ನಾಳೆ ಅಂದರೆ ಮೇ 01 ರಿಂದ ಇಂಡಿಗೋ ವಿಮಾನ ಶಿವಮೊಗ್ಗ ಏರ್ಪೋರ್ಟ್‌ನಲ್ಲಿ ಹಾರಾಟವನ್ನು ನಿಲ್ಲಿಸುತ್ತಿದೆ. ಈ ಕುರಿತು ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ:
“ನಮ್ಮ ಶಿವಮೊಗ್ಗ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾಕ್ಕೆ ವಹಿಸಿಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ್ದೇವೆ. ಅದಕ್ಕೆ ಅವರು ಗೌರವವನ್ನು ಕೊಟ್ಟು ವಿಶಾಲ್ ಎಂಬ ಐಎಎಸ್ ಆಫೀಸರ್ ಅನ್ನು ದೆಹಲಿಗೆ ಮಾತುಕತೆಗೆ ಕಳುಹಿಸಿದರು. ಅಲ್ಲಿ ಮಾತುಕತೆಯಲ್ಲಿ ಅನೇಕ ವಿಚಾರಗಳು ಚರ್ಚೆಯಾದವು. ಇದುವರೆಗೆ ವಿಮಾನ ನಿಲ್ದಾಣಕ್ಕೆ ಆದಂತಹ ಎಕ್ಸ್‌ಪೆಂಡಿಚರ್ ಅನ್ನು ಕೇಂದ್ರ ಸರ್ಕಾರ ಕೊಡುವ ವಿಚಾರ ಸೇರಿದಂತೆ, ಪ್ರೈವೇಟ್ ಸೆಕ್ಟರ್‌ಗೆ ಕೊಡುತ್ತಾರಾ ಎಂಬ ವಿಚಾರದ ಬಗ್ಗೆ ಅಲ್ಲಿ ಚರ್ಚೆ ನಡೆಯಿತು,” ಎಂದರು.
#Shivamogga #ShivamoggaAirport #BYRaghavendra #IndigoAirlines #FlightUpdate #KarnatakaNews #AirportAuthorityOfIndia #ShivamoggaNews #PrivateSector #TravelUpdate #ಮಲೆನಾಡು #ಶಿವಮೊಗ್ಗ
