ಮೀಸಲು ಅರಣ್ಯದಲ್ಲಿ ಚಿರತೆ ಬೇಟೆಯಾಡಿ ಕೊಂದಿದ್ದ ಜಾಲ ಪತ್ತೆ; ನಾಲ್ವರ ಬಂಧನ, ಬಂದೂಕು, ಉಗುರು ಜಪ್ತಿ!

ಕುಂದಾಪುರ: ತಾಲೂಕಿನ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದ ಸಿದ್ದಾಪುರ–ಶಿವಮೊಗ್ಗ ಜಿಲ್ಲಾ ರಸ್ತೆ ಬದಿಯಲ್ಲಿ ಚಿರತೆಯನ್ನು ಕೊಂದು ಬಿಸಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿ ಜಂಟಿ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ವನ್ಯಜೀವಿ ಹತ್ಯೆಯ ಈ ದಂಧೆಗೆ ಸಂಬಂಧಿಸಿದಂತೆ ಸದ್ಯ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜಾಲದ ಸಮೇತ ಸೆರೆಹಿಡಿದಿದ್ದಾರೆ. 

ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಈ ದಿನ ಕರೆಂಟ್​​ ಇರಲ್ಲ 

ಪ್ರಕರಣದ ತನಿಖೆ ವೇಳೆ ಲಭ್ಯವಾದ ಗೌಪ್ಯ ಮಾಹಿತಿಯ ಆಧಾರದ ಮೇಲೆ ಮೊದಲು ಎ4 ಆರೋಪಿ ಮಂಜುನಾಥ ಶೆಟ್ಟಿ ಎಂಬಾತನನ್ನು ಬಂಧಿಸಲಾಗಿತ್ತು. ಈತನನ್ನುವಿಚಾರಣೆಗೆ ಒಳಪಡಿಸಿದಾಗ ಸಿಕ್ಕ ಸುಳಿವುಗಳನ್ನು ಬೆನ್ನತ್ತಿದ ಅಧಿಕಾರಿಗಳ ತಂಡ, ಎ1 ಆರೋಪಿ ಮಹಮ್ಮದ್ ನದೀಮ್ ಕರಾಣಿ ಎ5 ಆರೋಪಿ ನಾಗರಾಜ ಭೋವಿ ಮತ್ತು ಎ6 ಆರೋಪಿ ವೆಂಕಟರಮಣ ಭೋವಿಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. 

Leopard ಬೇಟೆಗೆ ಬಳಸಿದ ಬಂದೂಕು, ಚಿರತೆ ಉಗುರುಗಳು ಜಪ್ತಿ

ಬಂಧಿತ ಜೂಜುಕೋರರು ನೀಡಿದ ಸ್ವೀಕೃತಿ ಹೇಳಿಕೆ ಹಾಗೂ ಅವರು ತೋರಿಸಿದ ಅರಣ್ಯದ ಸ್ಥಳದ ಆಧಾರದ ಮೇಲೆ, ಹತ್ಯೆಗೀಡಾದ ಚಿರತೆಯ ಕಾಲಿನ ನಾಲ್ಕು ಉಗುರುಗಳು, ಮೂಳೆಯ ಅವಶೇಷಗಳು, ಬೇಟೆಗೆ ಬಳಸಿದ್ದ ಒಂದು ಬಂದೂಕು, ಐದು ಸಜೀವ ಗುಂಡುಗಳು ಮತ್ತು ಕೃತ್ಯಕ್ಕೆ ಬಳಸಲಾದ ಎರಡು ಬೈಕ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಕುಂದಾಪುರದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leopard Poaching Racket Busted in Kundapura