ಓಡಾಡಲು ತೊಂದರೆ ಆಗ್ತಿದೆ ನಾಯಿ ಕಟ್ಟಿ ಹಾಕಿ ಎಂದಿದ್ದಕ್ಕೆ ಪಕ್ಕದ ಮನೆಯವನ ಮೇಲೆ ಹಲ್ಲೆ: ಆಮೇಲೆ ಆಗಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
Dog Dispute Turns Violent in Shivamogga
Dog Dispute Turns Violent in Shivamogga

Dog Dispute ಶಿವಮೊಗ್ಗ, ನಗರದತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಕ್ಕದ ಮನೆಯ ನಾಯಿಯ ವಿಚಾರವಾಗಿ ಶುರುವಾದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ ಹಲ್ಲೆ ನಡೆದಿರುವ ಘಟನೆ ನಡೆದಿದೆ. ನೆರೆಹೊರೆಯವರ ನಡುವೆ ನಡೆದ ಈ ಗಲಾಟೆಯ ಹಿನ್ನೆಲೆಯಲ್ಲಿ ನೊಂದ ದೂರುದಾರರು ತಕ್ಷಣವೇ ತುರ್ತು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ತಮಗೆ ಆದ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ.

ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಈ ದಿನ ಕರೆಂಟ್​​ ಇರಲ್ಲ 

ದೂರುದಾರರು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಪಕ್ಕದ ಮನೆಯವರು ಸಾಕಿರುವ ನಾಯಿ ಸಾರ್ವಜನಿಕವಾಗಿ ಓಡಾಡಲು ತೊಂದರೆ ನೀಡುತ್ತಿತ್ತು. ಈ ಕಾರಣಕ್ಕೆ ನಾಯಿಯನ್ನು ಸರಿಯಾಗಿ ಕಟ್ಟಿ ಹಾಕುವಂತೆ ನೆರೆಮನೆಯವರಿಗೆ ಹೇಳಿದ್ದಕ್ಕೆ, ಅವರು ಜಗಳ ತೆಗೆದು ದೂರುದಾರರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಕರೆ ಬಂದ ತಕ್ಷಣ ತುಂಗಾನಗರ ಇಆರ್‌ವಿ ಪೊಲೀಸ್ ಸಿಬ್ಬಂದಿಗಳು ತಡಮಾಡದೆ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಎದುರುದಾರರು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಸ್ಥಳದಲ್ಲಿ ಯಾರೂ ಸಿಗದ ಕಾರಣ, ಪೊಲೀಸರು ದೂರುದಾರರಿಗೆ ಧೈರ್ಯ ತುಂಬಿ, ಈ ಗಲಾಟೆಯ ಕುರಿತು ಕಾನೂನು ಕ್ರಮ ಜರುಗಿಸಲು ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.

Dog Dispute Turns Violent in Shivamogga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor