ಮಳೆಗಾಲ ಶುರುವಾಗುತ್ತಿದೆ! ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ, ಪಿಕ್​ಅಪ್​, ಚಕ್ರಾ, ಸಾವೇಹಕ್ಲು ಜಲಾಶಯಗಳ ನೀರಿನ ಸಂಗ್ರಹ ಮಾಹಿತಿ

ಹಂಚಿಕೊಳ್ಳಿ
WhatsApp Facebook X Telegram
ಮಳೆಗಾಲ ಶುರುವಾಗುತ್ತಿದೆ! ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ, ಪಿಕ್​ಅಪ್​, ಚಕ್ರಾ, ಸಾವೇಹಕ್ಲು ಜಲಾಶಯಗಳ ನೀರಿನ ಸಂಗ್ರಹ ಮಾಹಿತಿ Water Levels of Shivamogga Reservoirs Today
ಮಳೆಗಾಲ ಶುರುವಾಗುತ್ತಿದೆ! ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ, ಪಿಕ್​ಅಪ್​, ಚಕ್ರಾ, ಸಾವೇಹಕ್ಲು ಜಲಾಶಯಗಳ ನೀರಿನ ಸಂಗ್ರಹ ಮಾಹಿತಿ Water Levels of Shivamogga Reservoirs Today

ಶಿವಮೊಗ್ಗ / ಇನ್ನೇನು ಈ ತಿಂಗಳ ಅಂತ್ಯಕ್ಕೆ ಮುಂಗಾರು ಪ್ರವೇಶ ಆಗಲಿದೆ ಅಂತಾ ಹವಾಮಾನ ಇಲಾಖೆ ಹೇಳುತ್ತಿದೆ. ಈ ಗುಡ್​ನ್ಯೂಸ್​ ಬೆನ್ನಲ್ಲೆ ಜಲಾಶಯಗಳಿಂದ ಒಂದಿಷ್ಟು ಒಳ್ಳೆಯ ಸುದ್ದಿ ಬಂದಿದೆ. ಈ ಸಲ ಮಲೆನಾಡ ಜಲಾಶಯಗಳಲ್ಲಿ ಸಾಕಷ್ಟು ನೀರು ಉಳಿದಿದೆ. ಹಾಗಾಗಿ ಮುಂಗಾರಿನ ಆರ್ಭಟ ಜೋರಾಗಿದ್ದರೇ, ಮಳೆಗಾಲದ ಆರಂಭದಲ್ಲಿಯೇ ಡ್ಯಾಮ್​ಗಳ ಗೇಟ್​ಗಳು ಒಪನ್​ ಆಗುವ ನಿರೀಕ್ಷೆ ಇದೆ.

ಜಲಾಶಯಗಳ ನೀರಿನ ಸಂಗ್ರಹ / ಲಿಂಗನಮಕ್ಕಿ ಜಲಾಶಯ

ಅಂದಹಾಗೆ, ಇವತ್ತಿನ ಅಂದರೆ, ಮೇ 18ರ ಬೆಳಗಿನ ವರದಿಯ ಪ್ರಕಾರ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳ ಪೈಕಿ ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ 1759.90 ಅಡಿಗಳಷ್ಟಿದೆ.ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 1764.50 ಅಡಿ ನೀರಿತ್ತು. ಪ್ರಸ್ತುತ ಜಲಾಶಯಕ್ಕೆ 217 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಟ್ಟು 6311 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ 27.53 ಟಿಎಂಸಿ ಅಂದರೆ ಶೇಕಡಾ 18.15 ರಷ್ಟು ನೀರು ಸಂಗ್ರಹವಾಗಿದೆ. ಉಳಿದಂತೆ ಕಳೆದ 24 ಗಂಟೆಗಳಲ್ಲಿ ಜಲಾಶಯದ ವ್ಯಾಪ್ತಿಯಲ್ಲಿ 28 ಮಿಲಿಮೀಟರ್ ಮಳೆಯಾಗಿದೆ.

ಜಲಾಶಯಗಳ ನೀರಿನ ಸಂಗ್ರಹ / ಭದ್ರಾ ಜಲಾಶಯ

ಭದ್ರಾ ಜಲಾಶಯದ ಇಂದಿನ ಮಟ್ಟ 138 ಅಡಿ 5 ಇಂಚುಗಳಷ್ಟಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 137 ಅಡಿ 7 ಇಂಚುಗಳಷ್ಟಿತ್ತು. 71.535 ಟಿಎಂಸಿ ಸಾಮರ್ಥ್ಯದ ಡ್ಯಾಮ್‌ನಲ್ಲಿ ಪ್ರಸ್ತುತ 25.821 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 312 ಕ್ಯೂಸೆಕ್ ಒಳಹರಿವು ಇದ್ದು, ಬಲದಂಡೆ ನಾಲೆಯಲ್ಲಿ 1494 ಕ್ಯೂಸೆಕ್, ಎಡದಂಡೆ ನಾಲೆಯಲ್ಲಿ 228 ಕ್ಯೂಸೆಕ್ ಹಾಗೂ ನದಿಗೆ 875 ಕ್ಯೂಸೆಕ್ ಸೇರಿ ಒಟ್ಟು 2719 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ವಿಶೇಷ ಸೂಚನೆಯ ಪ್ರಕಾರ, ಮೇ 17ರ ಸಂಜೆ 6 ಗಂಟೆಗೆ ಭದ್ರಾ ಜಲಾಶಯದ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳ ಗೇಟ್‌ಗಳನ್ನು ಮುಚ್ಚಲಾಗಿದ್ದು, ಇನ್ನು ಮುಂದೆ ಕಾಲುವೆಯಲ್ಲಿ ಯಾವುದೇ ಹೊರ ಹರಿವು ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯಗಳ ನೀರಿನ ಸಂಗ್ರಹ / ತುಂಗಾ ಜಲಾಶಯ

ತುಂಗಾ ಜಲಾಶಯದಲ್ಲಿ ಪ್ರಸ್ತುತ 586.51 ಮೀಟರ್ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 587.60 ಮೀಟರ್ ನೀರಿತ್ತು. ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 3.24 ಟಿಎಂಸಿ ಆಗಿದ್ದು, ಪ್ರಸ್ತುತ 2.309 ಟಿಎಂಸಿ ನೀರು ಲಭ್ಯವಿದೆ. ಜಲಾಶಯಕ್ಕೆ 90 ಕ್ಯೂಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ 90 ಕ್ಯೂಸೆಕ್ ನೀರನ್ನು ನದಿಗೆ ಹಾಗೂ ಕುಡಿಯುವ ಉದ್ದೇಶಕ್ಕಾಗಿ ಹೊರಬಿಡಲಾಗುತ್ತಿದೆ.

ಮಾಣಿ, ಪಿಕ್​ಅಪ್​, ಚಕ್ರಾ, ಸಾವೇಹಕ್ಲು

ವಾರಾಹಿ ಜಲವಿದ್ಯುತ್ ಯೋಜನೆಯ ಅಡಿಯಲ್ಲಿ ಬರುವ ಜಲಾಶಯಗಳ ಪೈಕಿ, ಮಾಣಿ ಡ್ಯಾಮ್‌ನ ಇಂದಿನ ಮಟ್ಟ 576.72 ಮೀಟರ್ ಇದೆ. ಜಲಾಶಯದಲ್ಲಿ ಶೇಕಡಾ 22.058 ರಷ್ಟು ನೀರು ಸಂಗ್ರಹವಿದ್ದು, 562 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಹೊರಬಿಡಲಾಗುತ್ತಿದೆ. ಪಿಕಪ್ ಡ್ಯಾಮ್‌ನಲ್ಲಿ ಪ್ರಸ್ತುತ 563.26 ಮೀಟರ್ ನೀರಿದೆ. 806 ಕ್ಯೂಸೆಕ್ ಒಳಹರಿವಿದ್ದು, 470 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಚಕ್ರಾ ಡ್ಯಾಮ್‌ನಲ್ಲಿ ಪ್ರಸ್ತುತ 563.88 ಮೀಟರ್ ನಷ್ಟು ನೀರಿದೆ. ಸಾವೇಹಕ್ಲು ಡ್ಯಾಮ್‌ನಲ್ಲಿ 572 ಮೀಟರ್ ನಷ್ಟಿದೆ. ಇನ್ನೂ ಮಾಣಿ ಜಲಾಶಯದ ವ್ಯಾಪ್ತಿಯಲ್ಲಿ 15 ಮಿಲಿಮೀಟರ್ ಮಳೆಯಾಗಿದೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor