ಮಿಷನ್‌ಗಾಗಿ ಡ್ರಮ್ ಸೆಟ್ ಕೊಡುವ ನೆಪದಲ್ಲಿ 20,000 ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. 

ಆದರೆ ಲಂಚ ನೀಡಲು ಇಷ್ಟವಿಲ್ಲದ ಮೇಘರಾಜ್ ಅವರು ಈ ಕುರಿತು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಜುಲೈ 18, 2026 ರಂದು ಸ್ವೀಕರಿಸಿದ ದೂರಿನ ಆಧಾರದ ಮೇಲೆ, ಲೋಕಾಯುಕ್ತ ಅಧಿಖಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ‘

ಇದಾದ ನಂತರ, ಜುಲೈ 20, 2026 ರಂದು ಮಧ್ಯಾಹ್ನ 12.20 ಗಂಟೆಯ ಸುಮಾರಿಗೆ ವಸತಿ ಶಾಲೆಯ ತಮ್ಮ ಕೊಠಡಿಯಲ್ಲಿ ಪ್ರಿನ್ಸಿಪಾಲ್ ಅವರು ದೂರುದಾರರಿಂದ 10,000 ರೂಪಾಯಿ ಮುಂಗಡ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಮಾಡಿದ್ದಾರೆ. ಲಂಚದ ಹಣವನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು, ಪ್ರಿನ್ಸಿಪಾಲ್ ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಈ ಕಾರ್ಯಾಚರಣೆಯನ್ನು ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಬಿ.ಪಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ರುದ್ರೇಶ್ ಕೆ.ಪಿ., ವೀರಬಸಪ್ಪ ಎಲ್. ಕುಸಲಾಪುರ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor