ಶಿವಮೊಗ್ಗ: ಬಾಡಿಗೆ ಕೊಡಲ್ಲ, ಮನೆ ಖಾಲಿಯೂ ಮಾಡಲ್ಲ; ಮಾಲೀಕನೊಂದಿಗೆ ಬಾಡಿಗೆದಾರನ ರಂಪಾಟ, ಪೊಲೀಸರ ಎಂಟ್ರಿ!

ಹಂಚಿಕೊಳ್ಳಿ
WhatsApp Facebook X Telegram
Tenant-Owner Dispute in Shivamogga
Tenant-Owner Dispute in Shivamogga

Tenant-Owner Dispute ಶಿವಮೊಗ್ಗ: ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆದಾರ ಹಾಗೂ ಮನೆ ಮಾಲೀಕರ ನಡುವೆ ಜಗಳ ನಡೆದಿದ್ದು, ಮನೆ ಖಾಲಿ ಮಾಡಲು ಮತ್ತು ಬಾಡಿಗೆ ನೀಡಲು ನಿರಾಕರಿಸಿ ಗಲಾಟೆ ಮಾಡಿರುವ ಘಟನೆ ವರದಿಯಾಗಿದೆ. ಈ ಕುರಿತು ಮನೆ ಮಾಲೀಕರು ತಕ್ಷಣವೇ ತುರ್ತು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡಿದ್ದಾರೆ.

ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ಈ ದಿನ ಕರೆಂಟ್​​ ಇರಲ್ಲ 

ದೂರುದಾರರು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಅವರ ಮನೆಯಲ್ಲಿ ವಾಸವಿರುವ ಬಾಡಿಗೆದಾರರು ಸರಿಯಾಗಿ ಮನೆ ಬಾಡಿಗೆಯನ್ನೂ ಕೊಡದೆ, ಅತ್ತ ಮನೆಯನ್ನೂ ಖಾಲಿ ಮಾಡದೆ ಅನಗತ್ಯವಾಗಿ ಗಲಾಟೆ ಮಾಡುತ್ತಿದ್ದರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಕರೆ ಬಂದ ತಕ್ಷಣ ವಿನೋಬನಗರ ಇಆರ್‌ವಿ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಪೊಲೀಸರು ಬರುವಷ್ಟರಲ್ಲಿ ಎದುರುದಾರರು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಸ್ಥಳದಲ್ಲಿ ಯಾರೂ ಸಿಗದ ಕಾರಣ, ಇಆರ್‌ವಿ ಸಿಬ್ಬಂದಿಗಳು ದೂರುದಾರರಿಗೆ ಈ ಸಮಸ್ಯೆಯ ಕುರಿತು ಕಾನೂನು ರೀತ್ಯಾ ಕ್ರಮ ಜರುಗಿಸಲು ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ.

Tenant-Owner Dispute in Shivamogga

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor