ePaper

ಪಹಲ್ಗಾಮ್ ದಾಳಿ & ಶಿವಮೊಗ್ಗ ಮಂಜುನಾಥ್ ರಾವ್, ಮಧು ಬಂಗಾರಪ್ಪ , ಕೆಎಸ್ ಈಶ್ವರಪ್ಪ ಮತ್ತು ಡಾ ರವಿ ಎಂ ಸಾಧನೆ ಇವತ್ತಿನ ಈ ಪತ್ರಿಕೆಯಲ್ಲಿ ಓದಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಪಹಲ್ಗಾಮ್ ದಾಳಿ ಇಂದಿಗೆ ಸರಿಯಾಗಿ 1 ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಹುತಾತ್ಮ ಮಂಜುನಾಥ್ ರಾವ್ ಅವರ ಸ್ಮರಣಾರ್ಥ ಇಂದು ಮಲೆನಾಡು ಟುಡೆ ವಿಶೇಷವಾದ ಆರ್ಟಿಕಲ್​ನ್ನ ಮುಖ್ಯ ಸುದ್ದಿಯಾಗಿ ವರದಿ ಮಾಡಿದೆ.

ಪಹಲ್ಗಾಮ್ ದಾಳಿ : ರಾಜಕೀಯ ಮುಖಂಡರ ಅಭಿಪ್ರಾಯ

2025ರ ಏಪ್ರಿಲ್ 22ರಂದು ನಡೆದಿದ್ದ ಈ ರಕ್ತಪಾತದಲ್ಲಿ ಮೃತಪಟ್ಟಿದ್ದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಕುಟುಂಬ ಇಂದಿಗೂ ಆಘಾತದಲ್ಲಿದೆ. ಮಗನ ಶೈಕ್ಷಣಿಕ ಸಾಧನೆಯನ್ನು ಸಂಭ್ರಮಿಸಲು ಪ್ರವಾಸಕ್ಕೆ ತೆರಳಿದ್ದಾಗ ನಡೆದ ಈ ದುರಂತದ ಕಹಿ ನೆನಪನ್ನು ಹಂಚಿಕೊಂಡಿರುವ ಅವರ ತಾಯಿ ಸುಮತಿ, ತಮ್ಮ ಮಗನ ಅಗಲಿಕೆಯ ನೋವು ಇಡೀ ಕುಟುಂಬವನ್ನು ಕಲ್ಲಾಗಿಸಿದೆ ಎಂದು ರೋದಿಸಿದ್ದಾರೆ.

ಇದೇ ವಿಷಯವಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ , ಸಂಸದ ಬಿ.ವೈ. ರಾಘವೇಂದ್ರ , ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮೃತರ ಕುಟುಂಬದ ಜೊತೆ ನಾವಿದ್ದೇವೆ ಎಂಬ ಭರವಸೆ ನೀಡಿದ್ದಾರೆ.

ಇತ್ತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕೇಂದ್ರ ಸರ್ಕಾರದ ತೆರಿಗೆ ನೀತಿಯನ್ನು ಕಟುವಾಗಿ ಟೀಕಿಸಿದ್ದು, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಮೌನ ವಹಿಸಿರುವುದನ್ನು ಪ್ರಶ್ನಿಸಿದ್ದಾರೆ.

ಮಂಗನ ಕಾಯಿಲೆಯ ನಿಯಂತ್ರಣದ ಬಗ್ಗೆ ಸಚಿವರ ಮಾತು

ಜಿಲ್ಲೆಯ ಆರೋಗ್ಯ ಮತ್ತು ನಾಗರಿಕ ಸಮಸ್ಯೆಗಳ ಕುರಿತು ಮಾಹಿತಿ ನೀಡಿರುವ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಅಥವಾ ಕೆಎಫ್ ಡಿ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 4 ಮಂದಿ ಸಾವನ್ನಪ್ಪಿದ್ದು, ಪ್ರಸ್ತುತ 19 ಸಕ್ರಿಯ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿವೆ. ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿಯಲ್ಲಿ ಪ್ರಕರಣಗಳು ಪತ್ತೆಯಾಗಿದ್ದು, ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ಧಾರೆ.

ಇದಷ್ಟೆ ಅಲ್ಲದೆ ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ ನಿರ್ವಹಿಸಲು 20 ರಿಂದ 30 ಕಡೆಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ಕಾಮಗಾರಿಯು ಆಗಸ್ಟ್ 2026ರ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

ಇವೆಲ್ಲದರ ಜೊತೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿರುವ ಶಿಕಾರಿಪುರದ ಪಶುವೈದ್ಯ ಡಾ. ರವಿ ಎಂ ಅವರು ಥೈಲ್ಯಾಂಡ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. 50 ವರ್ಷ ಮೇಲ್ಪಟ್ಟವರ ವಿಭಾಗದ ಬಟರ್‌ಫ್ಲೈ ಸ್ಟ್ರೋಕ್‌ನಲ್ಲಿ ಚಿನ್ನ ಹಾಗೂ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಅವರು, ತಮ್ಮ ಈ ಯಶಸ್ಸನ್ನು ಮೂಕ ಪ್ರಾಣಿಗಳಿಗೆ ಸಮರ್ಪಿಸಿದ್ದಾರೆ

ಮಲೆನಾಡು ಟುಡೆ ಈ ಪತ್ರಿಕೆ ಓದಿ

ಇಂದಿನ ಮಲೆನಾಡು ಟುಡೆ ಡಿಜಿಟಲ್ ಆವೃತ್ತಿಯಲ್ಲಿ ಪಹಲ್ಗಾಮ್ ದಾಳಿ ಯ ವರ್ಷದ ವರದಿ, ಜಿಲ್ಲೆಯ ಕೆಎಫ್ ಡಿ ಸ್ಥಿತಿಗತಿ, ರಾಜಕೀಯ ಸಂಘರ್ಷ ಹಾಗೂ ಕ್ರೀಡಾ ಸಾಧನೆಯ ಸಂಪೂರ್ಣ ವಿವರಗಳನ್ನು ಪಿಡಿಎಫ್ ರೂಪದಲ್ಲಿ ನೀಡಲಾಗಿದ್ದು, ಓದುಗರು ಇದರ ಸದುಪಯೋಗ ಪಡೆಯಬಹುದಾಗಿದೆ. PDF ಲಿಂಕ್​ಗಾಗಿ ಇಲ್ಲಿ ಕ್ಲಿಕ್ ಮಾಡಿ : malenadutoday epaper PDF link

ಆನ್​ಲೈನ್​ನಲ್ಲಿಯೇ ಓದಿ, ತಕ್ಷಣ ಡೌನ್​ಲೋಡ್ ಮಾಡಿಕೊಳ್ಳಿ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ