ಆನಂದಪುರ ಸಮೀಪ ಕೌಚು ಬಿದ್ದ ಅಡಿಕೆ ಸಸಿ ತುಂಬಿದ್ದಿ ಲಾರಿ : ಸ್ಥಳಕ್ಕೆ ಬಂದ ಬೇಳೂರು ಏನ್ ಮಾಡಿದ್ರು ನೋಡಿ

https://www.youtube.com/watch?v=Rga0k_05v3I

ಆನಂದಪುರ ಸಮೀಪ ಕೌಚು ಬಿದ್ದ ಅಡಿಕೆ ಸಸಿ ತುಂಬಿದ್ದಿ ಲಾರಿ : ಸ್ಥಳಕ್ಕೆ ಬಂದ ಬೇಳೂರು ಏನ್ ಮಾಡಿದ್ರು ನೋಡಿ

ನಮಸ್ಕಾರ ಮಲೆನಾಡು ಟುಡೆ ವೀಕ್ಷಕರಿಗೆ ಸ್ವಾಗತ. ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ಸಸಿ ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ಎಂಬಲ್ಲಿ ನಡೆದಿದೆ.
ಐಗಿನಬೈಲು ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ನೂರಾರು ಅಡಿಕೆ ಸಸಿಗಳು ರಸ್ತೆಪಾಲಾಗಿವೆ. ಈ ಲಾರಿಯು ಕಾಸ್ಪಾಡಿಯಿಂದ ಮಾಸೂರಿಗೆ ಅಡಿಕೆ ಸಸಿಗಳನ್ನು ಹೊತ್ತೊಯ್ಯುತ್ತಿತ್ತು ಎಂದು ತಿಳಿದುಬಂದಿದೆ. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಆನಂದಪುರ ಸಮೀಪ ನಡೆದ ಘಟನೆ

ಇದೇ ವೇಳೆ ಅನ್ಯ ಕಾರ್ಯದ ನಿಮಿತ್ತ ಇದೇ ಹಾದಿಯಲ್ಲಿ ತೆರಳುತ್ತಿದ್ದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಅಪಘಾತ ನಡೆದ ಸ್ಥಳದಲ್ಲಿ ವಾಹನ ನಿಲ್ಲಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಶಾಸಕರು, ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ವಾಹನವನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.”

#MalenaduToday #Sagara #Anandapura #Accident #GopalakrishnaBeluru #ShivamoggaNews #Shivamogga #BreakingNews #KarnatakaNews #malenadu

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw