ಶಿವಮೊಗ್ಗ : 50 ಲಕ್ಷ ಲೋನ್​ ಆಸೆಗೆ ಎಲ್ಲಾ ದಾಖಲೆಗಳನ್ನು ನೀಡಿದ್ರು, ಆಮೇಲೆ ಆಗಿದ್ದೇ ಬೇರೆ

ಶಿವಮೊಗ್ಗ : ಫೇಸ್‌ಬುಕ್‌ನಲ್ಲಿ ಕಂಡುಬಂದ ಸಾಲದ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬರು ಬರೋಬ್ಬರಿ 4.71 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.  ಈ ಹಿನ್ನೆಲೆ ಶಿವಮೊಗ್ಗ ಸಿ ಇ ಎನ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ : ಬಟ್ಟೆ ವ್ಯಾಪಾರಿಗೆ ಲಾಂಗ್ ತೋರಿಸಿ ಹಣ ಸುಲಿಗೆ, ಪ್ರಕರಣ ದಾಖಲು

ಘಟನೆ ವಿವರ 

ದೂರುದಾರರು ಕಳೆದ ಏಪ್ರಿಲ್ 14 ರಂದು ಫೇಸ್‌ಬುಕ್ ನೋಡ್ತಿದ್ದಾಗ ಪಿಎಂಇಜಿಪಿ ಸಾಲದ ಕುರಿತಾದ ವಿಡಿಯೋವೊಂದನ್ನು ಗಮನಿಸಿದ್ದರು. ಆ ವಿಡಿಯೋದಲ್ಲಿದ್ದ  ಪೋನ್​ ನಂಬರ್​ ಒಂದಕ್ಕೆ ಕರೆ ಮಾಡಿ ಮಾಡಿ 50 ಲಕ್ಷ ರೂಪಾಯಿ ಸಾಲದ ಬೇಡಿಕೆ ಇಟ್ಟಿದ್ದರು. ಈ ವೇಳೆ ವಂಚಕರು ದೂರುದಾರರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ದಾಖಲೆಗಳನ್ನು ವಾಟ್ಸಾಪ್ ಮೂಲಕ ಪಡೆದುಕೊಂಡಿದ್ದರು. 

ದಾಖಲೆಗಳನ್ನು ಪಡೆದ ಮರುದಿನವೇ ದೂರುದಾರರಿಗೆ ಕರೆ ಮಾಡಿದ ವಂಚಕರು, ಸಾಲದ ಅರ್ಜಿ ಭರ್ತಿ ಮಾಡಿಸಿ ಸಹಿ ಹಾಕಿಸಿಕೊಂಡಿದ್ದರು. ತದನಂತರ ಹಂತ ಹಂತವಾಗಿ ಸಾಲದ ಹಣ ಬಿಡುಗಡೆ ಮಾಡಲು ಇನ್ಶೂರೆನ್ಸ್ ಶುಲ್ಕ, ಮೂರು ತಿಂಗಳ ಮುಂಗಡ ಇಎಂಐ, ಶೇ. 3 ರಷ್ಟು ಕಮಿಷನ್ ಹಾಗೂ ವಿವಿಧ ತೆರಿಗೆಗಳ ಹೆಸರಿನಲ್ಲಿ ಹಣ ಪಾವತಿಸುವಂತೆ ಪುಸಲಾಯಿಸಿದ್ದರು. 

ವಂಚಕರ ಮಾತು ನಂಬಿದ ದೂರುದಾರರು, ತಮ್ಮ ಖಾತೆಯಿಂದ ಮಾತ್ರವಲ್ಲದೆ ತಮ್ಮ ಸ್ನೇಹಿತ ಅತ್ತಿಗೆ ಅವರ ಖಾತೆಗಳಿಂದಲೂ ಸೇರಿ ಒಟ್ಟು 4,71,837/- ರೂಪಾಯಿಗಳನ್ನು ವರ್ಗಾಯಿಸಿದ್ದರು. ಹಣ ಕೈ ಸೇರಿದ ನಂತರ ಆರೋಪಿಗಳು ಸಂಪರ್ಕಕ್ಕೆ ಸಿಗದೆ ವಂಚಿಸಿರುವುದು ದೂರುದಾರರಿಗೆ ತಡವಾಗಿ ಅರಿವಾಗಿದೆ. ಈ ಕುರಿತು ಸಂತ್ರಸ್ತರು  ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ತನಿಖೆ ಮುಂದುವರಿದಿದೆ.

PMEGP Loan Scam Man Loses 4.71 Lakhs