ಮಲೆನಾಡು ರೈಲ್ವೆ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಬೀರೂರು – ತಾಳಗುಪ್ಪ ಮಾರ್ಗದಲ್ಲಿ ಇನ್ಮುಂದೆ ಸೂಪರ್ ಫಾಸ್ಟ್ ಜರ್ನಿ!

ಕೊನೆಯ ನವೀಕರಣ: 24 ಮೇ 2026, 12:19 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
SWR Train Trains Cancelled Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
SWR Train Trains Cancelled Birur-Talguppa Railway Train Servis Changed Changed Shivamogga-Talaguppa Train Marikamba Jatre Special Train Railway Halt Extended Special Train to Sagara Marikamba Jathre from Feb 3 Shivamogga Train Timings Change 2026 Dasara Special Trains

Birur-Talguppa Railway ಶಿವಮೊಗ್ಗ: ಮಲೆನಾಡು ಭಾಗದ ರೈಲ್ವೆ ಪ್ರಯಾಣಿಕರ ಪಾಲಿಗೆ ನೈಋತ್ಯ ರೈಲ್ವೆ ವಲಯವು ಸಂತಸದ ಸುದ್ದಿಯೊಂದನ್ನು ನೀಡಿದೆ. ಈ ಪ್ರಾಂತ್ಯದ ಬೀರೂರು – ತಾಳಗುಪ್ಪ ರೈಲ್ವೆ ಮಾರ್ಗದಲ್ಲಿ ರೈಲುಗಳ ಗರಿಷ್ಠ ಸಂಚಾರಿ ವೇಗವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇನ್ಮುಂದೆ ಈ ಭಾಗದ ಸಾರ್ವಜನಿಕರ ಪ್ರಯಾಣದ ಸಮಯ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ.

ಶಿವಮೊಗ್ಗದ ಈ ಪ್ರದೇಶಗಳಲ್ಲಿ ಈ ದಿನ ಕರೆಂಟ್​ ಇರಲ್ಲ

ರೈಲ್ವೆ ಇಲಾಖೆಯ ತಾಂತ್ರಿಕ ಮೇಲ್ದರ್ಜೀಕರಣ ಕಾಮಗಾರಿಗಳ ಬಳಿಕ ಹಳಿಗಳ ಸಾಮರ್ಥ್ಯಕ್ಕೆ ತಕ್ಕಂತೆ ವೇಗದ ಮಿತಿಯನ್ನು ಪರಿಷ್ಕರಿಸಲಾಗಿದ್ದು, ಬೀರೂರು ನಿಂದ ಕುಂಸಿ ವರೆಗಿನ ಮಾರ್ಗದಲ್ಲಿ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ ಇದ್ದ 90 ಕಿ.ಮೀ ನಿಂದ ನೇರವಾಗಿ 110 ಕಿ.ಮೀ ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಆನಂದಪುರಂ ನಿಂದ ಸಾಗರ ಜಂಬಗಾರು ನಿಲ್ದಾಣಗಳ ಮಧ್ಯೆ ಗರಿಷ್ಠ ವೇಗವನ್ನು ಗಂಟೆಗೆ 70 ಕಿ.ಮೀ ನಿಂದ 75 ಕಿ.ಮೀ ಗೆ ಏರಿಕೆ ಮಾಡಲಾಗಿದ್ದರೆ, ಸಾಗರ ಜಂಬಗಾರು ನಿಂದ ತಾಳಗುಪ್ಪ ಸೆಕ್ಷನ್‌ನಲ್ಲಿಯೂ ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ ಭರ್ಜರಿ 110 ಕಿ.ಮೀ ಗೆ ಹೆಚ್ಚಳ ಮಾಡಲಾಗಿದೆ.

Birur-Talguppa Railway Track Speed Upgraded

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor