ಮಲ್ನಾಡ್ನಲ್ಲಿ ಮತ್ತೆ ಒಂಟಿ ಮನೆಗಳಿಗೆ ಆತಂಕ! ವೃದ್ಧೆಯನ್ನು ಕಟ್ಟಿಹಾಕಿ 18 ಲಕ್ಷ ಲೂಟಿ ಹೊಡೆದ ಕಳ್ಳರು! | SP Nikhil Statement
#ShivamoggaPolice #Agumbe #Thirthahalli #MalenaduNews #CrimeNewsKannada #SPNikhil #Robbery #KarnatakaPolice #ElderlySafety #MalenaduToday #NewsUpdateKannada #ShivamoggaCrime
ಮಲ್ನಾಡ್ನಲ್ಲಿ ಮತ್ತೆ ಒಂಟಿ ಮನೆಗಳಿಗೆ ಆತಂಕ!
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಲಕ್ಕುಂದ ಗ್ರಾಮದ ಹುಂಚಿ ಎಂಬಲ್ಲಿ ಮಟಮಟ ಮಧ್ಯಾಹ್ನ 74 ವರ್ಷದ ವೃದ್ಧೆ ವಿಶಾಲಾಕ್ಷಿ ಅವರ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ, ಹಲ್ಲೆ ನಡೆಸಿ ಕಟ್ಟಿಹಾಕಿ 18 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ನಿಖಿಲ್ ಬಿ. ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲೆನಾಡಿನ ಮನೆಗಳಿಗೆ ಆತಂಕ ತಂದಿರುವ ಈ ಭೀಕರ ಘಟನೆಯ ಬಗ್ಗೆ ಹಾಗೂ ಪೊಲೀಸ್ ತನಿಖೆಯ ಮುಂದಿನ ಕ್ರಮಗಳ ಕುರಿತು ಎಸ್ಪಿ ನಿಖಿಲ್ ಅವರು ನೀಡಿರುವ ಸಂಪೂರ್ಣ ಹೇಳಿಕೆಯನ್ನು ವಿಡಿಯೋದಲ್ಲಿ ವೀಕ್ಷಿಸಿ.
👇 ಸಂಪೂರ್ಣ ವಿಡಿಯೋ ನೋಡಿ ಹಾಗೂ ಲೇಟೆಸ್ಟ್ ಸುದ್ದಿಗಳಿಗಾಗಿ ನಮ್ಮ ಪೇಜ್ ಫಾಲೋ ಮಾಡಿ.
