ದ್ವಾದಶ ರಾಶಿಗಳ ಸಂಪೂರ್ಣ ದಿನ ಭವಿಷ್ಯ ಯಾರಿಗೆ ಶುಭ? ಯಾರಿಗೆ ಅಶುಭ?

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಶುಕ್ಲ ಪಕ್ಷದ ಪಾಡ್ಯಮಿ ತಿಥಿಯು ಮಧ್ಯಾಹ್ನ 3.35 ರವರೆಗೆ ಇರಲಿದ್ದು, ತದನಂತರ ಬಿದಿಗೆ ಆರಂಭವಾಗಲಿದೆ. ಅಶ್ವಿನಿ ನಕ್ಷತ್ರ ಬೆಳಿಗ್ಗೆ 10.57 ರವರೆಗೆ ಇದ್ದು, ಬಳಿಕ ಭರಣಿ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಘಳಿಗೆ ಮುಂಜಾನೆ 5.02 ರಿಂದ 6.31 ರವರೆಗೆ ಇರಲಿದೆ. ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಮತ್ತು ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ದ್ವಾದಶ ರಾಶಿಗಳ ಸಂಪೂರ್ಣ ದಿನ ಭವಿಷ್ಯ

ಮೇಷ / ಯಶಸ್ಸು ದೊರೆಯಲಿದ್ದು, ಶುಭ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಹಳೆಯ ಮಿತ್ರರ ಭೇಟಿಯಾಗಲಿದ್ದು, ಬಾಕಿ ಇರುವ ಹಣ ಕೈಸೇರಲಿದೆ. ಉದ್ಯೋಗ ಹಾಗೂ ವ್ಯಾಪಾರ ಸುಗಮವಾಗಿ ಸಾಗಲಿವೆ.

ವೃಷಭ / ಒತ್ತಡಗಳನ್ನು ಎದುರಿಸಲಿದ್ದು, ಕೆಲವು ಕೆಲಸ ಮುಂದೂಡಲಿದ್ದಾರೆ. ಮನೆಯೊಳಗೆ ಮತ್ತು ಹೊರಗೆ ಕಿರಿಕಿರಿ ಉಂಟಾಗಲಿದ್ದು, ಅನಾರೋಗ್ಯ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ.

ಕರ್ಕಾಟಕ / ಆರ್ಥಿಕ ಅಭಿವೃದ್ಧಿ , ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದ್ದು, ವ್ಯವಹಾರಗಳಲ್ಲಿ ಪ್ರಗತಿ. ಮನೆಯಲ್ಲಿ ಶುಭ ಕಾರ್ಯ ಜರುಗಲಿದ್ದು, ವಸ್ತು ಲಾಭವಾಗಲಿದೆ. ಉದ್ಯೋಗ, ವ್ಯಾಪಾರ ಸುಗಮವಾಗಿ ಸಾಗಲಿವೆ.

ಸಿಂಹ / ಭಿನ್ನಾಭಿಪ್ರಾಯ ಮೂಡಲಿದ್ದು, ಅನಿರೀಕ್ಷಿತ ಧನವ್ಯಯ. ಕುಟುಂಬದಲ್ಲಿ ಒತ್ತಡ ಹೆಚ್ಚಾಗಲಿದ್ದು, ಕೆಲಸಗಳಲ್ಲಿ ವಿಳಂಬವಾಗಲಿದೆ. ಉದ್ಯೋಗ, ವ್ಯಾಪಾರ ಈ ದಿನ ಸಾಧಾರಣವಾಗಿರಲಿವೆ.

ಸಂಪೂರ್ಣ ದಿನ ಭವಿಷ್ಯ

ಕನ್ಯಾ / ಉದ್ಯೋಗ ಪ್ರಯತ್ನ ಮಂದಗತಿಯಲ್ಲಿ ಸಾಗಲಿದ್ದು, ಕೆಲಸ ಮುಂದೂಡಲಿದ್ದಾರೆ. ಬಂಧು ಮತ್ತು ಮಿತ್ರರೊಂದಿಗೆ ಮಾತುಕತೆಯಲ್ಲಿ ಭಿನ್ನಾಭಿಪ್ರಾಯ ಬರಬಹುದು. ಉದ್ಯೋಗ ಹಾಗೂ ವ್ಯಾಪಾರಗಳಲ್ಲಿ ನಿರುತ್ಸಾಹ ಮೂಡಲಿದೆ

ಮಿಥುನ / ಹೊಸ ವಿಚಾರಗಳನ್ನು ತಿಳಿದುಕೊಳ್ಳಲಿದ್ದು, ಪರಿಸ್ಥಿತಿ ಅನುಕೂಲಕರವಾಗಿರಲಿವೆ. ಆಸ್ತಿ ವಿಚಾರದಲ್ಲಿ ಒಪ್ಪಂದ ಆಗಬಹುದು ಉದ್ಯೋಗ ಹಾಗೂ ವ್ಯಾಪಾರ ಈದಿನ ತೃಪ್ತಿದಾಯಕವಾಗಿರಲಿವೆ.

ತುಲಾ / ಸಹಕಾರ ದೊರೆಯಲಿದ್ದು, ಆಕಸ್ಮಿಕ ಧನಲಾಭ, ಗೌರವ ಮರ್ಯಾದೆ ಹೆಚ್ಚಾಗಲಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ ಕಂಡುಬರಲಿದ್ದು, ಆಸ್ತಿ ವಿವಾದಗಳು ಇತ್ಯರ್ಥವಾಗಲಿವೆ.

ವೃಶ್ಚಿಕ / ಸಮಾಜದಲ್ಲಿ ಗೌರವ ಪ್ರಾಪ್ತವಾಗಲಿದೆ. ಆರ್ಥಿಕ ಪ್ರಗತಿ .ಸಾಲದ ಬಾಧೆಗಳು ದೂರವಾಗಲಿವೆ. ವಸ್ತು ಲಾಭವಾಗಲಿದ್ದು, ಉದ್ಯೋಗ ವ್ಯಾಪಾರ ಸುಗಮವಾಗಿ ಸಾಗಲಿವೆ.

ಧನುಸ್ಸು / ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರಲಿದ್ದು, ಸಾಲಕ್ಕಾಗಿ ಪ್ರಯತ್ನಿಸಲಿದ್ದಾರೆ. ಅನಾರೋಗ್ಯ , ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಲಿವೆ

ಮಕರ / ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆ ಎದುರಾಗಲಿದ್ದು, ಧನವ್ಯಯವಾಗಲಿದೆ. ಶ್ರಮಪಟ್ಟರೂ ತಕ್ಕ ಫಲ ದೊರೆಯದಿರಬಹುದು ಮತ್ತು ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ಮೂಡಲಿವೆ. ಉದ್ಯೋಗ ಹಾಗೂ ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ .

ಕುಂಭ / ಶುಭ ಕಾರ್ಯಗಳಲ್ಲಿ ಭಾಗಿಯಾಗಲಿದ್ದು, ಬರಬೇಕಾದ ಬಾಕಿ ಹಣ ವಸೂಲಾಗಲಿದೆ. ಉದ್ಯೋಗ ಪ್ರಯತ್ನ ಸಕಾರಾತ್ಮಕವಾಗಿರಲಿದ್ದು, ಬಾಲ್ಯದ ಮಿತ್ರರನ್ನು ಭೇಟಿಯಾಗಲಿದ್ದಾರೆ. ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ಪ್ರಗತಿ ಕಂಡುಬರಲಿದೆ.

ಮೀನ / ವ್ಯವಹಾರಗಳಲ್ಲಿ ಸಣ್ಣಪುಟ್ಟ ಅಡೆತಡೆ ಉಂಟಾಗಲಿದ್ದು, ಹಣ ಖರ್ಚಾಗಲಿದೆ. ಆರ್ಥಿಕ ವಿಚಾರ ನಿರಾಸೆ ಮೂಡಿಸಲಿದ್ದು, ಶ್ರಮ ಹೆಚ್ಚಾಗಲಿದೆ. ಮಿತ್ರರೊಂದಿಗೆ ವಿವಾದ ತಲೆದೋರಲಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.

Todays Panchangam and Daily Horoscope Complete Rasi Phala Details ಸಂಪೂರ್ಣ ದಿನ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಸಂಪೂರ್ಣ ವಿವರ.
Todays Panchangam and Daily Horoscope Complete Rasi Phala Details ಸಂಪೂರ್ಣ ದಿನ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಸಂಪೂರ್ಣ ವಿವರ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw