ಮೆಗ್ಗಾನ್ ಆಸ್ಪತ್ರೆಯಲ್ಲಿ 5 ಕೋಟಿ ವೆಚ್ಚದ ಎನ್‌ಐಸಿ! ಮಕ್ಕಳ ಚಿಕಿತ್ಸೆಗೆ ಇದು ಅವಶ್ಯಕ! ಸಂಸದರು ನೀಡಿದ್ರು ಗುಡ್ ನ್ಯೂಸ್

ಹಂಚಿಕೊಳ್ಳಿ
WhatsApp Facebook X Telegram
ಮೆಗ್ಗಾನ್ ಆಸ್ಪತ್ರೆಯಲ್ಲಿ 5 ಕೋಟಿ ರೂ. ವೆಚ್ಚದ ನೂತನ ಎನ್‌ಐಸಿಯು ಘಟಕ ಸ್ಥಾಪನೆ Shivamogga Rs 5 Crore Advanced NICU Facility to be Setup at McGann Hospital

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್​ಐಸಿ ಘಟಕ ಸ್ಥಾಪನೆಮಾಡಲಾಗುತ್ತಿದೆ. ಈ ವಿಷಯವನ್ನು ಸ್ವತಃ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಇದರಿಂದ ಅವಧಿಗೂ ಮುನ್ನ ಜನಿಸಿದ, ತೂಕ ಕಡಿಮೆ ಇರುವ ಅಥವಾ ಉಸಿರಾಟದ ತೊಂದರೆ ಹೊಂದಿರುವ ನವಜಾತ ಶಿಶುಗಳ ಟ್ರೀಟ್ಮೆಂಟ್​ಗೆ ಅನುಕೂಲವಾಗಲಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ 5 ಕೋಟಿ ವೆಚ್ಚದ ಕಾಮಗಾರಿ

ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಎಂಪಿ ರಾಘವೇಂದ್ರ ಮೆಗ್ಗಾನ್​ ಸಂಸ್ಥೆಯ ಮಕ್ಕಳ ವಿಭಾಗಕ್ಕೆ ಹೊಸದಾಗಿ 30 ಹಾಸಿಗೆ ಸಾಮರ್ಥದ NIC ಘಟಕ ಸ್ಥಾಪಿಸುವುದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರ ಕೋಟಿ ಅನುದಾನ ನೀಡಿದ್ದಾರೆ. ಒಟ್ಟು 5 ಕೋಟಿ ಮಂಜೂರು ಮಾಡಿದ್ದಾರೆ ಅಂತಾ ತಿಳಿಸಿದ್ದಾರೆ.

ಎನ್‌ಐಸಿಯು ಸ್ಥಾಪನೆಯಿಂದ ಸಮಸ್ಯೆಯುಳ್ಳ ನವಜಾತ ಶಿಶುಗಳ ಬದುಕುಳಿಯುವ ಪ್ರಮಾಣವನ್ನು ಬಹಳ ಮಟ್ಟಿಗೆ ಹೆಚ್ಚಿಸುತ್ತದೆ. ಇನ್ಕ್ಯುಬೇಟರ್, ವೆಂಟಿಲೇಟರ್ ಗಳು, ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಮುಂತಾದ ಸುಧಾರಿತ ಉಪಕರಣಗಳನ್ನು ಬಳಸಿ ಮಗುವಿನ ದೇಹದ ಉಷ್ಣತೆ, ಉಸಿರಾಟ ಮತ್ತು ಆರೋಗ್ಯವನ್ನು ನಿರ್ವಹಿಸ ಬಹುದು. 24X7 ಮಾನಿಟರಿಂಗ್ ನೊಂದಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ

ಬಿ.ವೈ.ರಾಘವೇಂದ್ರ, ಸಂಸದರು ಶಿವಮೊಗ್ಗ

ಆರ್ ಡಿ ಪಿ ಆರ್ ವತಿಯಿಂದ ಕಾಮಗಾರಿ ಈ ನಡೆಯಲಿದ್ದು, ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ರೂ. 4.40 ಕೋಟಿ ಉಪಕರಣಗಳಿಗೆ ಖರ್ಚಾಗಲಿದ್ದು, 60 ಇತರೇ ವೆಚ್ಚಕ್ಕೆ ಮೀಸಲಾಗಲಿದೆ. ಇದಷ್ಟೆ ಅಲ್ಲದೆ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ರೂ. 60 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ವಾರ್ಡ್ ನಿರ್ಮಾಣ ಮಾಡಲಾಗುತ್ತಿದೆ. ಹಾಗೂ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ವಾಗಲಿದೆ.

ಸಂಸದರು ಈ ಸಂಬಂಧ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್, ಸಿಮ್ಸ್ ನಿರ್ದೇಶಕ ಡಾ ವಿರೂಪಾಕ್ಷಪ್ಪ, ಮೆಗ್ಗಾನ್ ವೈದ್ಯ ಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಜಿಲ್ಲಾ ಸರ್ಜನ್ ಡಾ. ಗೀತಾ, ಡಿಹೆಚ್ಓ ಡಾ.ನಟರಾಜ್, ಸಿಮ್ಸ್ ಸಿಎಓ ಉಮಾ ಸದಾಶಿವ ಇದ್ದರು.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಮೆಗ್ಗಾನ್ ಆಸ್ಪತ್ರೆಯಲ್ಲಿ 5 ಕೋಟಿ ರೂ. ವೆಚ್ಚದ ನೂತನ ಎನ್‌ಐಸಿಯು ಘಟಕ ಸ್ಥಾಪನೆ Shivamogga Rs 5 Crore Advanced NICU Facility to be Setup at McGann Hospital
ಮೆಗ್ಗಾನ್ ಆಸ್ಪತ್ರೆಯಲ್ಲಿ 5 ಕೋಟಿ ರೂ. ವೆಚ್ಚದ ನೂತನ ಎನ್‌ಐಸಿಯು ಘಟಕ ಸ್ಥಾಪನೆ Shivamogga Rs 5 Crore Advanced NICU Facility to be Setup at McGann Hospital
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor