ಸಾಗರ ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಕಳ್ತನ! ಮೈಸೂರು ಜಿಲ್ಲೆ ಹುಣಸೂರು ಮಹಿಳೆ ಅರೆಸ್ಟ್​

ಹಂಚಿಕೊಳ್ಳಿ
WhatsApp Facebook X Telegram
ಸಾಗರ ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಕಳ್ತನ! ಮೈಸೂರು ಜಿಲ್ಲೆ ಹುಣಸೂರು ಮಹಿಳೆ ಅರೆಸ್ಟ್​ ,Sagara theft case Hunsur woman arrested
ಸಾಗರ ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಕಳ್ತನ! ಮೈಸೂರು ಜಿಲ್ಲೆ ಹುಣಸೂರು ಮಹಿಳೆ ಅರೆಸ್ಟ್​ ,Sagara theft case Hunsur woman arrested

ಸಾಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ಘಟನೆ ಸಂಬಂಧ ಸಾಗರ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಮಹಿಳೆಯೊಬ್ಬರ ಬ್ಯಾಗಿನಿಂದ ಚಿನ್ನದ ಸರವೊಂದನ್ನ ಕದ್ದಿದ್ದ ಪ್ರಕರಣದಲ್ಲಿ ಸಾಗರ ಪೇಟೆ ಠಾಣೆ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ.

ಸಾಗರ ಮಾರಿಕಾಂಬಾ ಜಾತ್ರೆ ವೇಳೆ ನಡೆದಿದ್ದ ಕಳ್ಳತನ

ಸಾಗರದ ಪ್ರಸಿದ್ಧ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿ ಈ ಕಳ್ಳತನ ನಡೆದಿತ್ತು. ಜಾತ್ರೆ ಪ್ರಯುಕ್ತ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದ ಜಯಮ್ಮ ಎಂಬುವವರು ತಮ್ಮ ಊರಿಗೆ ಹೊರಡಲು ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಬಸ್ ಹತ್ತಲು ಮುಂದಾದಾಗ, ಅವರ ಬ್ಯಾಗಿನಲ್ಲಿದ್ದ ಗ12 ಗ್ರಾಂ ತೂಕದ ಬಂಗಾರದ ಚೈನ್ ಕಳುವಾಗಿತ್ತು.

ಸಾಗರ ಟೌನ್ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ

ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ 303(2) ಬಿಎನ್ಎಸ್ ಅಡಿಯಲ್ಲಿ ಕೇಸ್ ಆಗಿತ್ತು ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಬೆನಕಪ್ರಸಾದ್ ಎನ್.ಜೆ ಅವರ ಮೇಲ್ವಿಚಾರಣೆಯಲ್ಲಿ ಹಾಗೂ ಸಾಗರ ಪೇಟೆ ಠಾಣೆಯ ಇನ್​ಸ್ಪೆಕ್ಟರ್​ ಪುಲ್ಲಯ್ಯ ರಾಥೋಡ್ ಅವರ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

ತಂಡದಲ್ಲಿ ಪಿಎಸ್ಐ ಶಾಂತರಾಜ್ ಜೆ.ಹೆಚ್, ಮಹಿಳಾ ಎಎಸ್ಐ ಮೀರಾಬಾಯಿ, ಮುಖ್ಯ ಪೇದೆಗಳಾದ ಸನಾವುಲ್ಲ, ಫೈರೋಜ್ ಹಾಗೂ ಪೊಲೀಸ್ ಪೇದೆಗಳಾದ ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಲೋಕೇಶ್​ರವರಿದ್ದರು.

ಮೈಸೂರು ಜಿಲ್ಲೆ ಹುಣಸೂರು ಮಹಿಳೆ ಅರೆಸ್ಟ್​

ಇದೀಗ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ನಿವಾಸಿ 43 ವರ್ಷದ ಸುಮಿತ್ರ ಬಂಧಿತ ಆರೋಪಿ ಬಂಧಿತಳಿಂದ ಕಳುವಾಗಿದ್ದ ಅಂದಾಜು 1,30,000 ರೂಪಾಯಿ ಮೌಲ್ಯದ 12 ಗ್ರಾಂ ತೂಕದ ಬಂಗಾರದ ಚೈನ್ ಅನ್ನು ಪೊಲೀಸರು ಅಮಾನತ್ತು ಪಡಿಸಿಕೊಂಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor