ಇಂದಿನ ದಿನಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹಾಗೂ ಪಂಚಾಂಗದ ಸಂಪೂರ್ಣ ವಿವರ

Published: 24 ಏಪ್ರಿಲ್ 2026, 8:02 ಫೂರ್ವಾಹ್ನ • 1 min read
▶️ ಸುದ್ದಿ ಆಲಿಸಿ
ಭಾಷೆ (Translate):
✨ AI ಓವರ್‌ವ್ಯೂ (ಮುಖ್ಯಾಂಶ)

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ ಶುಕ್ಲ ಪಕ್ಷದ ಅಷ್ಟಮಿ ತಿಥಿ ರಾತ್ರಿ 11.45 ರವರೆಗೆ, ತದನಂತರ ನವಮಿ ತಿಥಿ ಇರಲಿದೆ. ಪುಷ್ಯ ನಕ್ಷತ್ರ ರಾತ್ರಿ 12.29 ರವರೆಗೆ ಇದ್ದು ತದನಂತರ ಆಶ್ಲೇಷವಿರಲಿದೆ. ಅಮೃತ ಘಳಿಗೆ ಸಂಜೆ 6.23 ರಿಂದ 7.55 ರವರೆಗೆ. ರಾಹುಕಾಲ ಬೆಳಗ್ಗೆ 10.30 ರಿಂದ 12.00 ರವರೆಗೆ…

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ ಶುಕ್ಲ ಪಕ್ಷದ ಅಷ್ಟಮಿ ತಿಥಿ ರಾತ್ರಿ 11.45 ರವರೆಗೆ, ತದನಂತರ ನವಮಿ ತಿಥಿ ಇರಲಿದೆ. ಪುಷ್ಯ ನಕ್ಷತ್ರ ರಾತ್ರಿ 12.29 ರವರೆಗೆ ಇದ್ದು ತದನಂತರ ಆಶ್ಲೇಷವಿರಲಿದೆ. ಅಮೃತ ಘಳಿಗೆ ಸಂಜೆ 6.23 ರಿಂದ 7.55 ರವರೆಗೆ. ರಾಹುಕಾಲ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದ್ದು, ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಇಂದಿನ ದಿನಭವಿಷ್ಯ

ಮೇಷ / ಭಿನ್ನಾಭಿಪ್ರಾಯ ಮೂಡಬಹುದು. ಧನವ್ಯಯ. ಹೆಚ್ಚಿನ ಶ್ರಮ ಅನಿವಾರ್ಯ. ಬಂಧುಗಳ ಭೇಟಿ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಬದಲಾವಣೆ ಕಂಡುಬರಲಿವೆ.

ವೃಷಭ / ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ಪುಣ್ಯಕ್ಷೇತ್ರಗಳ ದರ್ಶನ ಮಾಡಲಿದ್ದೀರಿ. ಉದ್ಯೋಗ ಮತ್ತು ವ್ಯಾಪಾರ ಆಶಾದಾಯಕವಾಗಿರಲಿವೆ.

ಮಿಥುನ / ಎಷ್ಟೇ ಶ್ರಮಪಟ್ಟರೂ ತಕ್ಕ ಪ್ರತಿಫಲ ಸಿಗದು. ಆಸ್ತಿ ವಿವಾದ ಎದುರಾಗಲಿವೆ. ಬಂಧುಗಳೊಂದಿಗೆ ಮನಸ್ತಾಪ ಉಂಟಾಗಬಹುದು. ಅನಾರೋಗ್ಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಾಮಾನ್ಯ ಲಾಭ

ಕರ್ಕಾಟಕ / ಹೊಸ ಕೆಲಸಕ್ಕೆ ಚಾಲನೆ , ಶುಭವಾರ್ತೆ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಸಾಲ ಬಾಧೆ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಮುನ್ನಡೆ ಸಾಧಿಸುವಿರಿ.

ಸಿಂಹ / ಸಾಲ ಆಗಬಹುದು, ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿದೆ. ಕೆಲವು ಕೆಲಸ ನಿಧಾನಗತಿಯಲ್ಲಿ ಸಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗಲಿವೆ.

ಕನ್ಯಾ / ಕೆಲವು ಹಳೆಯ ಬಾಕಿ ವಸೂಲಾಗಲಿವೆ. ಭೋಜನ ಕೂಟಗಳಲ್ಲಿ ಭಾಗವಹಿಸುವಿರಿ. ಕೆಲಸ ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅನುಕೂಲತೆ ಇರಲಿದೆ.

ತುಲಾ / ಉದ್ಯೋಗ ಲಾಭಗಳಿವೆ. ಕೆಲಸ ತ್ವರಿತಗತಿಯಲ್ಲಿ ಸಾಗಲಿವೆ. ಬಂಧುಗಳೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಬೆಲೆಬಾಳುವ ವಸ್ತು ಖರೀದಿ. ಉದ್ಯೋಗ ಮತ್ತು ವ್ಯಾಪಾರ ತೃಪ್ತಿದಾಯಕವಾಗಿರಲಿವೆ.

ವೃಶ್ಚಿಕ / ಆರ್ಥಿಕ ವಹಿವಾಟು ಮಂದಗತಿಯಲ್ಲಿ ಸಾಗಲಿವೆ. ಸಾಲಕ್ಕಾಗಿ ಪ್ರಯತ್ನ ಮಾಡುವಿರಿ. ಕೆಲಸ ಮುಂದೂಡಲ್ಪಡುತ್ತವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಅಗತ್ಯ. ಬಂಧು ಮತ್ತು ಮಿತ್ರರೊಂದಿಗೆ ವಿವಾದ ಏರ್ಪಡಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಾಧಾರಣ

ಧನುಸ್ಸು / ಭಿನ್ನಾಭಿಪ್ರಾಯ ಮೂಡಲಿದೆ. ಅನಾರೋಗ್ಯ . ಕೆಲವು ವ್ಯವಹಾರ ಆಮೆಗತಿಯಲ್ಲಿ ಸಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರುತ್ಸಾಹ ಮೂಡಲಿದೆ.

ಮಕರ / ವ್ಯವಹಾರ ಪೂರ್ಣಗೊಳಿಸುವಿರಿ. ಸಮಾಜದಲ್ಲಿ ಗೌರವ ಲಭಿಸಲಿದೆ. ಪ್ರಮುಖ ಮಾಹಿತಿ ಲಭ್ಯವಾಗಲಿವೆ. ಸಂದರ್ಶನಗಳಿಗೆ ಕರೆ ಬರಲಿದೆ. ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮುನ್ನಡೆ ಸಾಧಿಸುವಿರಿ.

ಕುಂಭ / ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ಕೆಲಸಕ್ಕೆ ಚಾಲನೆ ನೀಡುವಿರಿ. ಶುಭವಾರ್ತೆಬರಲಿವೆ. ಉದ್ಯೋಗ ಮತ್ತು ವ್ಯಾಪಾರ ತೃಪ್ತಿದಾಯಕವಾಗಿರಲಿವೆ.

ಮೀನ / ಕೆಲವು ಕೆಲಸ ಮುಂದೂಡಲ್ಪಡಲಿವೆ. ಆಲೋಚನೆ ಫಲಕಾರಿಯಾಗುವುದಿಲ್ಲ. ಜವಾಬ್ದಾರಿ ಹೆಚ್ಚಾಗಲಿವೆ. ಒತ್ತಡ ಎದುರಾಗಲಿವೆ. ದೇವಾಲಯಗಳಿಗೆ ಭೇಟಿ. ಉದ್ಯೋಗ ಹಾಗೂ ವ್ಯಾಪಾರ ಸಾಧಾರಣವಾಗಿರಲಿದೆ.

Today's Daily Horoscope and Panchanga Check Your Rasi Phala  ಇಂದಿನ ದಿನಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹಾಗೂ ಪಂಚಾಂಗದ ಸಂಪೂರ್ಣ ವಿವರ
Today’s Daily Horoscope and Panchanga Check Your Rasi Phala  ಇಂದಿನ ದಿನಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹಾಗೂ ಪಂಚಾಂಗದ ಸಂಪೂರ್ಣ ವಿವರ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

END OF STORY

ajjimane ganesh

Senior Journalist | Malenadu Today
✓ Verified Journalist