ಶಿವಮೊಗ್ಗ : ಮಿಳಘಟ್ಟದಲ್ಲಿ 26 ವರ್ಷದ ಮಹಿಳೆ ಹಾಗೂ 3 ವರ್ಷದ ಮಗು ನಾಪತ್ತೆ : ಮಾಹಿತಿಗಾಗಿ ಪೊಲೀಸ್ ಪ್ರಕಟಣೆ ಗಮನಿಸಿ

Published: 22 ಏಪ್ರಿಲ್ 2026, 4:18 ಅಪರಾಹ್ನ • 1 min read

ಶಿವಮೊಗ್ಗ ನಗರದ ಮಿಳಘಟ್ಟ ಎರಿಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಾಯಿ ಹಾಗೂ ಮಗಳಿಬ್ಬರು ನಾಪತ್ತೆಯಾಗಿರುವ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಕಾಣೆಯಾದವರ ಪತ್ತೆಗಾಗಿ ಸಾರ್ವಜನಿಕರ ನೆರವು ಕೋರಿದೆ. ಪ್ರಕರಣದ ವಿವರ ಹೀಗಿದೆ.

ಏಪ್ರಿಲ್​ 13 ರಂದು ಮಿಳಘಟ್ಟದಲ್ಲಿ ಕಾಣೆ

26 ವರ್ಷ ವಯಸ್ಸಿನ ಅಮಿಜ್ ಸೋಹಾನಿ ನದೀಂ ಪಾಷಾ ಎಂಬಾಕೆ ತನ್ನ 3 ವರ್ಷ 9 ತಿಂಗಳ ವಯಸ್ಸಿನ ಮಗಳು ಐಜಾ ಫಾತೀಮಳನ್ನು ಕರೆದುಕೊಂಡು ಏಪ್ರಿಲ್ 13 ರಂದು ಮನೆಯಿಂದ ಹೊರಟವರು ಇದುವರೆಗೂ ಹಿಂದಿರುಗಿಲ್ಲ. ಈ ಬಗ್ಗೆ ಸಂಬಂಧಿಕರು ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕಾಣೆಯಾದವರ ಗುರುತು

ಕಾಣೆಯಾಗಿರುವ ಅಮಿಜ್ ಸೋಹಾನಿ ಅವರು 5.5 ಅಡಿ ಎತ್ತರವಿದ್ದು, ಕೋಲು ಮುಖ, ಗೋಧಿ ಮೈಬಣ್ಣ ಹಾಗೂ ತೆಳುವಾದ ಮೈಕಟ್ಟು ಹೊಂದಿದ್ದಾರೆ. ಅದೇ ರೀತಿ ಅವರ ಜೊತೆಯಲ್ಲಿರುವ ಮಗು ಐಜಾ ಫಾತಿಮಾ ಕೂಡ 3 ಅಡಿ ಎತ್ತರವಿದ್ದು, ಕೋಲು ಮುಖ ಮತ್ತು ಗೋಧಿ ಮೈಬಣ್ಣವನ್ನು ಹೊಂದಿದ್ದಾಳೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಮಾಹಿತಿ ಸಿಕ್ಕರೆ ಸಂಪರ್ಕಿಸಿ

ಈ ತಾಯಿ ಮತ್ತು ಮಗಳ ಬಗ್ಗೆ ಯಾರಿಗಾದರೂ ಯಾವುದೇ ರೀತಿಯ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯ ಗಮನಕ್ಕೆ ತರಲು ಕೋರಲಾಗಿದೆ. ಸಾರ್ವಜನಿಕರು ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 08182-261414 ಅಥವಾ ಮೊಬೈಲ್ ಸಂಖ್ಯೆ 7348918569 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಶಿವಮೊಗ್ಗ  ಮಿಳಘಟ್ಟದಲ್ಲಿ 26 ವರ್ಷದ ಮಹಿಳೆ ಹಾಗೂ 3 ವರ್ಷದ ಮಗು ನಾಪತ್ತೆ Shivamogga Missing Case Mother and 3-Year-Old Child Missing From Milaghatta
ಶಿವಮೊಗ್ಗ ಮಿಳಘಟ್ಟದಲ್ಲಿ 26 ವರ್ಷದ ಮಹಿಳೆ ಹಾಗೂ 3 ವರ್ಷದ ಮಗು ನಾಪತ್ತೆ Shivamogga Missing Case Mother and 3-Year-Old Child Missing From Milaghatta

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

ajjimane ganesh

Senior Journalist | Malenadu Today
✓ Verified Journalist