ಆಪರೇಷನ್ ಸಿಂದೂರ್​ ಗೆ ಒಂದು ವರ್ಷ! ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗೋಷ್ಟಿ! ಮಹತ್ವದ ಮಾತು!

ಹಂಚಿಕೊಳ್ಳಿ
WhatsApp Facebook X Telegram
ಆಪರೇಷನ್ ಸಿಂದೂರ್​ ಗೆ ಒಂದು ವರ್ಷ! ಸಂಸದ ಬಿ.ವೈ. ರಾಘವೇಂದ್ರ ಮಹತ್ವದ ಮಾತು! B.Y. Raghavendra statement Operation Sindoor
ಆಪರೇಷನ್ ಸಿಂದೂರ್​ ಗೆ ಒಂದು ವರ್ಷ! ಸಂಸದ ಬಿ.ವೈ. ರಾಘವೇಂದ್ರ ಮಹತ್ವದ ಮಾತು! B.Y. Raghavendra statement Operation Sindoor

ಶಿವಮೊಗ್ಗ: ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯು ಕೇವಲ ಸೇನಾ ಕ್ರಮವಲ್ಲ, ಅದು ಭಾರತದ ಬಲಿಷ್ಟ ಸಂಕಲ್ಪದ ಸಂಕೇತವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.

ಆಪರೇಷನ್ ಸಿಂದೂರ್​ ಗೆ ಒಂದು ವರ್ಷ ಹಿನ್ನೆಲೆಯಲ್ಲಿ ಸಂಸದರ ಪ್ರತಿಕ್ರಿಯೆ

ನಿನ್ನೆ ದಿನ ಶಿವಮೊಗ್ಗದ ಪ್ರೆಸ್ಟ್​ ಟ್ರಸ್ಟ್​ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್​ನಲ್ಲಿ ಅಮಾಯಕ ಭಾರತೀಯರ ಹತ್ಯೆ ಮಾಡಿದ ಉಗ್ರರಿಗೆ ಭಾರತ ನೀಡಿದ ದಿಟ್ಟ ಪ್ರತ್ಯುತ್ತರವೇ ಆಪರೇಷನ್ ಸಿಂದೂರ. ಈ ಬೃಹತ್ ಸೇನಾ ಕಾರ್ಯಾಚರಣೆ ನಡೆದು ಒಂದು ವರ್ಷ ಪೂರೈಸಿದೆ. 2025ರ ಮೇ 7ರಂದು ಭಾರತೀಯ ಸೇನಾಪಡೆಗಳು ಪಾಕಿಸ್ತಾನದ ಒಳಗಿರುವ ಸುಮಾರು 9 ರಿಂದ 10 ಉಗ್ರಗಾಮಿ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದು ಭಾರತದ ರಕ್ಷಣಾ ನೀತಿಯಲ್ಲಿ ಹೊಸ ಇತಿಹಾಸ ಬರೆದಿದೆ ಎಂದರು. 

ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಕೇಂದ್ರ ಸರ್ಕಾರ ಜೀರೋ ಟಾಲರೆನ್ಸ್ ನೀತಿಯನ್ನು ಅನುಸರಿಸುತ್ತಿದೆ. ಭಾರತವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎಂಬ ಸ್ಪಷ್ಟ ಸಂದೇಶ ವನ್ನು ಈ ಆಪರೇಷನ್​ ಶತ್ರು ರಾಷ್ಟ್ರಗಳಿಗೆ ನೀಡಲಾಗಿದೆ.ಈ ಕಾರ್ಯಾಚರಣೆಯಲ್ಲಿ ಬಳಸಲಾದ ಕ್ಷಿಪಣಿಗಳು ಆತ್ಮನಿರ್ಭರ ಭಾರತ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿವೆ. ಸ್ವದೇಶಿ ತಂತ್ರಜ್ಞಾನದ ಬಲವನ್ನು ಇದು ಜಗತ್ತಿಗೆ ತೋರಿಸಿಕೊಟ್ಟಿದೆ  

ಬಿ.ವೈ.ರಾಘವೇಂದ್ರ ಸಂಸದರು, ಶಿವಮೊಗ್ಗ,

ನಮ್ಮ ದೇಶದ ಅಮಾಯಕ ನಾಗರಿಕರ ರಕ್ತಕ್ಕೆ ಉತ್ತರವಾಗಿ ಶತ್ರುಗಳು ಅಡಗಿದ್ದ ಗುಹೆಯನ್ನೇ ಹೊಕ್ಕಿ ಹೊಡೆಯುವ ಶಕ್ತಿ ಭಾರತೀಯ ಸೇನೆಗಿದೆ ಎಂದು ಆಪರೇಷನ್ ಸಿಂದೂರ್​ ಇತಿಹಾಸದಲ್ಲಿ ದಾಖಲಿಸಿದೆ ಎಂದು ಸಂಸದರು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

 ಆಪರೇಷನ್ ಸಿಂದೂರ್​ ಗೆ ಒಂದು ವರ್ಷ!  ಸಂಸದ ಬಿ.ವೈ. ರಾಘವೇಂದ್ರ ಮಹತ್ವದ ಮಾತು! B.Y. Raghavendra statement Operation Sindoor
ಆಪರೇಷನ್ ಸಿಂದೂರ್​ ಗೆ ಒಂದು ವರ್ಷ! ಸಂಸದ ಬಿ.ವೈ. ರಾಘವೇಂದ್ರ ಮಹತ್ವದ ಮಾತು! B.Y. Raghavendra statement Operation Sindoor

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor