ಸ್ಮಾರ್ಟ್ ಸಿಟಿ ಕ್ಯಾಮೆರಾ ನಂಬರ್ ಪ್ಲೇಟ್​ನಲ್ಲಿ ಟೆಕ್ನಾಲಿಜಿಯಾ ಟ್ರಿಕ್​ ಮಾಡಿ ಬೈಕ್ ಸವಾರ ! ಈ ಐಡಿಯಾ ನೀವ್ ಮಾಡ್ಬೇಡಿ

ಹಂಚಿಕೊಳ್ಳಿ
WhatsApp Facebook X Telegram
ಸ್ಮಾರ್ಟ್ ಸಿಟಿ ಕ್ಯಾಮೆರಾ ನಂಬರ್ ಪ್ಲೇಟ್​ನಲ್ಲಿ ಟೆಕ್ನಾಲಿಜಿಯಾ ಟ್ರಿಕ್​ ಮಾಡಿ ಬೈಕ್ ಸವಾರ ! ಈ ಐಡಿಯಾ ನೀವ್ ಮಾಡ್ಬೇಡಿ Shivamogga Biker Caught by Smart City Camera for Pasting Sticker on Number Plate
ಸ್ಮಾರ್ಟ್ ಸಿಟಿ ಕ್ಯಾಮೆರಾ ನಂಬರ್ ಪ್ಲೇಟ್​ನಲ್ಲಿ ಟೆಕ್ನಾಲಿಜಿಯಾ ಟ್ರಿಕ್​ ಮಾಡಿ ಬೈಕ್ ಸವಾರ ! ಈ ಐಡಿಯಾ ನೀವ್ ಮಾಡ್ಬೇಡಿ Shivamogga Biker Caught by Smart City Camera for Pasting Sticker on Number Plate

ಶಿವಮೊಗ್ಗ ಸಿಟಿಯಲ್ಲಿ ಸ್ಮಾರ್ಟ್ ಸಿಟಿ ಸಿಸಿ ಕ್ಯಾಮರಾದಿಂದ ತಪ್ಪಿಸಿಕೊಳ್ಳೋಕೆ ಜನ ಏನೆಲ್ಲಾ ಪ್ಲಾನ್ ಮಾಡ್ತಾರೆ ಅನ್ನೋದು ಪೊಲೀಸರಿಗೂ ಗೊತ್ತಿದೆ. ಎಷ್ಟೆ ಆಗಲಿ ಅವರು ಓದಿ ಎಕ್ಸಾಮ್​ ಪಾಸ್ ಮಾಡಿ, ಟ್ರೈನಿಂಗ್​ ತಗೊಂಡು ಪೊಲೀಸ್ ಆದವರು. ಅಂತಹ ಪೊಲೀಸರಿಗೆ ನಂಬರ್​ ಪ್ಲೇಟ್​ ಕಾಣದಂತೆ ಮಾಡಿ ಯಾಮಾರಿಸೋ ಪ್ಲಾನ್ ಮಾಡುವ ಕಾಮನ್ ಮ್ಯಾನ್​ಗಳ ಟೆಕ್ನಾಲಿಜಿಯಾದಂತಹ ಬುದ್ದಿ ಗೊತ್ತಾಗದೆ ಇರುತ್ತಾ! ಸದ್ಯ ಇದೇ ರೀತಿಯಲ್ಲಿ ನಂಬರ್ ಪ್ಲೇಟ್ ಕಾಣದಂತೆ ಮಾಡಲು ಹೋಗಿದ್ದ ಯುವಕನೊಬ್ಬ ಅದೆ ಕ್ಯಾಮರಾದ ಸಹಾಯದಿಂದಲೇ ಸಿಕ್ಕಿಬಿದ್ದು ದಂಡ ಕಟ್ಟಿದ್ದಾನೆ.

ಸ್ಮಾರ್ಟ್ ಸಿಟಿ ಕ್ಯಾಮೆರಾದಲ್ಲೆ ಸಿಕ್ಕಿಬಿದ್ದ ಸವಾರ

ಹೌದು, ವಾಹನದ ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡು ನಗರದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ತಾಳ್ಮೆಯಿಂದ ಹುಡುಕಿ ಸ್ಟೇಷನ್​ಗೆ ತಂದಿದ್ದಾರೆ. ಅಲ್ಲದೆ ಅದರ ಸವಾನನ್ನು ಕರೆತಂದು ದಂಡದ ರಶೀದಿ ಚೀಟಿ ಹರಿದಿದ್ದಾರೆ. ರಶೀದಿ ಚೀಟಿಯ ಉದ್ದವೇ ಎರಡು ಮೊಳದಷ್ಟಿದೆ.

ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‌ನ ನಿಗಾ ಕ್ಯಾಮೆರಾಗಳಲ್ಲಿ ಕಳೆದ ಏಪ್ರಿಲ್ 21 ರಂದು KA-14 ನೋಂದಣಿ ಸಂಖ್ಯೆಯ ಬೈಕ್ ವೊಂದು ಕಾಣಿಸಿದೆ. ಆ ಬೈಕ್​ನಲ್ಲಿ ನಂಬರ್ ಪ್ಲೇಟ್ ಕಾಣದಂತೆ ಸ್ಟಿಕ್ಕರ್ ಬಳಸಿದ್ದು ಕಮಾಂಡ್ ಸೆಂಟರ್‌ನ ಕ್ಯಾಮೆರಾ ಪರಿಶೀಲನೆ ವೇಳೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಅದರ ಪತ್ತೆಗಾಗಿ ಪೊಲೀಸರು ಬೆನ್ನಬಿದ್ದಿದ್ದಾರೆ.

ಹುಡುಕ್ತಾ ಹೋದಂತೆ ಬೈಕ್ ಹಾಗೂ ಅದರ ಸವಾರ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆತನನ್ನು ಪತ್ತೆ ಮಾಡಿದ ತಂಡ ಸ್ಟೇಷನ್ಗೆ ಕರೆತಂದಿದ್ದಾರೆ. ನಿಯಮ ಉಲ್ಲಂಘನೆ ಬಗ್ಗೆ ಕ್ಯಾಮೆರಾಗಳ ಮೂಲಕ ಸಾಕ್ಷಿ ಸಮೇತ ವಾಹನದ ಮೇಲೆ ದಂಡ ಹಾಕಿದ್ದಾರೆ. ಯುವಕನಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಮತ್ತು ಮೋಟಾರು ವಾಹನ ಕಾಯ್ದೆಯ (ಐಎಂವಿ) ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸ್ಮಾರ್ಟ್ ಸಿಟಿ ಕ್ಯಾಮೆರಾ ನಂಬರ್ ಪ್ಲೇಟ್​ನಲ್ಲಿ ಟೆಕ್ನಾಲಿಜಿಯಾ ಟ್ರಿಕ್​ ಮಾಡಿ ಬೈಕ್ ಸವಾರ ! ಈ ಐಡಿಯಾ ನೀವ್ ಮಾಡ್ಬೇಡಿ Shivamogga Biker Caught by Smart City Camera for Pasting Sticker on Number Plate
ಸ್ಮಾರ್ಟ್ ಸಿಟಿ ಕ್ಯಾಮೆರಾ ನಂಬರ್ ಪ್ಲೇಟ್​ನಲ್ಲಿ ಟೆಕ್ನಾಲಿಜಿಯಾ ಟ್ರಿಕ್​ ಮಾಡಿ ಬೈಕ್ ಸವಾರ ! ಈ ಐಡಿಯಾ ನೀವ್ ಮಾಡ್ಬೇಡಿ Shivamogga Biker Caught by Smart City Camera for Pasting Sticker on Number Plate

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor