ಅಗ್ನಿವೀರ್, ಪ್ಯಾರಾ ಮಿಲಿಟರಿ ಹಾಗೂ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ  ಇಲ್ಲಿದೆ ಗುಡ್​ ನ್ಯೂಸ್​​

ಹಂಚಿಕೊಳ್ಳಿ
WhatsApp Facebook X Telegram
Agniveer Army Agniveer BSF RecruitmentAgniveer Recruitment Rally
Agniveer Army Agniveer BSF Recruitment Agniveer Recruitment Rally

Agniveer ಶಿವಮೊಗ್ಗ :ಶ್ರೀ ಸಿಗಂದೂರು ಚೌಡೇಶ್ವರಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ. 13 ರಿಂದ 28 ರವರೆಗೆ ಅಗ್ನಿವೀರ್, ಪ್ಯಾರಾ ಮಿಲಿಟರಿ ಮತ್ತು ಪೋಲಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ಹಾಗೂ ಅರ್ಜಿಸಲ್ಲಿಸಬಯಸುವವರಿಗೆ ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್, ಆನಂದಪುರ ಇವರ ನುರಿತ ತರಬೇತುದಾರರಾದ ಯೋಧರಿಂದ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಉಚಿತ ಊಟ ವಸತಿ ಹಾಗೂ ದೈಹಿಕ ಮತ್ತು ಲಿಖಿತ ತರಬೇತಿಗಳು ಮತ್ತು ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿದೆ.

ಶಿವಮೊಗ್ಗ ನಗರದಲ್ಲಿ ಇಂದಿನಿಂದ ಎರಡು ದಿನ ಕುಡಿಯುವ ನೀರಿನ ವ್ಯತ್ಯಯ

ಈ ತರಬೇತಿಗೆ ಹತ್ತನೇ ತರಗತಿ ಉತ್ತೀರ್ಣ ಹೊಂದಿದ 25 ವರ್ಷ ವಯೋಮಿತಿಯೊಳಗಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸೇರಿಕೊಳ್ಳಬಹುದು. ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ರಾಜ್ಯದ ಎಲ್ಲಾ ಆಸಕ್ತ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ದೂ. ಸಂ. 7019776749/ 7406212345/ 9448954052/ 9740980992 ಗಳನ್ನು ಹಾಗೂ https//malnadsoldiercoching.rf.gd. ನ್ನು ಸಂಪರ್ಕಿಸಿ ತಮ್ಮ ಹೆಸರು ಮತ್ತು ಸ್ವವಿವರ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಹಾಗೂ ಮಲ್ನಾಡ್ ಸೋಲ್ಡರ್ ಕೋಚಿಂಗ್ ಸೆಂಟರ್ ಎಂದು ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಹಾಗೂ ಯೂಟ್ಯೂಬ್‌ಗಳಲ್ಲಿ ಕೂಡ ಹೆಚ್ಚಿನ ಮಾಹಿತಿಗಳನ್ನು ನೋಡಬಹುದು. 

ವಿ.ಸೂ. ತರಬೇತಿಗೆ ಹಾಜರಾಗುವವರು ಮೇ. 13 ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಸಿಗಂದೂರು ಶ್ರೀ ಚೌಡಮ್ಮ ದೇವಸ್ಥಾನದ ಆವರಣದಲ್ಲಿ ಕನಿಷ್ಟ ಒಬ್ಬರು ಪೋಷಕರೊಂದಿಗೆ ಹಾಜರಿರುವುದು. ನಂತರದ ದಿನಗಳಲ್ಲಿ ಬರುವವರಿಗೆ ಅವಕಾಶವಿಲ್ಲ. ದೂರವಾಣಿ ಮೂಲಕ ಹೆಸರು ನೊಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ.

Agniveer and Police Training Camp at Sigandur

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor