‘ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್’ (POMIS) : 5 ವರ್ಷದಲ್ಲಿ 5.55 ಲಕ್ಷ ಬಡ್ಡಿ! ಎಲ್ಲರಿಗೂ ಅನುಕೂಲ ಈ ಸ್ಕೀಮ್

ಹಂಚಿಕೊಳ್ಳಿ
WhatsApp Facebook X Telegram
Post Office Monthly Income Scheme explain 'ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್' (POMIS) 5 ವರ್ಷದಲ್ಲಿ 5.55 ಲಕ್ಷ ಬಡ್ಡಿ! ಎಲ್ಲರಿಗೂ ಅನುಕೂಲ ಈ ಸ್ಕೀಮ್
Post Office Monthly Income Scheme explain 'ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್' (POMIS) 5 ವರ್ಷದಲ್ಲಿ 5.55 ಲಕ್ಷ ಬಡ್ಡಿ! ಎಲ್ಲರಿಗೂ ಅನುಕೂಲ ಈ ಸ್ಕೀಮ್

ಶಿವಮೊಗ್ಗ ಮಾಹಿತಿ : ಕೆಲವೊಮ್ಮೆ ಹೂಡಿಕೆಯನ್ನು ಎಲ್ಲಿ ಮಾಡಬೇಕು! ಯಾವುದು ಸುರಕ್ಷಿತ! ಎನ್ನುವ ಯೋಚನೆಯಲ್ಲಿ ಹೂಡಿಕೆಯ ದುಡ್ಡು ಖರ್ಚಾಗಿರುತ್ತದೆ. ಅಂತಹವರಿಗಾಗಿ ಮಲೆನಾಡು ಟುಡೆ ಹೊಸ ರೀತಿಯ ಮಾಹಿತಿ ನೀಡಲಿದೆ. ಇದರ ಮೊದಲ ಹಂತವಾಗಿ ಇಂದು ಕೇಂದ್ರ ಸರ್ಕಾರದ ಅತ್ಯಂತ ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಒಂದಾದ ‘ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್’ (POMIS) ಬಗೆಗಿನ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ (POMIS)

ಅಂದಹಾಗೆ ಈ ಯೋಜನೆಯು ಪತಿ ಮತ್ತು ಪತ್ನಿಗೆ ಪ್ರತಿ ತಿಂಗಳು ಗ್ಯಾರಂಟಿ ಆದಾಯವನ್ನು ಒದಗಿಸುವ ಭರವಸೆಯನ್ನು ನೀಡುತ್ತದೆ. 5 ವರ್ಷಗಳ ಅವಧಿಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಆರ್ಥಿಕ ಭದ್ರತೆಯ ಜೊತೆಗೆ ಉತ್ತಮ ಬಡ್ಡಿಯನ್ನು ಪಡೆಯಬಹುದಾಗಿದೆ.

ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣದ ಮಾಹಿತಿಯ ಪ್ರಕಾರ, ಪ್ರಸ್ತುತ ಈ ಅಂಚೆ ಕಚೇರಿ ಯೋಜನೆಯು ವಾರ್ಷಿಕ ಶೇಕಡಾ 7.4 ರಷ್ಟು ಬಡ್ಡಿದರವನ್ನು ನೀಡುತ್ತಿದ್ದು, ಪ್ರತಿ ತಿಂಗಳು ಬಡ್ಡಿಯ ಮೊತ್ತವನ್ನು ಪಾವತಿಸಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಗಂಡ ಮತ್ತು ಹೆಂಡತಿ ಜಂಟಿ ಖಾತೆಯ (Joint Account) ಮೂಲಕ ಗರಿಷ್ಠ 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. 15 ಲಕ್ಷ ರೂಪಾಯಿಗಳನ್ನು ಒಮ್ಮೆಲೆ ಹೂಡಿಕೆ ಮಾಡಿದರೆ, ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 9,250 ರೂಪಾಯಿಗಳ ನಿಶ್ಚಿತ ಆದಾಯವು ಖಚಿತವಾಗಿ ಜಮೆಯಾಗಲಿದೆ. ಐದು ವರ್ಷಗಳ ಅವಧಿ ಮುಕ್ತಾಯದ ವೇಳೆಗೆ ಒಟ್ಟು 5.55 ಲಕ್ಷ ರೂಪಾಯಿ ಕೇವಲ ಬಡ್ಡಿಯ ರೂಪದಲ್ಲಿಯೇ ಲಭ್ಯವಾಗಲಿದೆ.

ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ (POMIS) ಪ್ರಮುಖ ನಿಯಮಗಳು

ಹೂಡಿಕೆ ಮಿತಿ: ಈ ಯೋಜನೆಯಲ್ಲಿ ಕನಿಷ್ಠ 1,000 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು. ವೈಯಕ್ತಿಕ ಖಾತೆಯ (Single Account) ಮೂಲಕ ಗರಿಷ್ಠ 9 ಲಕ್ಷ ರೂಪಾಯಿಗಳವರೆಗೆ ಹಾಗೂ ಮೂರು ಮಂದಿ ಸೇರಿ ಜಂಟಿ ಖಾತೆಯ ಮೂಲಕ ಗರಿಷ್ಠ 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮೆಚ್ಯೂರಿಟಿ ಅವಧಿ: ಯೋಜನೆಯ ಒಟ್ಟು ಅವಧಿ 5 ವರ್ಷಗಳಾಗಿವೆ.

Premature Closure : ಖಾತೆ ತೆರೆದ ಒಂದು ವರ್ಷದವರೆಗೆ ಹೂಡಿಕೆ ಹಿಂಪಡೆಯಲು ಅವಕಾಶವಿರುವುದಿಲ್ಲ. 1 ವರ್ಷದ ನಂತರ ಹಾಗೂ 3 ವರ್ಷಗಳಿಗೂ ಮುನ್ನ ಖಾತೆಯನ್ನು ಮುಚ್ಚಿದರೆ, ಅಸಲು ಮೊತ್ತದಿಂದ ಶೇಕಡಾ 2ರಷ್ಟು ಕಡಿತಗೊಳಿಸಿ ಬಾಕಿ ಹಣ ನೀಡಲಾಗುತ್ತದೆ. 3 ವರ್ಷಗಳ ನಂತರ ಹಾಗೂ 5 ವರ್ಷಗಳಿಗೂ ಮುನ್ನ ಖಾತೆ ಮುಚ್ಚಿದರೆ, ಅಸಲಿನಲ್ಲಿ ಶೇಕಡಾ 1ರಷ್ಟು ಮೊತ್ತವನ್ನು ದಂಡವಾಗಿ ಕಡಿತಗೊಳಿಸಿ ಮರುಪಾವತಿಸಲಾಗುತ್ತದೆ.

ಅಧಿಕೃತ ಮಾಹಿತಿಯ ಮೂಲ (Source Link): ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್: https://www.indiapost.gov.in/

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor