ಬೆಂಗಳೂರು / ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಅಬಕಾರಿ ಸುಂಕ ವಿಧಿಸುವ ನೂತನ ನೀತಿಯು ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಣ್ಣೆ ಬಾಟಲಿಗಳ ರೇಟಿನಲ್ಲಿ ಏರುಪೇರಾಗಿಗೆ. ಕೆಲವು ಡ್ರಿಂಕ್ಸ್ಗಳ ರೇಟು ಹೆಚ್ಚಿದ್ದು ಮತ್ತೆ ಕೆಲವು ಪ್ರೀಮಿಯಮ್ ಬ್ರ್ಯಾಂಡ್ ರೇಟು ಕಡಿಮೆಯಾಗಿದೆ.
ಈ ಸಂಬಂಧ ಅಬಕಾರಿ ಇಲಾಖೆಯು ಅತಿಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ವಿಸ್ಕಿ, ರಮ್, ಬ್ರಾಂಡಿ, ಜಿನ್, ವೋಡ್ಕಾ ಹಾಗೂ ಬಿಯರ್‌ಗಳ ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ದರಗಳನ್ನು (ಎಂಆರ್‌ಪಿ) ಅಧಿಕೃತವಾಗಿ ಪ್ರಕಟಿಸಿದೆ. ವಿಶೇಷ ಅಂದರೆ, ಮದ್ಯಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಾದ ಐಬಿ, ಎಂಸಿ, ಒಜಿ, ವಿವಿಧ ರಮ್‌ಗಳು ಹಾಗೂ ಬಿಯರ್ ಬೆಲೆಗಳಲ್ಲಿ ಏರಿಳಿತಗಳಾಗಿದ್ದು, ಹೊಸ ದರಗಳು ಕುತೂಹಲ ಮೂಡಿಸ್ತಿದೆ.
ಮುಖ್ಯವಾಗಿ ಅತಿ ಹೆಚ್ಚು ಬಿಕರಿಯಾಗುವ ಬ್ರ್ಯಾಂಡ್‌ಗಳ ಬೆಲೆಗಳನ್ನು ಗಮನಿಸುವುದಾದರೆ, ಐಬಿ (ಇಂಪೀರಿಯಲ್ ಬ್ಲೂ) 90 ಎಂಎಲ್ ಬೆಲೆ 110 ರೂಪಾಯಿ ಹಾಗೂ 180 ಎಂಎಲ್ ಬೆಲೆ 215 ರೂಪಾಯಿ ಆಗಿದೆ. ಎಂಸಿ (ಮ್ಯಾಕ್‌ಡೊವೆಲ್ಸ್ ನಂಬರ್ 1 ಸೆಲೆಬ್ರೇಷನ್ ಕ್ಲಾಸಿಕ್ ತ್ರಿಬಲ್ ಎಕ್ಸ್ ರಮ್) 90 ಎಂಎಲ್ ದರ 85 ರೂಪಾಯಿ ಹಾಗೂ 180 ಎಂಎಲ್ ದರ 165 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಒಜಿ (ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ) 90 ಎಂಎಲ್ ಗೆ 55 ರೂಪಾಯಿ, 180 ಎಂಎಲ್ ಗೆ 110 ರೂಪಾಯಿ ಹಾಗೂ 750 ಎಂಎಲ್ ಗೆ 485 ರೂಪಾಯಿ ಬೆಲೆ ಹೊಂದಿದೆ. ಮತ್ತೊಂದು ಒಜಿ (ಓಲ್ಡ್ ಗ್ರೈನ್ ವಿಸ್ಕಿ) 180 ಎಂಎಲ್ ದರ 155 ರೂಪಾಯಿ ಆಗಿದೆ.
ರಮ್ ವಿಭಾಗದಲ್ಲಿ ಲೆಗಸಿ ಸ್ಪೆಷಲ್ ತ್ರಿಬಲ್ ಎಕ್ಸ್ ರಮ್ 180 ಎಂಎಲ್ ಗೆ 90 ರೂಪಾಯಿ, ಕಾರ್ನಿವಲ್ ತ್ರಿಬಲ್ ಎಕ್ಸ್ ರಮ್ 180 ಎಂಎಲ್ ಗೆ 95 ರೂಪಾಯಿ ಹಾಗೂ ಬ್ಯಾಗ್‌ಪೈಪರ್ ತ್ರಿಬಲ್ ಎಕ್ಸ್ ರಮ್ 180 ಎಂಎಲ್ ಗೆ 135 ರೂಪಾಯಿ ಆಗಿದೆ. ಬಿಯರ್ ದರಗಳಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಜನಪ್ರಿಯ ಕಿಂಗ್‌ಫಿಷರ್ ಪ್ರೀಮಿಯಂ ಲಾಗರ್ 650 ಎಂಎಲ್ ಗೆ 110 ರೂಪಾಯಿ ಹಾಗೂ ಕಿಂಗ್‌ಫಿಷರ್ ಸ್ಟ್ರಾಂಗ್ ಪ್ರೀಮಿಯಂ 650 ಎಂಎಲ್ ಗೆ 180 ರೂಪಾಯಿ ನಿಗದಿಯಾಗಿದೆ. ಬಡ್‌ವೈಸರ್ ಪ್ರೀಮಿಯಂ ಕಿಂಗ್ ಆಫ್ ಬಿಯರ್ಸ್ 650 ಎಂಎಲ್ ಗೆ 205 ರೂಪಾಯಿ, ಟುಬೋರ್ಗ್ ಸ್ಟ್ರಾಂಗ್ 650 ಎಂಎಲ್ ಗೆ 170 ರೂಪಾಯಿ ದರ ಪಿಕ್ಸ್ ಆಗಿದೆ.
ಪರಿಷ್ಕೃತ ಮದ್ಯದ ದರಪಟ್ಟಿಯ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ:
- ಲೆಗಸಿ ಸ್ಪೆಷಲ್ ತ್ರಿಬಲ್ ಎಕ್ಸ್ ರಮ್: 90 ಎಂಎಲ್ ಗೆ 45, 180 ಎಂಎಲ್ ಗೆ 90, 750 ಎಂಎಲ್ ಗೆ 370 ರೂಪಾಯಿ.
- ಕಾರ್ನಿವಲ್ ತ್ರಿಬಲ್ ಎಕ್ಸ್ ರಮ್: 90 ಎಂಎಲ್ ಗೆ 55, 180 ಎಂಎಲ್ ಗೆ 95, 750 ಎಂಎಲ್ ಗೆ 385 ರೂಪಾಯಿ.
- ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ (ಒಜಿ): 90 ಎಂಎಲ್ ಗೆ 55, 180 ಎಂಎಲ್ ಗೆ 110, 750 ಎಂಎಲ್ ಗೆ 485 ರೂಪಾಯಿ.
- ಮ್ಯಾಕ್‌ಡೊವೆಲ್ಸ್ ನಂಬರ್ 1 ಸೆಲೆಬ್ರೇಷನ್ ರಮ್ (ಎಂಸಿ): 90 ಎಂಎಲ್ ಗೆ 85, 180 ಎಂಎಲ್ ಗೆ 165 ರೂಪಾಯಿ.
- ಓಲ್ಡ್ ಗ್ರೈನ್ ವಿಸ್ಕಿ: 180 ಎಂಎಲ್ ಗೆ 155 ರೂಪಾಯಿ.
- ಇಂಪೀರಿಯಲ್ ಬ್ಲೂ ವಿಸ್ಕಿ (ಐಬಿ): 90 ಎಂಎಲ್ ಗೆ 110, 180 ಎಂಎಲ್ ಗೆ 215 ರೂಪಾಯಿ.
- ಬ್ಯಾಗ್‌ಪೈಪರ್ ತ್ರಿಬಲ್ ಎಕ್ಸ್ ರಮ್: 90 ಎಂಎಲ್ ಗೆ 70, 180 ಎಂಎಲ್ ಗೆ 135, 750 ಎಂಎಲ್ ಗೆ 560 ರೂಪಾಯಿ.
- ಕಿಂಗ್‌ಫಿಷರ್ ಸ್ಟ್ರಾಂಗ್ ಪ್ರೀಮಿಯಂ ಬಿಯರ್: 650 ಎಂಎಲ್ ಬಾಟಲ್ ಗೆ 180 ರೂಪಾಯಿ, 500 ಎಂಎಲ್ ಕ್ಯಾನ್‌ಗೆ 140 ರೂಪಾಯಿ.
- ಕಿಂಗ್‌ಫಿಷರ್ ಪ್ರೀಮಿಯಂ ಲಾಗರ್ ಬಿಯರ್: 650 ಎಂಎಲ್ ಬಾಟಲ್ ಗೆ 110 ರೂಪಾಯಿ, 500 ಎಂಎಲ್ ಕ್ಯಾನ್‌ಗೆ 80 ರೂಪಾಯಿ.
- ಬಡ್‌ವೈಸರ್ ಮ್ಯಾಗ್ನಮ್ ಬಿಯರ್: 650 ಎಂಎಲ್ ಬಾಟಲ್ ಗೆ 250 ರೂಪಾಯಿ, 500 ಎಂಎಲ್ ಕ್ಯಾನ್‌ಗೆ 200 ರೂಪಾಯಿ.
- ಬಡ್‌ವೈಸರ್ ಪ್ರೀಮಿಯಂ ಕಿಂಗ್ ಆಫ್ ಬಿಯರ್ಸ್: 650 ಎಂಎಲ್ ಬಾಟಲ್ ಗೆ 205 ರೂಪಾಯಿ.
- ಟುಬೋರ್ಗ್ ಸ್ಟ್ರಾಂಗ್ ಪ್ರೀಮಿಯಂ ಬಿಯರ್: 650 ಎಂಎಲ್ ಬಾಟಲ್ ಗೆ 170 ರೂಪಾಯಿ, 500 ಎಂಎಲ್ ಕ್ಯಾನ್‌ಗೆ 130 ರೂಪಾಯಿ.
- ನಾಕ್‌ಔಟ್ ಹೈ ಪಂಚ್ ಸ್ಟ್ರಾಂಗ್ ಬಿಯರ್: 650 ಎಂಎಲ್ ಬಾಟಲ್ ಗೆ 175 ರೂಪಾಯಿ, 500 ಎಂಎಲ್ ಕ್ಯಾನ್‌ಗೆ 135 ರೂಪಾಯಿ.
- ಬ್ಲ್ಯಾಕ್ ಅಂಡ್ ವೈಟ್ ಬ್ಲೆಂಡೆಡ್ ಸ್ಕಾಚ್ ವಿಸ್ಕಿ: 180 ಎಂಎಲ್ ಗೆ 580 ರೂಪಾಯಿ, 750 ಎಂಎಲ್ ಗೆ 2375 ರೂಪಾಯಿ.
- ಜಾನಿ ವಾಕರ್ ಬ್ಲ್ಯಾಕ್ ಲೇಬಲ್: 180 ಎಂಎಲ್ ಗೆ 1105 ರೂಪಾಯಿ, 750 ಎಂಎಲ್ ಗೆ 4005 ರೂಪಾಯಿ.
ಉಳಿದಂತೆ ಪೂರ್ತಿ ಪಟ್ಟಿಯನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw




