ಸಂಚಾರ ಸುರಕ್ಷತೆಗೆ ನಗರದಾದ್ಯಂತ ಟ್ರಾಫಿಕ್ ಸೈನ್ ಬೋರ್ಡ್! ಇನ್ಮೇಲೆ ಪ್ರಶ್ನೆ ಮಾಡಂಗಿಲ್ಲ! ಯಾಕೆ ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
ಸಂಚಾರ ಸುರಕ್ಷತೆಗೆ ನಗರದಾದ್ಯಂತ ಟ್ರಾಫಿಕ್ ಸೈನ್ ಬೋರ್ಡ್! ಇನ್ಮೇಲೆ ಪ್ರಶ್ನೆ ಮಾಡಂಗಿಲ್ಲ! ಯಾಕೆ ಗೊತ್ತಾ Shivamogga Traffic Police Install New Signboards Across City for Road Safety
ಸಂಚಾರ ಸುರಕ್ಷತೆಗೆ ನಗರದಾದ್ಯಂತ ಟ್ರಾಫಿಕ್ ಸೈನ್ ಬೋರ್ಡ್! ಇನ್ಮೇಲೆ ಪ್ರಶ್ನೆ ಮಾಡಂಗಿಲ್ಲ! ಯಾಕೆ ಗೊತ್ತಾShivamogga Traffic Police Install New Signboards Across City for Road Safety

ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮತ್ತಷ್ಟು ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಜನರ ಕಂಪ್ಲೆಂಟ್​ಗೆ ಸಂಬಂಧಿಸಿದಂತೆ ಕ್ರಮ ವಹಿಸಿದ್ದಾರೆ. ಏನ್​ ಇಲ್ಲಿ ಬೋರ್ಡ್​ ಹಾಕಿದ್ದಾರಾ? ನೋ ಪಾರ್ಕಿಂಗ್​ ಅಂತಾ ಎಲ್ಲಿ ಬರೆದಿದ್ದಾರೆ? ಸಾರ್ ನನಗೆ ಗೊತ್ತಾಗಿಲ್ಲ. ಬೋರ್ಡ್ ಆದರೂ ಹಾಕ್ಬೇಕಲ್ವಾ! ಹೀಗೆಲ್ಲಾ ಇನ್ಮೇಲೆ ಕೇಳಂಗಿಲ್ಲ. ಏಕೆಂದರೆ ನೋ ಪಾರ್ಕಿಂಗ್​ ಸೇರಿದಂತೆ ವಿವಿಧ ರೀತಿಯ ಸೈನ್ ಬೋರ್ಡ್​ಗಳನ್ನ ಟ್ರಾಫಿಕ್ ಪೊಲೀಸರು ನಗರದ ಹಲವೆಡೆ ಅಳವಡಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.

ಶಿವಮೊಗ್ಗ ಟ್ರಾಫಿಕ್ ಪೊಲೀಸ್

ಎಲೆಲ್ಲಿ ಅಳವಡಿಸಲಾಗಿದೆ ಟ್ರಾಫಿಕ್ ಸೈನ್ ಬೋರ್ಡ್

ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಬರುವ ಹಾಗೂ ಶಿವಮೊಗ್ಗ ಉಪವಿಭಾಗ-ಎ ಮತ್ತು ಶಿವಮೊಗ್ಗ ಉಪವಿಭಾಗ-ಬಿ ವ್ಯಾಪ್ತಿಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 60 ರಿಫ್ಲೆಕ್ಟರ್ ಸೈನ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ, ರಾತ್ರಿ ವೇಳೆಯೂ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವ ಬೋರ್ಡ್​ಗಳನ್ನ ರೆಡಿಮಾಡಲಾಗಿದೆ.

ನಗರದ ಆಲ್ಕೊಳ, ನವುಲೆ, ವಿನೋಬನಗರ, ದುರ್ಗಿಗುಡಿ, ಹರಕೆರೆ, ಹೊಳೆಬೆನವಳ್ಳಿ ಹಾಗೂ ಹರಿಹರ ರಸ್ತೆ ಸೇರಿದಂತೆ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಇರುವ ಹಲವೆಡೆ ಈ ನಾಮಫಲಕಗಳನ್ನು ಅಳವಡಿಸಲಾಗಿದೆ.

ವಾಹನ ಸವಾರರು ಸಿಸಿಟಿವಿ ಕಣ್ಗಾವಲಿನಲ್ಲಿದ್ದಾರೆ ಎಂಬ ಎಚ್ಚರಿಕೆ ಫಲಕಗಳು, 100 ಮೀಟರ್ ವ್ಯಾಪ್ತಿಯಲ್ಲಿ ‘ವಾಹನ ನಿಲುಗಡೆ ನಿಷೇಧಿಸಿದೆ’ (No Parking), ಗಂಟೆಗೆ 60 ಕಿ.ಮೀ ‘ವೇಗದ ಮಿತಿ’ (Speed Limit) ಹಾಗೂ ‘ಏಕಮುಖ ಸಂಚಾರ’ (One Way) ಕುರಿತ ಬೋರ್ಡ್‌ಗಳನ್ನು ವಿಶೇಷವಾಗಿ ಹಾಕಲಾಗಿದೆ.

ಇನ್ನೂ ಶಾಲಾ ವಲಯಗಳಲ್ಲಿ ವಾಹನಗಳನ್ನು ‘ನಿಧಾನವಾಗಿ ಚಲಿಸಿ’ ಎಂದು ಸೂಚಿಸುವ ಫಲಕ, ಪದೇ ಪದೇ ಅಪಘಾತ ಸಂಭವಿಸುವ ಜಾಗದಲ್ಲಿ ‘ಅಪಘಾತ ವಲಯ’ (Accident prone zone) ಮುನ್ನೆಚ್ಚರಿಕೆ ಬೋರ್ಡ್ ಗಳು ಸೇರಿದಂತೆ, ಮದ್ಯಪಾನ ಮಾಡಿ ವಾಹನ ಚಲಾಯಿಸದಿರುವಂತೆ ಹಾಗೂ ಚಾಲನೆ ವೇಳೆ ಮೊಬೈಲ್ ಬಳಸದಂತೆ ಎಚ್ಚರಿಸುವ ಫಲಕಗಳನ್ನು ಅಳವಡಿಸಲಾಗಿದೆ.

ವಿನೋಬನಗರ ಸೇರಿದಂತೆ ಕೆಲವು ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ‘ಭಾರಿ ವಾಹನಗಳ ಪ್ರವೇಶ ನಿಷೇಧಿಸಿ’ (Heavy Vehicle No Entry) ಬೋರ್ಡ್ ಹಾಕಲಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.

[su_image_carousel source=”media: 34435,34436,34437,34438,34439,34440,34441,34442″ controls_style=”light” crop=”16:9″ target=”self”]

ಸಂಚಾರ ಸುರಕ್ಷತೆಗೆ ನಗರದಾದ್ಯಂತ ಟ್ರಾಫಿಕ್ ಸೈನ್ ಬೋರ್ಡ್! ಇನ್ಮೇಲೆ ಪ್ರಶ್ನೆ ಮಾಡಂಗಿಲ್ಲ! ಯಾಕೆ ಗೊತ್ತಾShivamogga Traffic Police Install New Signboards Across City for Road Safety
ಸಂಚಾರ ಸುರಕ್ಷತೆಗೆ ನಗರದಾದ್ಯಂತ ಟ್ರಾಫಿಕ್ ಸೈನ್ ಬೋರ್ಡ್! ಇನ್ಮೇಲೆ ಪ್ರಶ್ನೆ ಮಾಡಂಗಿಲ್ಲ! ಯಾಕೆ ಗೊತ್ತಾ
Shivamogga Traffic Police Install New Signboards Across City for Road Safety

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor